‘ತಂತ್ರಜ್ಞಾನ ಸಂಶೋಧನೆ & ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ನಿಧಿ ಮೀಸಲು, ಬೆಂಗಳೂರು ನಗರಕ್ಕೆ ಹೆಚ್ಚಿನ ಲಾಭ’ : ಸಂಸದ ಶ್ರೀ ತೇಜಸ್ವೀ ಸೂರ್ಯ

‘ತಂತ್ರಜ್ಞಾನ ಸಂಶೋಧನೆ & ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ನಿಧಿ ಮೀಸಲು, ಬೆಂಗಳೂರು ನಗರಕ್ಕೆ ಹೆಚ್ಚಿನ ಲಾಭ’ : ಸಂಸದ ಶ್ರೀ ತೇಜಸ್ವೀ ಸೂರ್ಯ

ಬೆಂಗಳೂರು , ಫೆಬ್ರುವರಿ 1 : ಇಂದು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಂದ ಮಂಡನೆಯಾಗುವ ಕೇಂದ್ರದ ಮಧ್ಯಂತರ ಬಜೆಟ್ ನ ತಂತ್ರಜ್ಞಾನ ಸಂಶೋಧನೆ & ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಬಂಡವಾಳ ನಿಧಿಯನ್ನು ಮೀಸಲು ಇಟ್ಟಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ತೇಜಸ್ವೀ ಸೂರ್ಯ ರವರು, ” ಈ ಬಾರಿ ಕೇಂದ್ರ ಸರ್ಕಾರದ ವತಿಯಿಂದ ಮಂಡನೆಯಾಗಿರುವ ಮಧ್ಯಂತರ ಬಜೆಟ್ ನಲ್ಲಿ, ತಂತ್ರಜ್ಞಾನ,ಸಂಶೋಧನೆ & ಅಭಿವೃದ್ಧಿ ಕ್ಷೇತ್ರದಲ್ಲಿ ಇನ್ನಷ್ಟು ಪರಿಣಾಮಕಾರಿ ಪ್ರಗತಿಯಾಗುವ ನಿಟ್ಟಿನಲ್ಲಿ ಘೋಷಣೆಯಾಗಿರುವ 1 ಲಕ್ಷ ಕೋಟಿ ರೂ, ಗಳ ವಿಶೇಷ ನಿಧಿಯಿಂದ ನಮ್ಮ ಬೆಂಗಳೂರಿನ ಅನೇಕ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಈ ನಿಧಿ ಅನ್ವಯ, ಮುಂದಿನ 50 ವರ್ಷಗಳ R & D ಕ್ಷೇತ್ರದಲ್ಲಿನ ಸಂಸ್ಥೆಗಳಿಗೆ ಮುಂದಿನ 50 ವರ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ರಾಷ್ಟ್ರದ ಅಭಿವೃದ್ಧಿಗೆ ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಐ. ಐ.ಎಸ್. ಸಿ , ನಿಮ್ಹಾನ್ಸ್, ಹೆಚ್. ಎ.ಎಲ್, ಎನ್. ಎ.ಎಲ್ , ಐ.ಐ.ಐ. ಟಿ & ಇತರ ಅನೇಕ ಸಂಸ್ಥೆಗಳು ಈ ನಿಧಿ ಸ್ಥಾಪನೆಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ.

ಶೇ 60 ರಷ್ಟು ಬಯೋಟೆಕ್ ಕಂಪನಿಗಳು ಬೆಂಗಳೂರು ನಗರದಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿವೆ. ಕರ್ನಾಟಕವು 400ಕ್ಕೂ ಅಧಿಕ R & D , 85 ಚಿಪ್ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದ್ದು, ಪ್ರತಿ 4 ರಲ್ಲಿ 1 ಕಂಪನಿಯು ಡೀಪ್ ಟೆಕ್, ಆರೋಗ್ಯ , ಹಣಕಾಸು ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಬೆಂಗಳೂರಿನಲ್ಲಿ ಫಂಡಿಂಗ್ ಹೊಂದಿರುವುದು ವಿಶೇಷ. ಬೆಂಗಳೂರು ನಗರವು 800 ಕಾಲೇಜುಗಳನ್ನು ಹೊಂದಿದ್ದು, ಅವುಗಳಲ್ಲಿ 100 ಎಂಜಿನಿಯರಿಂಗ್ ಗೆ ಮೀಸಲಾಗಿದ್ದು ಗಮನಾರ್ಹ. ತಂತ್ರಜ್ಞಾನ ಸಂಶೋಧನೆ , ಅಭಿವೃದ್ಧಿಯಲ್ಲಿ ನಿರತರಾಗಿರುವ ಐ. ಐ.ಎಸ್.ಸಿ, ಐ.ಐ.ಎಂ.ಬಿ , ಐ. ಐ. ಐ. ಟಿ, ಗಳು ಬೆಂಗಳೂರಿನಲ್ಲಿ ಇರುವುದರಿಂದ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಅನುಕೂಲವಾಗಲಿರುವುದು ವಿಶೇಷ ” ಎಂದು ಸಂಸದರು ವಿವರಿಸಿದರು.

