ಕುಟಂಬವಾದದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ: ಕಾಂಗ್ರೆಸ್‌ಗೆ ಕೌಂಟರ್ ಅಟ್ಯಾಕ್

ಕುಟಂಬವಾದದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ: ಕಾಂಗ್ರೆಸ್‌ಗೆ ಕೌಂಟರ್ ಅಟ್ಯಾಕ್

ಬೆಂಗಳೂರು, ಫೆಬ್ರವರಿ 05: ಭಾರತದಲ್ಲಿ ವಿಪಕ್ಷಗಳ ವೈಫಲ್ಯಕ್ಕೆ ಕಾಂಗ್ರೆಸ್ಸೇ ಮೂಲ ಕಾರಣ. ಭಾರತಕ್ಕೆ ಉತ್ತಮ ವಿಪಕ್ಷದ ಅಗತ್ಯತೆ ಇದೆ ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಕೆಂಡಾಮಂಡಲವಾದರು. ಮಾತಿನುದ್ದಕ್ಕೂ ಕಾಂಗ್ರೆಸ್ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಅವರು ಕುಟುಕಿದರು. ಸೋಮವಾರ ಲೋಕಸಭೆಯಲ್ಲಿ ಅವಧಿಯ ಕೊನೆಯ ಭಾಷಣದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕಾಂಗ್ರೆಸ್ ಆರೋಪ, ಮಾತುಗಳಿಗೆ ಕೌಂಟರ್ ಅಟ್ಯಾಕ್ ಮಾಡಿದರು. ವಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ವಿರುದ್ಧ ಮಾತಿನ ಚಾಟಿ ಬೀಸಿದರು. ಪ್ರಧಾನಿ ಭಾಷಣದ ಮಧ್ಯೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಲು ಸಹ ಮುಂದಾದರು.

ಭಾರತದಲ್ಲಿ ಕಾಂಗ್ರೆಸ್ ಉತ್ತಮ ವಿಪಕ್ಷವಾಗಿ ಹೊರ ಹೊಮ್ಮಲಿಲ್ಲ. ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳಿಗೆ ಮತದಾರರು ಮತ್ತ ಸ್ಪಷ್ಟ ಸಂದೇಶ ನೀಡಲಿದ್ದಾರೆ. ನಿಧಾನಗತಿಯಲ್ಲಿ ಕಾಂಗ್ರೆಸ್‌ ಅನ್ನು ಮೀರಿಸುವವರು ಯಾರು ಇಲ್ಲ ಎಂದ ಅವರು ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವದಲ್ಲೂ ಒಂದೇ ಕುಟುಂಬದಿಂದ ರಾಜಕೀಯ ನಾಯಕರು ಬದಲಾಗಿದ್ದಾರೆ. ಆದರೆ ಟೇಪ್ ರೆಕಾರ್ಡ್ ಅದೇ ಹೇಳೆಯದ್ದೆ ಇದೆ. ವಂಶಾವಳಿ ಬೆಳೆಯುತ್ತಾ ಇಡಿ ಕುಟುಂಬವೇ ರಾಜಕಾರಣದಲ್ಲಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಒಂದೇ ಕುಟುಂಬ ರಾಜಕೀಯ ಮಾಡುತ್ತಿದೆ. ಒಂದೇ ಕುಟುಂಬದಲ್ಲಿ 10 ಹತ್ತು ಮಂದಿ ನಾಯಕರು ರಾಜಕೀಯ ಆಕ್ಷೇಪವಿಲ್ಲ ಎಂದು ಪ್ರಧಾನಿಯವರು ಕುಟುಂಬವಾದದ ವಿರುದ್ಧ ಮಾತು ಮಾತಿನಲ್ಲೂ ಗುಡುಗಿದರು.

ಕುಟುಂಬವಾದಕ್ಕೆ ಪ್ರಧಾನಿ ಟಾಂಗ್ ಬಿಜೆಪಿಯ ರಾಜನಾಥ್ ಸಿಂಗ್, ಅಮಿತ್ ಶಾ ಕುಟುಂಬ ರಾಜಕಾರಣ ಮಾಡಿಲ್ಲ. ಕುಟುಂಬದವರೆ ಪಕ್ಷ ನಡೆಸುವುದು ಕುಟುಂಬವಾದ. ಕಾಂಗ್ರೆಸ್‌ನಲ್ಲಿ ಹಲವು ಸಂಸದರು ಒಳ್ಳೆಯ ಮಾತುಗಾರರು ಇದ್ದಾರೆ. ಆದರೆ ಅವರನ್ನು ಬೆಳೆಯಲು ಬಿಡುತ್ತಿಲ್ಲ. ಯಾವ ಪಕ್ಷವನ್ನು ಕುಟುಂಬ ನಿರ್ವಹಿಸುತ್ತದೆಯೇ ಅದೇ ಕುಟುಂಬವಾದ. ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ಮೋದಿಯವರು ಪರೋಕ್ಷ ವಾಗ್ದಾಳಿ ನಡೆಸಿದರು.

