ಈ ತಿಂಗಳ ೧೯ ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಕಲಬುರಗಿಗೆ ಅವರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ಈ ತಿಂಗಳ ೧೯ ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಕಲಬುರಗಿಗೆ ಅವರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ಬೆಂಗಳೂರು,ಜ.17: ಈ ತಿಂಗಳ ೧೯ ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಕಲಬುರಗಿಗೆ ಅವರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಜ. ೧೯ ರಂದು ಶುಕ್ರವಾರ ದೆಹಲಿಯಿಂದ ಬೆಳಿಗ್ಗೆ ೯.೩೫ಕ್ಕೆ ಕಲಬುರಗಿ ವಿಮಾನನಿಲ್ದಾಣಕ್ಕೆ ಬಂದಿಳಿಯುವ ಪ್ರಧಾನಿ ನರೇಂದ್ರಮೋದಿ ಅವರು, ೯.೪೦ಕ್ಕೆ ಹೆಲಿಕಾಪ್ಟರ್ ಮೂಲಕ ಮಹರಾಷ್ಟ್ರದ ಸೊಲ್ಹಾಪುರಕ್ಕ ತೆರಳಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಧ್ಯಾಹ್ನ ೧ ಗಂಟೆಗೆ ಮತ್ತೆ ಕಲಬುರಗಿ ವಿಮಾನನಿಲ್ದಾಣಕ್ಕೆ ಆಗಮಿಸುವರು.

ಅಲ್ಲಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ೨.೧೦ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ದೇವನಹಳ್ಳಿ ತಾಲ್ಲೂಕಿನ ಭಟ್ಟಮಾರನಹಳ್ಳಿಯಲ್ಲಿರುವ ಬಿಐಇಟಿಸಿ ಕೇಂದ್ರವನ್ನು ಉದ್ಘಾಟನೆ ಮಾಡುವರು. ಇದಾದ ನಂತರ ಸಂಜೆ ೪ ಗಂಟೆಗೆ ಅವರು ಬೆಂಗಳೂರು ವಿಮಾನನಿಲ್ದಾಣದಿಂದ ಚೆನ್ನೈಗೆ ತೆರಳುವರು.

Previous Post
ತಾಯ್ನಾಡಿಗಾಗಿ ಸಂಗೊಳ್ಳಿ ರಾಯಣ್ಣನ ನಡೆಸಿದ ಹೋರಾಟ ನಮಗೆಲ್ಲಾ ಮಾದರಿ: ಸಿ.ಎಂ.ಸಿದ್ದರಾಮಯ್ಯ
Next Post
ಮಕರಜ್ಯೋತಿ ನಂತರವೂ ಶಬರಿಮಲೆಯಲ್ಲಿ ಜನಜಂಗುಳಿ

Recent News