ಕಾಂಗ್ರೇಸ್‌ಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಗುಡ್ ಬೈ – ಲೋಕಸಭೆ ಹೊಸ್ತಿಲಲ್ಲಿ ಮಹರಾಷ್ಟ್ರದಲ್ಲಿ ಕಾಂಗ್ರೇಸ್ ಗೆ ಹಿನ್ನಡೆ

ಕಾಂಗ್ರೇಸ್‌ಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಗುಡ್ ಬೈ – ಲೋಕಸಭೆ ಹೊಸ್ತಿಲಲ್ಲಿ ಮಹರಾಷ್ಟ್ರದಲ್ಲಿ ಕಾಂಗ್ರೇಸ್ ಗೆ ಹಿನ್ನಡೆ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ‌‌. ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ಒಂದು ಸಾಲಿನ ರಾಜೀನಾಮೆ ಸಲ್ಲಿಸಿದ್ದು ಇದೇ ವೇಳೆ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಪತ್ರ ಬರೆದಿದ್ದಾರೆ‌.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಅವರು ಪಕ್ಷವನ್ನು ತೊರೆದ ಕೆಲವು ದಿನಗಳಲ್ಲಿ ಈ ಬೆಳವಣಿಗೆಯಾಗಿದ್ದು ಲೋಕಸಭೆ ಹೊಸ್ತಲಲ್ಲಿರುವ ಕಾಂಗ್ರೇಸ್‌ಗೆ ಮಹರಾಷ್ಟ್ರದಲ್ಲಿ ಇದು ಅತಿದೊಡ್ಡ ಹಿನ್ನಡೆಯಾಗಿದೆ. ಸದ್ಯ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

ಅಶೋಕ್ ಚವಾಣ್ ಜೊತೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಮರನಾಥ್ ರಾಜೂರ್ಕರ್ ಅವರು ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಗೆ ಅವರೂ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ 10-12 ಶಾಸಕರು ಚವಾಣ್ ಜೊತೆಗಿದ್ದು ಸೂಕ್ತ ಸಮಯದಲ್ಲಿ ಅವರು ಪಕ್ಷವನ್ನು ಬದಲಿಸಬಹುದು ಎನ್ನಲಾಗುತ್ತಿದೆ.

ಡಿಸೆಂಬರ್ 2008 ರಿಂದ ನವೆಂಬರ್ 2010 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚವಾಣ್, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಮುಂಬೈನಲ್ಲಿ ಆದರ್ಶ್ ವಸತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರು 2010 ರಲ್ಲಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಸುತ್ತ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿರುವ ಡಿಸಿಎಂ ದೇವೇಂದ್ರ ಫಡ್ನವಿಸ್ ಮುಂದೇನಾಗಲಿದೆ ಕಾದು ನೋಡಿ ಎಂದು ಕುತೂಹಲ ಹೆಚ್ಚಿಸಿದ್ದಾರೆ‌‌. ಕಾಂಗ್ರೆಸ್‌ನ ಹಲವಾರು ಉತ್ತಮ ನಾಯಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ, ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ನಾಯಕರು ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿದ್ದಾರೆ, ನನಗೆ ವಿಶ್ವಾಸವಿದೆ ಕೆಲವು ದೊಡ್ಡ ಕಾಂಗ್ರೇಸ್ ತೊರೆಯಲಿದ್ದಾರೆ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಶೋಕ್ ಚವಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ‌. ಅವರ ನಿರ್ಗಮನವು ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಈ ದ್ರೋಹಿಗಳು ತಿಳಿದಿರುವುದಿಲ್ಲ, ಸ್ನೇಹಿತರು ಮತ್ತು ಸಹೋದ್ಯೋಗಿಗಳು ರಾಜಕೀಯ ಪಕ್ಷವನ್ನು ತೊರೆದಾಗ, ಬಹುಶಃ ಅವರು ಹೆಚ್ಚು ಅರ್ಹರು – ಇದು ಯಾವಾಗಲೂ ದುಃಖದ ವಿಷಯವಾಗಿದೆ. ಆದರೆ ದುರ್ಬಲರಾಗಿರುವವರಿಗೆ, ಆ ವಾಷಿಂಗ್ ಮೆಷಿನ್ ಯಾವಾಗಲೂ ಸೈದ್ಧಾಂತಿಕ ಬದ್ಧತೆ ಅಥವಾ ವೈಯಕ್ತಿಕ ನಿಷ್ಠೆಗಳಿಗಿಂತ ಹೆಚ್ಚು ಆಕರ್ಷಕವಾಗಿದೆ ಎಂದು ಕಿಡಿ ಕಾರಿದ್ದಾರೆ‌.

ಅಶೋಕ್ ಚವಾಣ್ ನಿರ್ಣಯದ ನನಗೆ ಆಶ್ಚರ್ಯವಾಗಿದೆ ಅವರು ನಿನ್ನೆಯವರೆಗೆ ಸೀಟು ಹಂಚಿಕೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಅವರು ರಾಜ್ಯಸಭೆಗಾಗಿ ಬಿಜೆಪಿಗೆ ಹೋಗಿರಬಹುದು ಎಂದು ನಾನು ಭಾವಿಸುತ್ತೇನೆ. ಎಲ್ಲರೂ ತಮ್ಮ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

Previous Post
ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ; ಬಡವರು, ರೈತರ ಬಗ್ಗೆ ಮಾತನಾಡಲು ಅಮಿತ್ ಶಾ ಅವರಿಗೆ ನೈತಿಕತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಬಹುಮತ ಸಾಬೀತುಪಡಿಸಿದ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಎನ್‌ಡಿಎ ಆಡಳಿತ

Recent News