ನಾವು ಹೇಗೆ ಕೆಲಸ ಮಾಡಿದ್ದೇವೋ ಹಾಗೆ ಪ್ರತಿಫಲ ಸಿಕ್ಕಿದೆ. ಕಾಂಗ್ರೆಸ್ ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಎಷ್ಟು ವರ್ಷಗಳ ಕಾಲ ನೀವು ಸಮಾಜ ಇಬ್ಬಾಗ ಮಾಡುತ್ತೀರಿ. ಎಷ್ಟು ದ್ವೇಷ ಮನಸಲ್ಲಿ ಇಟ್ಟುಕೊಂಡಿದ್ದೀರಿ. ಕಾಂಗ್ರೆಸ್‌ನಿಂದ ಕಾನ್ಸುಲ್ ಸಂಸ್ಕೃತಿ ಇದೆ. ದೇಶದ ನಾಲ್ಕು ಸ್ತಂಬ ಸದೃಢವಾಗಿದ್ದು, ದೇಶ ಬಲಿಷ್ಠವಾಗಲಿದೆ ಎಂದು ಹೇಳಿದರು. ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಮಾರಕ ಕಾಂಗ್ರೆಸ್ ಪಕ್ಷ ನಮ್ಮ ಭಾರತ ಅಭಿವೃದ್ಧಿಗೆ ಮಾರಕವಾಗಿದೆ. ಲೋಕದ ಪ್ರಗತಿಯನ್ನು ಜಿ20 ದೇಶಗಳೇ ಹೊಗಳಿವೆ. ಬಿಜೆಪಿ ಸರ್ಕಾರ ಕಾರ್ಯ ನಿರ್ವಹಣೆಯ ವೇಗವನ್ನು ದೇಶವೇ ನೋಡುತ್ತಿದೆ. ಕಾಂಗ್ರೆಸ್ ಸರ್ಕಾರದ ವೇಗವನ್ನು ದೇಶ ನೋಡಿದೆ ಎಂದರು. 2014ರಲ್ಲಿ ಭಾರತದ ಜಿಡಿಪಿ 11ನೇ ಸ್ಥಾನದಲ್ಲಿತ್ತು. ಇದೀಗ ಹತ್ತೇ ವರ್ಷದಲ್ಲಿ ಭಾರತದ ಜಿಡಿಪಿ ವಿಚಾರದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ನಾವು ಹತ್ತೇ ವರ್ಷದಲ್ಲಿ ಬಡವರಿಗಾಗಿ ನಾಲ್ಕು ಕೋಟಿ ಮನೆ ಕಟ್ಟಿದ್ದೇವೆ. ಎರಡನೇ ಅವಧಿಯಲ್ಲೂ ಸಾಕಷ್ಟು ಅಭಿವೃದ್ಧಿಗಳಾಗಿವೆ ಎಂದು ಪ್ರಧಾನಿ ಮೋದಿಯವರು ವಿಪಕ್ಷಗಳಿಗೆ ಟಾಂಗ್ ಕೊಡುವ ಜೊತೆಗೆ ಆಗಿರುವ ತಮ್ಮ ಸಾಧನೆಗಳನ್ನು ವಿವರಿಸಿ ಬಿಜೆಪಿ ಕಾರ್ಯವೈಖರಿ ಸಮರ್ಥಿಸಿಕೊಂಡರು. ಹಾಲಿ ಲೋಕಸಭಾ ಕೊನೆಯ ಅವಧಿ ಇದಾಗಿದ್ದು, ಶೀಘ್ರ ಲೋಕಸಭೆಯ ಅವಧಿ ಪೂರ್ಣಗೊಳ್ಳಲಿದೆ. ಇನ್ನೇನು ಕೆಲವ ದಿವಸಗಳಲ್ಲಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗಲಿದೆ. ರಾಮ್ ರಾಮ್ ಸರ್ಕಾರ ಈ ಬಾರಿ 400 ಸೀಟುಗಳು ಬರುತ್ತವೆ ಎಂದು ಇಡೀ ದೇಶವೇ ಹೇಳುತ್ತಿದೆ. ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಸಾವಿರಾರು ವರ್ಷಗಳ ಬಳಿಕ ಶ್ರೀರಾಮ ಮನೆಗೆ ಬಂದಿದ್ದಾನೆ. ಮತ್ತೊಮ್ಮೆ ರಾಮ್ ರಾಮ್ ಸರ್ಕಾರ ಎಂದು ಪ್ರಧಾನಿಯವರು ಉದ್ಘರಿಸಿದರು. ಈ ಬಾರಿ 400ಕ್ಕೂ ಅಧಿಕ ಸೀಟು ಇದು ನಮ್ಮ ಗ್ಯಾರೆಂಟಿ ಎಂದು ಅವರು ಹೇಳಿದರು.

Previous Post
ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿ ಹೇಗಿದೆ
Next Post
ಭಾರತದಲ್ಲಿ 5 ವರ್ಷಗಳಲ್ಲಿ 500ಕ್ಕೂ ಹೆಚ್ಚು ಸಿಂಹಗಳ ಸಾವು

Recent News