ಅಯೋಧ್ಯೆ ಶ್ರೀರಾಮ ಮಂದಿರ: ಜ.22ರಂದು 9000 ಸ್ಕ್ರೀನ್‌ಗಳಲ್ಲಿ ಉದ್ಘಾಟನೆ ನೇರ ಪ್ರಸಾರಕ್ಕೆ ನಿರ್ಧಾರ

ಅಯೋಧ್ಯೆ ಶ್ರೀರಾಮ ಮಂದಿರ: ಜ.22ರಂದು 9000 ಸ್ಕ್ರೀನ್‌ಗಳಲ್ಲಿ ಉದ್ಘಾಟನೆ ನೇರ ಪ್ರಸಾರಕ್ಕೆ ನಿರ್ಧಾರ

ನವದೆಹಲಿ, ಜನವರಿ 19: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಮೊನ್ನೆಯಷ್ಟೇ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿರುವ ಸರ್ಕಾರ ಇದೀಗ ಉದ್ಘಾಟನೆ ಸಮಾರಂಭದ ನೇರಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಹೌದು, ಕೇಂದ್ರ ಸರ್ಕಾರವು ಜನವರಿ 22 ಅಯೋಧ್ಯೆಯಲ್ಲಿ ನಡೆಯಲಿರುವ ಶ್ರಿರಾಮ ಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೇಶಾದ್ಯಂತ ಕನಿಷ್ಠ ಸುಮಾರು 9,000 ಸ್ಕ್ರೀನ್‌ಗಳಲ್ಲಿ ಸಾರ್ವಜನಿಕರಿಗೆ ನೇರ ಪ್ರಸಾರ ಮಾಡಲು ಸಿದ್ಧತೆ ನಡೆಸಿದೆ. ಈ ಸಂಬಂಧ ಸೂಚನೆ ನೀಡಲಾಗಿದೆ ಎಂದು ಎನ್‌ಐಎ ವರದಿ ಮಾಡಿದೆ.

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭ ಭಾರತದ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ರೈಲ್ವೆ (Indian Railways) ತಿಳಿಸಿದೆ. ಅದರಂತೆ ದೇಶದ ರೈಲು ನಿಲ್ದಾಣಗಳ ಪೈಕಿ ಕನಿಷ್ಠ ಸುಮಾರು 9,000 ಸ್ಕ್ರೀನ್‌ಗಳು ಲಭ್ಯವಿವೆ ಅದರಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಮುಂಬರುವ ಸೋಮವಾರ ಜನವರಿ 22 ರಂದು ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ರಜೆ ನೀಡಲಾಗಿದೆ. ಈ ನಿಮಿತ್ತ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಅಧಿಸೂಚನೆ ಹೊರಡಿಸಿತು. ಕೇಂದ್ರ ಸರ್ಕಾರಿ ಕಚೇರಿಗಳು ಮಧ್ಯಾಹ್ನ 02.30 ರವರೆಗೆ ಅರ್ಧ ದಿನ ಮುಚ್ಚಿರಲಿವೆ.

ಪ್ರಧಾನಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮಂಗಳವಾರದಿಂದಲೇ ಶ್ರೀರಾಮ ಮಂದಿರದಲ್ಲಿ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ. ಗುರುವಾರ ರಾಮಲಲ್ಲಾನ ವಿಗ್ರಹವನ್ನು ಗರ್ಭಗುಡಿಯಲ್ಲಿ ಇಡಲಾಗಿದೆ. ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ಜನವರಿ 22ರಂದು ನಡೆಯಲಿದೆ. ದೇಶಾದ್ಯಂತ ಇದರ ಸಂಭ್ರಮಾಚರಣೆ ನಡೆಯಲಿದೆ. ವಿವಿಧ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯಲಿವೆ. ಇದೇ ವೇಳೆ ರಜೆ ನೀಡುವ ಮೂಲಕ ಸರ್ಕಾರಿ ನೌಕರರನ್ನು ಈ ಸಂಭ್ರಮದಲ್ಲಿ ಸಕ್ರಿಯಗೊಳಿಸಲಾಗುತ್ತಿದೆ. ಜನವರಿ 22 ಎಂದು ಮಧ್ಯಾಹ್ನ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಅರ್ಧಕ್ಕೆ ಮುಚ್ಚಲು ತೀರ್ಮಾನಿಸಲಾಗಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಈ ರಾಮ ಮಂದಿರ ಲೋಕಾರ್ಪಣೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಅಂದು (ಜನವರಿ 22) ಅಯೋಧ್ಯೆ ಶ್ರೀಮಂದಿರದಲ್ಲಿ ಮಧ್ಯಾಹ್ನ ‘ಅಭಿಜಿತ್ ಮುಹೂರ್ತ’ದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

Previous Post
ಅನ್ನಪೂರ್ಣಿ ವಿವಾದ, ಹಿಂದುಗಳಲ್ಲಿ ನಟಿ ನಯನತಾರಾ ಕ್ಷಮೆಯಾಚನೆ
Next Post
ಈ ನಾಲ್ಕು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡ : ಕ್ಷೇತ್ರಗಳ ವಿವರ ನೀಡಿದ ಹೆಚ್‌ ಡಿ ಕುಮಾರಸ್ವಾಮಿ 

Recent News