ಕರ್ನಾಟಕದ ಜಿಎಸ್ ಟಿ ಯಲ್ಲಿ ಒಂದೇ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲ ಸೀತರಾಮನ್

ಕರ್ನಾಟಕದ ಜಿಎಸ್ ಟಿ ಯಲ್ಲಿ ಒಂದೇ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲ ಸೀತರಾಮನ್

ನವದೆಹಲಿ : ಕರ್ನಾಟಕದ ಜಿಎಸ್ ಟಿ ಯಲ್ಲಿ ಒಂದೇ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ, ತೆರಿಗೆ ಅನ್ಯಾಯದ ಬಗ್ಗೆ ಕರ್ನಾಟಕ ಜನತೆ ಈ ಪ್ರಶ್ನೆಯನ್ನು ಮಾಡುತ್ತಿಲ್ಲ ತೆರಿಗೆ ಕಟ್ಟುತ್ತಿರುವುದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ ಆದರೆ ರಾಜಕೀಯ ಪಕ್ಷದ ನೇತೃತ್ವದ ಸರಕಾರ ಈ ಪ್ರಶ್ನೆ ಎತ್ತಿದೆ ಕರ್ನಾಟಕ ಸರಕಾರ ಮಾತಾಡುತ್ತಿರುವ ಭಾಷೆ ಜನವಿರೋಧಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತರಾಮನ್ ಹೇಳಿದ್ದಾರೆ.

ದೆಹಲಿಯಲ್ಲಿ ಕಾಂಗ್ರೇಸ್ ಸರ್ಕಾರ ಪ್ರತಿಭಟನೆ ಮಾಡುತ್ತಿದ್ದಂತೆ ಸಂಸತ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕುಟುಂಬವಾದದಲ್ಲೇ ಮುಳುಗಿರುವ ಕಾಂಗ್ರೆಸ್ ಭಾಷೆ ದೇಶವನ್ನು ದಾರಿ ತಪ್ಪಿಸುತ್ತಿದೆ ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಮಾಡಿದೆ ಎಂಬುದು ತಪ್ಪು ಮಾಹಿತಿ, ಕಾಂಗ್ರೆಸ್ ನಾಯಕರ ಹೇಳಿಕರ ಕುಚೇಷ್ಟೆಯಿಂದ ಕೂಡಿದೆ ವಾಸ್ತವಿಕ ಅಂಶಗಳನ್ನು ಹೇಳದೆ ವಿತ್ತೀಯ ಹಕ್ಕುಗಳ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ

15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಆದ ಲಾಭಗಳನ್ನು ಉಲ್ಲೇಖಿಸಿಲ್ಲ, ಕೆಲವು ಕಾಲ್ಪನಿಕ ನಷ್ಟಗಳನ್ನು ಮಾತ್ರ ಹೇಳುತ್ತಿದ್ದಾರೆ ಕೇಂದ್ರ ಹಂಚುವ ಪ್ರತಿ ರಾಜ್ಯದ ಪಾಲು ಆಯೋಗದಿಂದ ಆಯೋಗಕ್ಕೆ ವ್ಯತ್ಯಾಸವಾಗುತ್ತದೆ, ರಾಜ್ಯಗಳ ಮೇಲೆ ಬೀರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯೋಗ ಶಿಫಾರಸ್ಸುಗಳನ್ನು ಮಾಡುತ್ತದೆ. 14 ನೇ ಆಯೋಗದ ಐದು ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು ₹ 1,51,309 ಕೋಟಿಗಳನ್ನು ತೆರಿಗೆ ಹಂಚಿಕೆ ಪಡೆದಿದೆ, ಪ್ರಸ್ತುತ 15 ನೇ ಹಣಕಾಸು ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ, ಅಂದರೆ ಮಾರ್ಚ್, 2024 ರ ವೇಳೆಗೆ ಕರ್ನಾಟಕವು ಈಗಾಗಲೇ ₹ 1,29,854 ಕೋಟಿಗಳನ್ನು ಸ್ವೀಕರಿಸಿದೆ

ಭಾರತ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ₹ 44,485 ಕೋಟಿಗಳನ್ನು ಮತ್ತಷ್ಟು ಬಿಡುಗಡೆ ಮಾಡಲು ಯೋಜಿಸಿದೆ ಹಣಕಾಸು ವರ್ಷ 2024-25 ಸೇರಿ ಐದು ವರ್ಷಗಳಲ್ಲಿ ಒಟ್ಟು ₹ 1,74,339 ಕೋಟಿಗಳನ್ನು ಕರ್ನಾಟಕ ಪಡೆದಂತಾಗಲಿದೆ, ಕರ್ನಾಟಕವು 14ನೇ ಆಯೋಗದ ಅವಧಿಗಿಂತ 15ನೇ ಅವಧಿಯ ಮೊದಲ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚು ಮೊತ್ತವನ್ನು ಪಡೆದಿದೆ. ತನ್ನ ನಷ್ಟದ ಸುಳ್ಳು ಹೇಳಿಕೆಯನ್ನು ಬಲಗೊಳಿಸಲು‌ ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ ಕರ್ನಾಟಕ ಸರ್ಕಾರ ಮುಂದಿನ 2 ಹಣಕಾಸು ವರ್ಷಗಳ ಅಂದರೆ 2024-25 ಮತ್ತು 2025-26 ರ ಕೊರತೆಗಳನ್ನು ಸಹ ಸೇರಿಸಿದೆ

