ಕಾಳ್ಗಿಚ್ಚಿಗೆ 120ಕ್ಕೂ ಹೆಚ್ಚು ಜನ ಬಲಿ

ಕಾಳ್ಗಿಚ್ಚಿಗೆ 120ಕ್ಕೂ ಹೆಚ್ಚು ಜನ ಬಲಿ

ಚಿಲಿ, ಫೆ. 6: ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ 120ಕ್ಕೂ ಹೆಚ್ಚು ಜನರು ಈ ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈವರೆಗೆ ಕನಿಷ್ಠ 122 ಜನರು ಸಾವನ್ನಪ್ಪಿದ್ದಾರೆ ಎಂದು ವಾಲ್ಪಾರೈಸೊ ಕಾನೂನು ವೈದ್ಯಕೀಯ ಸೇವೆಗಳು ತಿಳಿಸಿವೆ. ಇದಲ್ಲದೇ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಮತ್ತೊಂದೆಡೆ ಚಿಲಿಯ ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಸೇವೆ (ಸೆನಾಪ್ರೆಡ್) ದೇಶಾದ್ಯಂತ ಪ್ರಸ್ತುತ 161 ಕಾಡುಗಳು ಬೆಂಕಿಯಲ್ಲಿ ಬೇಯುತ್ತಿವೆ. ವಾಲ್ಪಾರೈಸೊ ಮತ್ತು ವಿನಾ ಡೆಲ್ ಮಾರ್ ಸೇರಿದಂತೆ ಕರಾವಳಿ ಸಮುದಾಯಗಳು ಹೊಗೆಯಿಂದ ತೊಂದರೆಗೀಡಾಗಿರುವುದನ್ನು ನೋಡಿದ ನಂತರ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ರಕ್ಷಣಾ ಕಾರ್ಯಕರ್ತರೊಂದಿಗೆ ಸಹಕರಿಸುವಂತೆ ಬೋರಿಕ್ ಚಿಲಿಯವರಿಗೆ ಮನವಿ ಮಾಡಿದರು . ಜಾಗ ಖಾಲಿ ಮಾಡುವಂತೆ ಕೇಳಿದರೆ ಹಿಂಜರಿಯಬೇಡಿ ಎಂದು ಹೇಳಿದರು. ಬೆಂಕಿ ವೇಗವಾಗಿ ಹರಡುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿಯಂತ್ರಿಸಲು ಕಷ್ಟವಾಗುತ್ತಿದೆ. ತಾಪಮಾನ ಹೆಚ್ಚಿದೆ, ಗಾಳಿ ಜೋರಾಗಿ ಬೀಸುತ್ತಿದೆ ಮತ್ತು ತೇವಾಂಶ ಕಡಿಮೆಯಾಗಿದೆ.

ಹೆಚ್ಚುವರಿಯಾಗಿ, ರಕ್ಷಣಾ ಸಚಿವಾಲಯವು ಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಮಿಲಿಟರಿ ಸಿಬ್ಬಂದಿಯನ್ನು ಕಳುಹಿಸುತ್ತದೆ ಮತ್ತು ಅಗತ್ಯವಿರುವ ಎಲ್ಲಾ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಅಧ್ಯಕ್ಷರು ಹೇಳಿದರು. ಬೆಂಕಿ ಸಂತ್ರಸ್ತರ ಗೌರವಾರ್ಥ ಫೆಬ್ರವರಿ 5 ಮತ್ತು ಫೆಬ್ರವರಿ 6 ರಾಷ್ಟ್ರೀಯ ಶೋಕಾಚರಣೆಯ ದಿನಗಳನ್ನು ಘೋಷಿಸಿದರು. ಕಳೆದ ವರ್ಷವೂ ಬೆಂಕಿ ಕಾಣಿಸಿಕೊಂಡಿತ್ತು ಇದರಿಂದಾಗಿ ಮಧ್ಯ ಚಿಲಿಯ ಹಲವು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ, ದೇಶದಲ್ಲಿ ಬೆಂಕಿ 400,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿತು ಮತ್ತು 22 ಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ.

ಚಿಲಿ ದೇಶದ ಅಧ್ಯಕ್ಷ ಬ್ರಿಜೆ ಬೋರಿಕ್ ಹೆಚ್ಚಿನ ಜನನಿಬಿಡ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಮಿಲಿಟರಿ ಪಡೆಗಳನ್ನು ಕಳುಹಿಸಿದ್ದರು. ಫೆಬ್ರವರಿ 2 ರಂದು ಪ್ರಾರಂಭವಾದ ಬೆಂಕಿ ಸಾವಿರಾರು ಹೆಕ್ಟೇರ್ ಕಾಡುಗಳನ್ನು ನಾಶಪಡಿಸಿದೆ. ಚಿಲಿಯಲ್ಲಿ 92 ಕಡೆಗಳಲ್ಲಿ ಬೆಂಕಿ ಉರಿಯುತ್ತಿದ್ದು, 43,000 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಹೊತ್ತಿ ಉರಿದಿದೆ ಎಂದು ಚಿಲಿಯ ಆಂತರಿಕ ಸಚಿವ ಕೆರೊಲಿನಾ ತೋಹಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೊತೆಗೆ 1,100 ಕ್ಕೂ ಹೆಚ್ಚು ಮನೆಗಳು ಈಗಾಗಲೇ ಹಾನಿಗೊಳಗಾಗಿವೆ ಎಂದು ತೋಹಾ ಹೇಳಿದ್ದಾರೆ.

ಚಿಲಿ ಅರಣ್ಯದಲ್ಲಿ ಉಂಟಾದ ಭಯಾನಕ ಕಾಡ್ಗಿಚ್ಚಿನಿಂದ ಜನರು ಪ್ರಾಣ ಕಳೆದುಕೊಂಡಿದ್ದು ಮತ್ತು ಮನೆಗಳು ಸುಟ್ಟು ಬೂದಿಯಾಗಿರೋದನ್ನು ಆ ದೇಶದ ಅಧ್ಯಕ್ಷ ಒಪ್ಪಿಕೊಂಡಿದ್ದು, ಪೂರಕ ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರವು ಸಕ್ರಿಯವಾಗಿದೆ ಎಂದು ಚಿಲಿಯರಿಗೆ ಭರವಸೆ ನೀಡಿದ್ದಾರೆ.

Previous Post
ಜಾತಿವಾರು ಜನಸಂಖ್ಯೆ, ತೆರಿಗೆ ಪಾವತಿ ಮಾಹಿತಿ ಬಹಿರಂಗಪಡಿಸಿ: ರಾಹುಲ್‌ ಗಾಂಧಿ
Next Post
ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ

Recent News