The scientists who developed the first vaccine for Covid-19, Katalin Carrico and Drew Wiseman, have been awarded the 2023 Nobel Prize in Medicine.

ಕೋವಿಡ್ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಿಗೆ ನೋಬೆಲ್ಪುರಸ್ಕಾರ

ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಿಗೆ ನೋಬೆಲ್ ಪುರಸ್ಕಾರ

ನವದೆಹಲಿ: ಕೋವಿಡ್ -19ಗೆ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ. ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಬಹುಮಾನ ವಿಜೇತರಿಗೆ 18.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.

ಕಟಾಲಿನ್ ಕರಿಕೊ ಅವರು 2022 ರವರೆಗೆ ಬಯೋಎನ್ ಟೆಕ್‌ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರ್‌ಎನ್‌ಎ ಪ್ರೋಟೀನ್ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಅವರು ಹಂಗೇರಿಯ ಸ್ಜೆಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದರ ಜತೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್ ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇನ್ನು ಕಟಾಲಿನ್ ಕರಿಕೊ ಅವರ ಜತೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದವರು ಡ್ರೂ ವೈಸ್‌ಮನ್‌. ಇವರು ಪೆರೆಲ್ ಮನ್ ಲಸಿಕೆ ಸಂಶೋಧನ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ.

Previous Post
ನೂರಾರು ಜೆಡಿಎಸ್ ನಾಯಕರು ನಮ್ಮ ಸಂಪರ್ಕ ದಲ್ಲಿದ್ದಾರೆ ಬೃಹತ್ ಸಮಾವೇಶ ನಡೆಸಿ ಸೇರ್ಪಡೆ – ಜಮೀರ್ ಅಹಮದ್ ಖಾನ್
Next Post
ನವದೆಹಲಿಯ ಕರ್ನಾಟಕ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಆಚರಣೆ

Recent News