ಆಲಿಯಾ ಭಟ್ ಧರಿಸಿದ್ದ ರಾಮಾಯಣ ಥೀಮ್ ಮೈಸೂರು ಸಿಲ್ಕ್ ಸೀರೆ ತಯಾರಾಗಿದ್ದು ಹೇಗೆ ಗೊತ್ತಾ?: ವಿವರಗಳು

ಆಲಿಯಾ ಭಟ್ ಧರಿಸಿದ್ದ ರಾಮಾಯಣ ಥೀಮ್ ಮೈಸೂರು ಸಿಲ್ಕ್ ಸೀರೆ ತಯಾರಾಗಿದ್ದು ಹೇಗೆ ಗೊತ್ತಾ?: ವಿವರಗಳು

ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಮೇಲೆ ಎಲ್ಲರ ಗಮನ ನೆಟ್ಟಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ನಟಿ ಧರಿಸಿದ್ದ ರೇಷ್ಮೆ ಸೀರೆಯತ್ತ ಎಲ್ಲರ ದೃಷ್ಠಿಯಿದ್ದು, ಇದಕ್ಕೆ ಕಾರಣ ಅದರಲ್ಲಿದ್ದ ರಾಮಾಯಣದ ಕಥೆ. ಸೀರೆಯಲ್ಲಿ ಇದ್ದ ರಾಮಾಯಣದ ಕಥೆ ಜನರನ್ನು ಸೆಳೆಯುತ್ತಿದೆ. ನಟಿ ಆಲಿಯಾ ಭಟ್ ಹಲವು ಬಾಲಿವುಡ್ ನಟರೊಂದಿಗೆ ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಹಾಜರಾಗಿದ್ದರು. ಸಮಾರಂಭದಲ್ಲಿ ಆಲಿಯಾ ಭಟ್ ಸುಂದರವಾದ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದು ನಮ್ಮ ರಾಜ್ಯದ ಮೈಸೂರು ಸಿಲ್ಕ್ ಸೀರೆ. ಇದರ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದು, ಅದರಲ್ಲಿನ ರಾಮಾಯಣದ ಕಲಾಕೃತಿಗಳು. ಈ ಸೀರೆ ತಯಾರಾಗಿದ್ದು, ಹೇಗೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆಲಿಯಾ ಭಟ್ ರಾಮಾಯಣ ಥೀಮ್ ಸೀರೆ ತಯಾರಾಗಿದ್ದು ಹೇಗೆ? ನಟಿ ಆಲಿಯಾ ಭಟ್ ಧರಿಸಿದ್ದ ಈ ರಾಮಾಯಣ ಥೀಮ್ ರೇಷ್ಮೆ ಸೀರೆಯನ್ನು ಡಿಸೈನ್ ಮಾಡಿದ್ದು ‘ಮಾಧುರ್ಯ ಡಿಸೈನರ್’. ಇದು ಈ ಸುಂದರವಾದ ಸೀರೆಯನ್ನು ತಯಾರಿಸಿದ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆ. ಈ ಮೈಸೂರು ಸಿಲ್ಕ ಸೀರೆಯ ವಿವರವಾದ ಮಾಹಿತಿಯನ್ನು ಮಾಧುರ್ಯ ಡುಸೈನ್‌ನ ಮುಖ್ಯಸ್ಥರಾದ ಭಾರತಿ ಹರೀಶ್ ಹಂಚಿಕೊಂಡಿದ್ದಾರೆ.

ಮೈಸೂರಿನ ರೇಷ್ಮೆ ಸೀರೆಯಲ್ಲಿ ಆಲಿಯಾ ಭಟ್ ಮಿಂಚು ನೀಲಿ ಬಣ್ಣದ ಈ ಸಿಲ್ಕ್ ಸೀರೆಯ ಸಂಕೀರ್ಣವಾದ ಪಲ್ಲುವನ್ನು ವಿನ್ಯಾಸ ಮಾಡಲು 10 ದಿನಗಳಾಗಿವೆ ಎಂದು ಮಾಧುರ್ಯ ಮುಖ್ಯಸ್ಥರಾದ ಭಾರತಿ ಹರೀಶ್, ‘ರಾಮ ಮಂದಿರ ಉದ್ಘಾಟನೆಗೆ ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯನ್ನು ಆಲಿಯಾ ಭಟ್ ಧರಿಸಿದ್ದರು. ಸೀರೆಯ ಪಲ್ಲುವಿನಲ್ಲಿ ರಾಮಾಯಣ ಕೃತಿಯನ್ನು ಕೈಯಿಂದ ಮುದ್ರಿಸಲಾಗಿದೆ. ಅದರಲ್ಲಿ ನೀವು ರಾಮಾಯಣದಲ್ಲಿ ಉಲ್ಲೇಖಿಸಲಾದ ಪ್ರಮುಖ ಕ್ಷಣಗಳ ಚಿತ್ರಣವನ್ನು ನೋಡಬಹುದು. ರಾಮನು ಶಿವಧನುಷವನ್ನು ಮುರಿಯುವುದು, ರಾಮನನ್ನು ಕಾಡಿಗೆ ಹೋಗುವಂತೆ ಹೇಳುವುದು, ಗಂಗೆಯ ಸೇತುವೆ, ಚಿನ್ನದ ಜಿಂಕೆ ಮತ್ತು ಅಪಹರಣ ಮುಂತಾದ ವಿವರಗಳನ್ನು ಉಲ್ಲೇಖಿಸಲಾಗಿದೆ” ಎಂದು ಹೇಳಿದ್ದಾರೆ.

