ಇಂದಿನಿಂದ 29 ರೂ.ಗೆ ಸಿಗಲಿದೆ ಭಾರತ್‌ ಅಕ್ಕಿ : ಎಲ್ಲೆಲ್ಲಿ ಮಾರಾಟ?

ಇಂದಿನಿಂದ 29 ರೂ.ಗೆ ಸಿಗಲಿದೆ ಭಾರತ್‌ ಅಕ್ಕಿ : ಎಲ್ಲೆಲ್ಲಿ ಮಾರಾಟ?

ನವದೆಹಲಿ, ಫೆಬ್ರವರಿ 06: ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಹತ್ವದ ಭಾರತ್‌ ರೈಸಗ ಯೋಜನೆಗಳನ್ನು ಜಾರಿಗೆ ತಂದಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತ್‌ ರೈಸ್‌ , ಭಾರತ್ ದಾಲ್, ಭಾರತ್ ಗೋಧಿ ಹಿಟ್ಟಿನ ಬಳಿಕ ಇದೀಗ ಭಾರತ್ ಅಕ್ಕಿ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಹೌದು, ಮಹತ್ವದ ಯೋಜನೆಯಾದ ಭಾರತ್‌ ರೈಸ್‌ ಯೋಜನೆ ಅಡಿಯಲ್ಲಿ ಕೇವಲ 29 ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದ್ದು, ಇಂದಿನಿಂದಲೇ ದೇಶಾದ್ಯಂತ ಭಾರತ್ ಅಕ್ಕಿಯ ಮಾರಾಟಕ್ಕೆ ಚಾಲನೆ ಸಿಗಲಿದೆ.

ಕಳೆದ ವರ್ಷದಿಂದ ಚಿಲ್ಲರೆ ಅಕ್ಕಿ ಬೆಲೆಯಲ್ಲಿ ಶೇ.15ರಷ್ಟು ಏರಿಕೆಯಾಗಿರುವ ಪರಿಣಾಮ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಗಳವಾರ ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ‘ಭಾರತ್ ಅಕ್ಕಿ’ ಪರಿಚಯಿಸಲು ಸಜ್ಜಾಗಿದೆ. ರಿಯಾಯಿತಿ ದರದ ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ನೀಡಲಾಗುವುದು. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತ್ ಅಕ್ಕಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳು ಮತ್ತು ಇ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ ‘ಭಾರತ್ ರೈಸ್’ ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕೆಜಿ ಹಾಗೂ 10 ಕೆಜಿ ಪ್ಯಾಕೆಟ್ ನಲ್ಲಿ Bharat Rice ಅನ್ನು ಮಾರಾಟ ಮಾಡಲಾಗುತ್ತಿದೆ.

ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (ನಾಫೆಡ್), ನ್ಯಾಷನಲ್ ಕೋ-ಆಪರೇಟಿವ್ ಕಂಜೂಮರ್ ಫೆಡರೇಷನ್ ಆಫ್ ಇಂಡಿಯಾ(ಎನ್ ಸಿಸಿ ಎಫ್) ಮೂಲಕ ಮಾರಾಟ ಮಾಡಲಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಭಾರತ್ ಆಟಾವನ್ನು ಪ್ರತಿ ಕೆಜಿ ಗೆ 27.50 ರೂಪಾಯಿ ಮತ್ತು ಭಾರತ್ ದಾಲ್ ಅನ್ನು ಕೆಜಿ ಗೆ 60 ರೂಪಾಯಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಭಾರತ್ ರೈಸ್ ಯೋಜನೆ ಅಡಿಯಲ್ಲಿ ಹೊಸ ದರದ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಮತ್ತು ಆಹಾರ ಸಂಸ್ಕರಣೆದಾರರಿಗೆ ಈಗಾಗಲೇ ತಿಳಿಸಲಾಗಿದೆ. ಭಾರತ್ ಅಕ್ಕಿ ಯೋಜನೆಗೆ ಇಂದು( ಮಂಳವಾರ) ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಚಾಲನೆ‌ ನೀಡಿದ್ದಾರೆ. ಇದಕ್ಕಾಗಿ ಗೋಡಾನ್ ನಿಂದ ಅಕ್ಕಿ ಪ್ಯಾಕೇಟ್ ಗಳನ್ನು ಲೋಡ್ ಮಾಡಲಾಗುತ್ತಿದೆ. 100 ಗಾಡಿಯಲ್ಲಿ ಅಕ್ಕಿ ಲೋಡ್ ಮಾಡಲಾಗುತ್ತಿದೆ.ಪ್ರತಿ ಗಾಡಿಯಲ್ಲಿ ಸಾವಿರ ಕೆಜಿ ಅಕ್ಕಿ ಲೋಡ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಎಲ್ಲಿ ಮಾರಾಟ? ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟಕ್ಕೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Previous Post
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಗರದಲ್ಲಿ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ರೈಸ್ ಬಿಡುಗಡೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
Next Post
ಕರ್ನಾಟಕ ಮಾದರಿ ಅನುಸರಿಸಲು ಮುಂದಾದ ತೆಲಂಗಾಣ ಸರ್ಕಾರ

Recent News