15ನೇ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಮತ್ತೊಂದು ದಕ್ಷಿಣ ರಾಜ್ಯ ಕೇರಳವು ಕೂಡ ಆದಾಯ ಕೊರತೆ ಅನುದಾನವನ್ನು ಪಡೆದಿದೆ, ಇನ್ನೊಂದೆಡೆ, ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಬಿಹಾರ ಯಾವುದೇ ಆದಾಯ ಕೊರತೆ ಅನುದಾನವನ್ನು ಪಡೆದಿಲ್ಲ ಯಾವುದೇ ಪ್ರದೇಶ ಅಥವಾ ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಕೇಂದ್ರಸರ್ಕಾರ ತಾರತಮ್ಯ ಮಾಡಿಲ್ಲ, 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಕಲ್ಪಿಸುವ ಯೋಜನೆಯನ್ನು ಕೇಂದ್ರ ತಂದಿದೆ ಕರ್ನಾಟಕಕ್ಕೆ ಭಾರತ ಸರ್ಕಾರವು ₹ 6,280 ಕೋಟಿ ರೂ ಬಡ್ಡಿ ರಹಿತ ಸಾಲ ನೀಡಿದೆ ಕರ್ನಾಟಕವು 15 ನೇ ಹಣಕಾಸು ಅವಧಿಯಲ್ಲಿ ಇದುವರೆಗಿನ ವಿಪತ್ತು ನಿರ್ವಹಣೆಗೆ 6,196 ಕೋಟಿ ಕೇಂದ್ರದಿಂದ ಪಡೆದಿದೆ ಎಂದರು‌.

ತೆರಿಗೆ ನೀಡಿಲ್ಲ ಎಂದು ಜಾಹೀರಾತು ನೀಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ, ಜಾಹೀರಾತಿನಲ್ಲಿ ಸುಳ್ಳು ಮಾಹಿತಿಯನ್ನು ನೀಡಲಾಗಿದೆ ಅನುದಾನವೇ ನೀಡಿಲ್ಲ ಎಂದು ಸುಳ್ಳು ಹೇಳಾಗುತ್ತಿದೆ ವಿಶೇಷ ಅನುದಾನವನ್ನು ನೀಡಲು ಹಣಕಾಸು ಆಯೋಗ ಶಿಫಾರಸು ಮಾಡಿಲ್ಲ ಅದಾಗ್ಯೂ ಅದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ ಎಂದು ರಾಜ್ಯ ಸರ್ಕಾರದ ಜಾಹೀರಾತಿಗೆ ನಿರ್ಮಲ ಸೀತರಾಮನ್ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಡಿಕೆ ಸುರೇಶ್ ಹೇಳಿಕೆಗೆ ತೀವ್ರವಾಗಿ ಖಂಡಿಸಿದ ಅವರು, ದೇಶ ವಿಭಜಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಲೆ ಇದೆ ಡಿಕೆ ಸುರೇಶ್ ಹೇಳಿಕೆಯನ್ನ ಹಲವಾರು ಜನ ಪುನರುಚ್ಚಾರ ಮಾಡಿದ್ದಾರೆ ತುಕಡೆ ತುಕಡೆ ಗ್ಯಾಂಗ್ ಗೆ ಸಾಥ್ ನೀಡುವವರು ಇವರು ಕಳೆದ ಎರಡು ವರ್ಷಗಳ ಹಿಂದೆ ಜೆಎನ್ ಯು ನಲ್ಲಿ ತುಕಡೆ ಗ್ಯಾಂಗ್ ಜೊತೆ ರಾಹುಲ್ ಗಾಂಧಿ ಸೇರಿಕೊಂಡಿದ್ದರು ದೇಶವನ್ನ ತುಂಡುತುಂಡು ಮಾಡಲೆ ಈ ಅಸ್ತ್ರ ಬಳಸಲಾಗಿದೆ ಅದು ಕರ್ನಾಟಕದಿಂದಲೆ ಶುರು ಮಾಡಲಾಗಿದೆ ಎಂದರು

Previous Post
ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣ: ಮೃತರ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕೆ ಸೂಚನೆ
Next Post
ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ

Recent News