ಡಿಸಿಎಂ ನೇಮಕ ಸಂವಿಧಾನ ಬಾಹಿರವಲ್ಲ: ಸುಪ್ರೀಂ

ಡಿಸಿಎಂ ನೇಮಕ ಸಂವಿಧಾನ ಬಾಹಿರವಲ್ಲ: ಸುಪ್ರೀಂ

ನವದೆಹಲಿ, ಫೆ. 12: ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ನೇಮಕ ಸಂವಿಧಾನ ಬಾಹಿರವಲ್ಲ. ಪಕ್ಷ ಅಥವಾ ಅಧಿಕಾರದಲ್ಲಿರುವ ಪಕ್ಷಗಳ ಒಕ್ಕೂಟದಲ್ಲಿ ಹಿರಿಯ ನಾಯಕರಿಗೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ನೀಡಲು ಹಲವು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ನೇಮಕ ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

‘ನೀವು ಯಾರನ್ನಾದರೂ ಉಪಮುಖ್ಯಮಂತ್ರಿ ಎಂದು ಕರೆದರೂ ಅದು ಇನ್ನೂ ಸಚಿವ ಸ್ಥಾನವೆಂದೆ ಉಲ್ಲೇಖವಾಗಿದೆ; ಉಪಮುಖ್ಯಮಂತ್ರಿ ರಾಜ್ಯ ಸರ್ಕಾರದಲ್ಲಿ ಮೊದಲ ಮತ್ತು ಪ್ರಮುಖ ಸಚಿವರು. ಇದು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ವಿಚಾರಣೆಯ ವೇಳೆ ಹೇಳಿದರು.

‘ಉಪಮುಖ್ಯಮಂತ್ರಿಗೆ ಯಾವುದೇ ಸಂವಿಧಾನಕ ಹುದ್ದೆಯನ್ನು ನೀಡುವುದಿಲ್ಲ; ಇದು ಸಂವಿಧಾನದ 14 (ಸಮಾನತೆಯ ಹಕ್ಕು) ಅನ್ನು ಉಲ್ಲಂಘಿಸುತ್ತದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಇದು ತಪ್ಪು ಉದಾಹರಣೆಯಾಗಿದೆ ಎಂದು ಹೇಳಿ, ಅಂತಹ ನೇಮಕಾತಿಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯದ ಮುಖ್ಯಮಂತ್ರಿಗೆ ಸಹಾಯ ಮಾಡಲು ಮತ್ತು ಹಿರಿಯ ಸಮ್ಮಿಶ್ರ ನಾಯಕರನ್ನು ಸಂಪುಟದಲ್ಲಿ ಇರಿಸಿಕೊಳ್ಳಲು ಉಪಮುಖ್ಯಮಂತ್ರಿಗಳನ್ನು ಹೆಚ್ಚಾಗಿ ನೇಮಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಒಬ್ಬರಿಗಿಂತ ಹೆಚ್ಚು ಉಪಮುಖ್ಯಮಂತ್ರಿಗಳಿದ್ದರೆ, ಕೆಲವು ರಾಜ್ಯಗಳಲ್ಲಿ ಯಾರೂ ಇಲ್ಲ. ಆಂಧ್ರಪ್ರದೇಶದಲ್ಲಿ ಐದು ಜನ ಉಪ ಮುಖ್ಯಮಂತ್ರಿಗಳಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯು ಕ್ಯಾಬಿನೆಟ್ ಮಂತ್ರಿಯ ಹುದ್ದೆಗೆ ಸಮನಾಗಿದ್ದು, ಅದೇ ರೀತಿಯ ವೇತನ ಮತ್ತು ಸವಲತ್ತುಗಳನ್ನು ಅನುಭವಿಸುತ್ತಾರೆ.

Previous Post
ತಮಿಳುನಾಡು ವಿಧಾನಸಭೆ ವಾಡಿಕೆ ಭಾಷಣ ಮಾಡಲು ರಾಜ್ಯಪಾಲ ರವಿ ನಕಾರ
Next Post
ಮಂಗಳೂರು ಎಸ್ಇಜೆಡ್ ನಲ್ಲಿದ್ದ ಜೆಬಿಎಫ್ ಕಂಪನಿಯ ಬಿಕ್ಕಟ್ಟು 34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ ಬಿ ಪಾಟೀಲ

Recent News