ರಾಮಾಯಣ ಥೀಮ್‌ ಸೀರೆಯಲ್ಲಿನ ಇತರ ವಿವರಗಳು ರಾಮಾಯಣದ ಘಟನೆಗಳನ್ನು ಮೈಸೂರು ಸಿಲ್ಕ್ ಸೀರೆಯ ಪಲ್ಲು ಮೇಲೆ ಸಂಕೀರ್ಣವಾಗಿ ಚಿತ್ರಿಸಲಾಗಿದೆ. ನಮಗೆ ಇದ್ದ 4 ಇಂಚಿನ ಬಾರ್ಡರ್ ಮೇಲೆ ಕಲಾವಿದರು ರಾಮಾಯಣವನ್ನು ಅಚ್ಚುಕಟ್ಟಾಗಿ ಬರೆದರು. ಇಬ್ಬರು ಕಲಾವಿದರು ಸತತ 10 ದಿನಗಳ ಕಾಲ ಶ್ರಮ ಪಟ್ಟು ಇದನ್ನು ಮಾಡಿದ್ದಾರೆ. ಈ ರೇಷ್ಮೆ ಸೀರೆಯ ಬೆಲೆ ಸುಮಾರು 45,000 ರೂಪಾಯಿ ಎಂದು ಭಾರತಿ ಹರೀಶ್ ಮಾಹಿತಿ ನೀಡಿದ್ದಾರೆ. ಇನ್ನು, ಈ ರಾಮಾಯಣ ಸ್ಫೂರ್ತಿಯ ಸೀರೆಗೆ ಸೂಟ್ ಆಗುವಂತೆ ನಟಿ ಆಲಿಯಾ ಭಟ್ ನೀಲಿ ಬಣ್ಣದ ಶಾಲ್ ಹಾಕಿಕೊಂಡಿದ್ದರು. ಈ ಶಾಲು “ದುಸಾಲಾ ಭಾರತ” ಎಂಬ ಡಿಸೈನರ್ ಶಾಪ್‌ನಿಂದ ತರಲಾಗಿದೆ. ಕಿವಿಯೋಲೆಗಳನ್ನು ‘ನೀತಿ ಸಿಂಗ್ ಜ್ಯೂವೆಲ್ಲರಿ’ ಡಿಸೈನ್ ಮಾಡಿದೆ. ಈ ಸ್ಟೈಲ್‌ಗೆ ಸೂಟ್ ಆಗುವಂತೆ ಆಲಿಯಾ ಹೇರ್‌ಸ್ಟೈಲ್ ಕೂಡ ಅಂದವಾಗಿ ಮಾಡಿಸಿದ್ದರು. ಇದೇ ಬಣ್ಣದ ಬ್ಯಾಗ್ ಕೂಡ ಡಿಸೈನ್ ಮಾಡಿಸಿದ್ದರು. ಜನವರಿ 22 ರ ಅಯೋಧ್ಯೆ ಸಮಾರಂಭಕ್ಕೆ ನಟಿ ಆಲಿಯಾ ಭಟ್ ತನ್ನ ಪತಿ, ನಟ ರಣಬೀರ್ ಕಪೂರ್ ಜೊತೆಗೆ ತೆರಳಿದ್ದರು. ಇನ್ನು, ಕಾರ್ಯಕ್ರಮದ ನೂಕುನುಗಲಿನಲ್ಲಿ ಅವರು ಆಲಿಯಾ ಭಟ್ ಅವರನ್ನು ಪ್ರೊಟೆಕ್ಟ್ ಮಾಡುತ್ತಿದ್ದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೇವಸ್ಥಾನದ ಜನಜಂಗುಳಿಯಲ್ಲಿ ಪತ್ನಿಯನ್ನು ಕೇರ್ ಮಾಡುತ್ತಿದ್ದ ರೀತಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.

Previous Post
ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಂದ ಅಯೋಧ್ಯೆಗೆ ಏಳೂ ವಿಶೇಷ ರೈಲುಗಳು ಸಂಚರಿಸಲಿದೆ
Next Post
1 ಕೋಟಿ ಮನೆಗಳಿಗೆ ಸೌರಫಲಕಗಳ ಅಳವಡಿಕೆ, ಇದರಿಂದಾಗುವ ಲಾಭಗಳೇನು?

Recent News