ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂರ್ಣ; ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದ ಮೋದಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂರ್ಣ; ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದ ಮೋದಿ

500 ವರ್ಷಗಳ ಕಾಯುವಿಕೆ ಕೊನೆಗೂ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದ ಬಳಿಕ ಭಾವುಕರಾದ ಪ್ರಧಾನಿ ಮೋದಿ ಅವರು ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ನಮನ ಸಲ್ಲಿಸಿದರು. ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಅದ್ಭುತ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಕುರಿತಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅವರು ಸಂದೇಶ ಪ್ರಕಟಿಸಿದ್ದಾರೆ.

ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಪೂಜೆ ನೆರವೇರಿಸಿದ ಬಳಿಕ ಮೋದಿ ಮಾತನಾಡಿ, ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ. ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನಾವು ಸಮಯ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುವೆ. ಪ್ರಭು ಶ್ರೀರಾಮನ ಆಗಮನದಿಂದ ಇಡೀ ದೇಶ ಸಂಭ್ರಮಗೊಂಡಿದೆ ಎಂದು ಹೇಳಿದರು. ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ಇದು ಸಾಮಾನ್ಯ ಸಮಯವಲ್ಲ, ಇವು ಶಾಶ್ವತವಾದ ಶಾಯಿಯಿಂದ ಕಾಲಚಕ್ರದಲ್ಲಿ ಕೆತ್ತಲಾದ ಅಳಿಸಲಾಗದ ಸ್ಮರಣೆಯ ರೇಖೆಗಳಾಗಿವೆ. ರಾಮನ ಕೆಲಸ ಎಲ್ಲಿ ನಡೆದರೂ ಅಲ್ಲಿ ಹನುಮಂತನು ಖಂಡಿತವಾಗಿಯೂ ಇರುತ್ತಾನೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾನು ರಾಮಭಕ್ತ ಹನುಮಂತನಿಗೆ ನಮಸ್ಕರಿಸುತ್ತೇನೆ. ನಾನು ತಾಯಿ ಜಾನಕಿ, ಲಕ್ಷ್ಮಣ, ಭರತ ಮತ್ತು ಶತ್ರುಘ್ನನಿಗೆ ನಮಸ್ಕರಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ. ಈ ಕ್ಷಣದಲ್ಲಿ ನಾನು ದೈವಿಕ ಭಾವನೆ ಹೊಂದಿದ್ದೇನೆ. ಆ ದಿವ್ಯ ಆತ್ಮಗಳು, ಆ ದಿವ್ಯ ವ್ಯಕ್ತಿತ್ವಗಳೂ ನಮ್ಮ ಸುತ್ತಲೂ ಇರುತ್ತವೆ. ಅವರೆಲ್ಲರಿಗೂ ನಾನು ನಮಸ್ಕರಿಸುತ್ತೇನೆ. ಇಂದು ನಮ್ಮ ರಾಮ ಬಂದಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನ, ಶ್ರಮದ ಫಲವಾಗಿ ಪ್ರಭು ಶ್ರೀರಾಮ ಚಂದ್ರ ಮತ್ತೆ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ. ಈ ಶುಭ ಘಳಿಗೆ ಹಿನ್ನೆಲೆ ಎಲ್ಲರಿಗೂ ಶುಭಾಶಯ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ, ಮಾತುಗಳೇ ಹೊರಳದೇ ನನ್ನ ಕಂಠ ತುಂಬಿ ಬರುತ್ತಿದೆ ಎಂದು ಮೋದಿ ಭಾವುಕರಾಗಿದ್ದಾರೆ.

ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್​​ನಲ್ಲಿ ಇರಲ್ಲ, ನಮ್ಮ ರಾಮ ಲಲ್ಲಾ ದಿವ್ಯ ಮಂದಿರದಲ್ಲಿ ಇರಲಿದ್ದಾನೆ. ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು ಕೇವಲ ದಿನಾಂಕ ಅಲ್ಲ, ಹೊಸ ಕಾಲಚಕ್ರದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು. ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ ಎಂದು ಹೇಳಿದರು. ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ. ಇಂದು ಇಡೀ ದೇಶ ಇಂದು ರಾಮ ದೀಪಾವಳಿ ಆಚರಿಸುತ್ತಿದೆ. ದೇಶದ ಪ್ರತಿ ಮನೆಯಲ್ಲೂ ಇಂದು ಸಂಜೆ ಶ್ರೀರಾಮನ ಜ್ಯೋತಿ ಬೆಳಗಲಿದೆ. ಕಾಲಚಕ್ರ ಮತ್ತೆ ಬದಲಾವಣೆಯಾಗಿದೆ. ನನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ ಎಂದು ಹೇಳಿದರು. ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ. ಶ್ರೀರಾಮ ಬೆಂಕಿಯಲ್ಲ, ಶ್ರೀರಾಮ ಶಕ್ತಿ. ಶ್ರೀರಾಮ ವಿವಾದ ಅಲ್ಲ, ರಾಮ ಸಮಾಧಾನ. ಶ್ರೀರಾಮ ವರ್ತಮಾನ ಅಲ್ಲ, ಅನಂತಕಾಲ. ಅಯೋಧ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಪ್ರತಿಷ್ಠಾಪನೆಯಾಗಿದೆ.

ಶ್ರೀರಾಮ ಭಾರತದ ಚೇತನ ಅಷ್ಟೇ ಅಲ್ಲ ಚಿಂತನ ಕೂಡ. ರಾಮ ವ್ಯಾಪಕ, ವಿಶ್ವ, ವಿಶ್ವಾತ್ಮ, ಪ್ರವಾಹ, ಪ್ರಭಾವ ಕೂಡ ಆಗಿದ್ದಾನೆ. ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಿದೆ, ಈಗ ಮುಂದೆ ಏನು? ಕಾಲಚಕ್ರ ಬದಲಾಗುತ್ತಿದೆ. ಮುಂದಿನ ಪೀಳಿಗೆ ನಮ್ಮ ಕಾರ್ಯವನ್ನು ಸಾವಿರ ವರ್ಷ ಕಾಲ ನೆನಪು ಇಡುತ್ತವೆ. ದೇವನಿಂದ ದೇಶ, ರಾಮನಿಂದ ರಾಷ್ಟ್ರದ ಚೇತನ ವಿಸ್ತಾರಗೊಳ್ಳಬೇಕಿದೆ. ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮ ಆಗುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Previous Post
ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಾಘಾತ: ಜೀವ ಉಳಿಸಿದ ಭಾರತೀಯ ವಾಯುಪಡೆ
Next Post
ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ಕಾನೂನನ್ನು ಮೀರುವುದಿಲ್ಲ: ರಾಹುಲ್ ಗಾಂಧಿ

Recent News