ಜಾರ್ಖಂಡ್‌ನ ನೂತನ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ

ಜಾರ್ಖಂಡ್‌ನ ನೂತನ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ

ರಾಂಚಿ, ಫೆ. 2: ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೇನ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ಅವರು ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. 67 ವರ್ಷದ ಚಂಪೈ ಸೊರೇನ್ ಅವರನ್ನು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್-ರಾಷ್ಟ್ರೀಯ ಜನತಾದಳದ 43 ಶಾಸಕರು ಬೆಂಬಲಿಸಿದ್ದಾರೆ. ಹಲವರು ಶಾಸಕರು ಇಂದು ತಮ್ಮ ಹೊಸ ನಾಯಕನೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಂಪೈ ಅವರ ಪ್ರಮಾಣ ವಚನವು ಈ ವಾರ ಜಾರ್ಖಂಡ್‌ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಅರ್ಧದಷ್ಟು ಪರಿಹರಿಸಿದೆ ಎಂದು ವಿಶ್ಲೇಷಿಸಲಾಗಿದೆ. ಆರು ಬಾರಿ ಶಾಸಕರಾಗಿರುವ ಮತ್ತು ಹೇಮಂತ್ ಸೊರೇನ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಚಂಪೈ ಸೊರೇನ್ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಾಂಗ ಪಕ್ಷದ ನಾಯಕರಾಗಿ ಬುಧವಾರ ತಡರಾತ್ರಿ ಆಯ್ಕೆ ಮಾಡಲಾಗಿತ್ತು.

ಭೂ ಹಗರಣ ಪ್ರಕರಣದಲ್ಲಿ ಇಡಿಯಿಂದ ಬಂಧನವಾಗುವ ಮುನ್ನ ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕ ಹೇಮಂತ್ ಸೊರೇನ್ ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಚಂಪೈ ಆಯ್ಕೆಯಾಗಿದ್ದಾರೆ.

Previous Post
ಹರ್ಷ ಮಂದರ್ ನಿವಾಸದ ಮೇಲೆ ಸಿಬಿಐ ದಾಳಿ
Next Post
ವಿಶ್ವಾಸಮತ ಯಾಚನೆ: ಹೇಮಂತ್ ಸೊರೇನ್ ಭಾಗಿಯಾಗಲು ಕೋರ್ಟ್ ಅನುಮತಿ

Recent News