ಜನಾರ್ದನ ಪೂಜಾರಿ – ಈಶ್ವರ ಖಂಡ್ರೆ ಭೇಟಿ

ಜನಾರ್ದನ ಪೂಜಾರಿ – ಈಶ್ವರ ಖಂಡ್ರೆ ಭೇಟಿ

ಮಂಗಳೂರು, ಫೆ.6: ದಕ್ಷಿಣ ಕನ್ನಡ ಜಿಲ್ಲೆಯ ಅಧಿಕೃತ ಪ್ರವಾಸದಲ್ಲಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಭೇಟಿಯ ವೇಳೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು, ಈಶ್ವರ ಖಂಡ್ರೆ ಅವರ ತಂದೆ ಮಾಜಿ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ನೇತಾರ ಹಾಗೂ ಶತಾಯುಷಿಗಳೂ ಆದ ಭೀಮಣ್ಣ ಖಂಡ್ರೆ ಅವರೊಂದಿಗಿನ ತಮ್ಮ ಗೆಳೆತನ ಒಡನಾಟವನ್ನು ಸ್ಮರಿಸಿದರು. ಅರಣ್ಯ ಖಾತೆಯನ್ನು ಉತ್ತಮ ನಿರ್ವಹಿಸುತ್ತಿರುವ ಈಶ್ವರ ಖಂಡ್ರೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಮ್, ಎನ್.ಎಸ್.ಯು.ಐ. ಪ್ರಧಾನ ಕಾರ್ಯದರ್ಶಿ ಸಾಗರ್ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.

Previous Post
ಭಾರತದಲ್ಲಿ 5 ವರ್ಷಗಳಲ್ಲಿ 500ಕ್ಕೂ ಹೆಚ್ಚು ಸಿಂಹಗಳ ಸಾವು
Next Post
ಮುಖ್ಯಮಂತ್ರಿ ಸಿದ್ಧರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾ ಮಾಡಿ ೧೦ ಸಾವಿರ ರೂ. ದಂಡ ವಿಧಿಸಿದೆ

Recent News