ಬಜೆಟ್ ಭಾಷಣದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಪ್ರಸ್ತಾಪಿಸಿರುವಂತೆ, ಡೀಪ್ ಟೆಕ್ನಾಲಜಿ ಅಭಿವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ನೂತನ ಯೋಜನೆ ಘೋಷಣೆ ಮಾಡಿರುವುದು ವಿಶೇಷ.

ಮುಂದುವರೆದಂತೆಯುವಜನತೆಯ ಕಲ್ಯಾಣಕ್ಕಾಗಿ ಹಲವಾರು ಗಮನಾರ್ಹ ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ಶ್ರೀ ನರೆಂದ್ರ ಮೋದಿ ರವರ ನೇತೃತ್ವದ ಸರ್ಕಾರದ, ಕಳೆದ 10 ವರ್ಷಗಳ ಅವಧಿಯಲ್ಲಿ,

– ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ 1.4 ಕೋಟಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಲಾಗಿದೆ.

– 3 ಸಾವಿರ ನೂತನ ಐ.ಟಿ.ಐ ಕೇಂದ್ರಗಳ ಸ್ಥಾಪನೆ.

– 7 ಐ.ಐ.ಟಿ ಗಳ ಸ್ಥಾಪನೆ.

– 16 ಹೊಸ ಐ.ಐ.ಐ.ಟಿ ಗಳ ಸ್ಥಾಪನೆ.

– 7 ನೂತನ ಐ . ಐ.ಎಂ ಗಳು

– 15 ಹೊಸ ಏಮ್ಸ್ ಗಳ ಸ್ಥಾಪನೆ

– 390 ಹೊಸ ವಿಶ್ವವಿದ್ಯಾಲಯಗಳ.ಪ್ರಾರಂಭಗೊಳಿಸಿರುವುದು ಸರ್ಕಾರದ ಯುವಜನ ಕೇಂದ್ರಿತ ನೀತಿಗಳಿಗೆ ಸಾಕ್ಷಿ.

ಮುದ್ರಾ ಯೋಜನೆ ಅಡಿಯಲ್ಲಿ, 22.5 ಲಕ್ಷ ಕೋಟಿ ರೂ, ಗಳ 43 ಕೋಟಿ ಸಾಲಗಳನ್ನು ನೀಡಲಾಗಿದೆ. ಇದರ ಹೊರತಾಗಿಯೂ ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಗಳು ಯುವ ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ಸಹಾಯ ಮಾಡುತ್ತಿವೆ ಎಂದು ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಸರಕಾರದ ಪ್ರಗತಿ ಕಾರ್ಯಗಳ ಕುರಿತು ಸಂಸತ್ತಿಗೆ ವಿವರಿಸಿದ್ದು ಗಮನಾರ್ಹ.

” ಕೇವಲ 10 ವರ್ಷಗಳ ಅವಧಿಯಲ್ಲಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಯುವ ಕೇಂದ್ರಿತ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಅವರ ಆಶೋತ್ತರಗಳಿಗೆ ಪೂರಕವಾದ ಭವಿಷ್ಯದ ಬಲಿಷ್ಠ ಭಾರತ ನಿರ್ಮಾಣದಲ್ಲಿ ಸಹಾಯವಾಗಲಿದೆ ” ಎಂದು ಸಂಸದ ಸೂರ್ಯ ಇದೇ ಸಂದರ್ಭದಲ್ಲಿ ತಿಳಿಸಿದರು.

 

Previous Post
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಎರಡನೇ ಆಡಳಿತಾವಧಿಯ ಕೊನೆಯ ಬಜೆಟ್ ಇಂದು ಮಂಡನೆಯಾಗಿದೆ.
Next Post
ಬಂಧನ ಪ್ರಶ್ನಿಸಿ ಹೇಮಂತ್ ಸೊರೆನ್ ಸುಪ್ರೀಂ ಮೊರೆ

Recent News