ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘದ 2024 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘದ 2024 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜ.11: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ 2024ನೇ ವರ್ಷದ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಲೇಂಡರ್ ಬಿಡುಗಡೆ ಮಾಡಿದರು. ಈ ವೇಳೆ ಸಂಘದ ವತಿಯಿಂದ ರಾಜ್ಯದ ಪತ್ರಕರ್ತರಿಗೆ ವೈದ್ಯಕೀಯ ನಿಧಿಗಾಗಿ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಸಹಾಯಧನ ನೀಡಲು ಮನವಿ ಮಾಡಲಾಯಿತು. ಹಾಗೆಯೇ ಸಂಗಘದ ಕಚೇರಿ ಪಕ್ಕದಲ್ಲಿರುವ ರಾಜಕಾಲುವೆ ಸ್ವಚ್ಛಗೊಳಿಸಿ ಕಸ ತೆಗೆದು ಹಾಕಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಎಂ. ಪಾಳ್ಯ, ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್ ಬಿ.ಎನ್., ನಿರ್ದೇಶಕರಾದ ವಿನೋದ್ ಕುಮಾರ್ ಬಿ. ನಾಯ್ಕ, ರಮೇಶ್ ಹಿರೇಜಂಬೂರು, ಸೋಮಣ್ಣ ಕೆ.ಎಸ್., ಧ್ಯಾನ್ ಪೂಣಚ್ಚ, ಆನಂದ ಪಿ. ಬೈದನಮನೆ, ಪರಮೇಶ್ವರ್ ಕೆ.ವಿ., ವನಿತಾ ಎನ್., ನಯನಾ ಎಸ್., ಕಾರ್ಯದರ್ಶಿ ಕೆಂಪಣ್ಣ, ಸಿಬ್ಬಂದಿಗಳಾದ ವಿನುತಾ, ಹೇಮಂತ್, ಆನಂದ್ ಉಪಸ್ಥಿತರಿದ್ದರು.

Previous Post
ನಾಳೆ ರಾಜ್ಯ ಸರ್ಕಾರದ ೫ ನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ.
Next Post
ರೈತರ ಪರಿಹಾರಕ್ಕೆ ದುಡ್ಡಿಲ್ಲ, ಕಾಂಗ್ರೆಸ್‌ ಚೇಲಾಗಳಿಗೆ ಬಿರಿಯಾನಿ ಊಟಕ್ಕೆ 150 ಕೋಟಿ ರೂ. ಇದೆ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

Recent News