ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನವನ್ನು – 2 ನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದಲ್ಲಿ ಕೇಂದ್ರ ಸರಕಾರದಿಂದ ಶ್ಲಾಘನೆ

ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನವನ್ನು – 2 ನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದಲ್ಲಿ ಕೇಂದ್ರ ಸರಕಾರದಿಂದ ಶ್ಲಾಘನೆ

ಭೋಪಾಲ್ ಜನವರಿ 23: ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಸಾಧನೆ ಮಾಡುವುದಾಗಿ ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.

ಇಂದು 2 ನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2022-23 ನೇ ಸಾಲಿನ ಖನಿಜ ಬ್ಲಾಕಗಳ ಹರಾಜಿನಲ್ಲಿ 3 ನೇ ಬಹುಮಾನ ಪಡೆದುಕೊಂಡು ಉತ್ತಮ ಸಾಧನೆಯನ್ನು ಮಾಡಿದೆ. ಕೇಂದ್ರ ಸರ್ಕಾರದಿಂದ ಶ್ಲಾಘನೆ ದೊರೆತಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ತೋರಿಸುವುದಾಗಿ ಹೇಳಿದ್ದಾರೆ.

ಕಾರ್ಯಕ್ರಮ ದಲ್ಲಿ ಶ್ರೀ ಪ್ರಹ್ಲಾದ್ ಜೋಶಿ ಜಿ ಸಂಸದೀಯ ವ್ಯವಹಾರಗಳ ಗಣಿ ಮತ್ತು ಕಲ್ಲಿದ್ದಲು ಕೇಂದ್ರ ಸಚಿವರು ಶ್ರೀ ಮೋಹನ್ ಯಾದವ್ ಜಿ ಮಧ್ಯಪ್ರದೇಶದ ಮುಖ್ಯಮಂತ್ರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ಅಧಿಕಾರಿಗಳು ಹಾಗೂ ಮಧ್ಯಪ್ರದೇಶದ ಹಿರಿಯ ಅಧಿಕಾರಿಗಳು ಮತ್ತು
ಶ್ರೀ ಗಿರೀಶ್ ಐಎಎಸ್ ನಿರ್ದೇಶಕರು ಉಪಸ್ಥಿತರಿದ್ದರು.

Previous Post
1 ಕೋಟಿ ಮನೆಗಳಿಗೆ ಸೌರಫಲಕಗಳ ಅಳವಡಿಕೆ, ಇದರಿಂದಾಗುವ ಲಾಭಗಳೇನು?
Next Post
IDA: ಐವರು ಮಹಿಳಾ ರೈತರಿಗೆ ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ ಪ್ರಶಸ್ತಿ’

Recent News