ತಮಿಳುನಾಡಿನಲ್ಲಿ 39ಕ್ಕೆ 39 ಸ್ಥಾನವೂ ಡಿಎಂಕೆ- ಕಾಂಗ್ರೆಸ್ ಪಾಲು-ಸಮೀಕ್ಷೆ

ತಮಿಳುನಾಡಿನಲ್ಲಿ 39ಕ್ಕೆ 39 ಸ್ಥಾನವೂ ಡಿಎಂಕೆ- ಕಾಂಗ್ರೆಸ್ ಪಾಲು-ಸಮೀಕ್ಷೆ

ನವದೆಹಲಿ, ಫೆಬ್ರವರಿ 08: ಲೋಕಸಭಾ ಚುನಾವಣೆಗೆ ಇಡೀ ದೇಶವೆ ಸಿದ್ಧವಾಗುತ್ತಿದ್ದು, ಎಲ್ಲ ಆಪಕ್ಷಗಳು ತಮ್ಮ ಗೆಲುವಿನ ಹಾದಿಯನ್ನು ರಚಿಸುತ್ತಿವೆ. ಜೊತೆಗೆ ಪ್ರಚಾರಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿವೆ. ಈ ಸಮಯದಲ್ಲಿ ಹಲವು ಮಾಧ್ಯಮ ಮತ್ತು ಸ್ವತಂತ್ರ ಸಂಸ್ಥೆಗಳು ಈಗಾಗಲೇ ಚುನಾವಣಾ ಫಲಿತಾಂಶದ ಮೇಲೆ ಕಣ್ಣಿಟ್ಟಿವೆ. ಲೋಕಸಭಾ ಚುನಾವಣಾ ಸಮೀಕ್ಷೆಗಳು ನಡೆಯುತ್ತಿದ್ದು, ಇಂಡಿಯಾ ಟುಡೇ ಗ್ರೂಪ್‌ನ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ರಾಜ್ಯದ ನೆರೆಯ ತಮಿಳುನಾಡಿನಲ್ಲಿ ಕಾಂಗ್ರೆಸ್- ಡಿಎಂಕೆ ಮೈತ್ರಿಯೂ ಎಲ್ಲಾ ಸ್ಥಾನಗಳಲ್ಲಿ ಜಯ ಸಾಧಿಸಲಿದ್ದು, ಬಿಜೆಪಿ ಖಾತೆ ತೆರೆಯದಂತೆ ಮಾಡಲಿದೆ ಎಂದಿದೆ.

ತಮಿಳುನಾಡಿನಲ್ಲಿ ‘ಇಂಡಿಯಾ’ ಕ್ಲೀನ್ ಸ್ವೀಪ್ ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟದ ಇಂಡಿಯಾ ಬಣ ಜಯಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಸಮೀಕ್ಷೆಯು ತಮಿಳುನಾಡಿನಲ್ಲಿ ಡಿಎಂಕೆ – ಕಾಂಗ್ರೆಸ್ ಮೈತ್ರಿಕೂಟ 47% ಮತ ಹಂಚಿಕೆಯನ್ನು ಅಂದಾಜಿಸಿದೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ 15% ಮತಗಳನ್ನು ಗಳಿಸಬಹುದು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನಿಂದ ಲೋಕಸಭಾ ಸ್ಥಾನವನ್ನು ಗೆಲ್ಲಲು ಬಿಜೆಪಿ ನೇತೃತ್ವದ ಎನ್‌ಡಿಎ ವಿಫಲವಾಗಿದೆ. ಈ ಬಾರಿ ಮತ್ತೆ ಪುಟಿದೇಶಬೇಕು ಎಂದುಕೊಂಡಿದ್ದ ಬಿಜೆಪಿಗೆ ಸಮೀಕ್ಷೆಯಲ್ಲಿ ಮುಖಭಂಗವಾಗಿದೆ. ಈಗಾಗಲೇ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುತ್ತಾ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.

ಆದರೆ, ಇಂಡಿಯಾ ಟುಡೇ ಗ್ರೂಪ್‌ನ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಫಲಿತಾಂಶ (MOTN) ಈ ಬಾರಿಯೂ ಬಿಜೆಪಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ಡಿಸೆಂಬರ್ 15, 2023 ಮತ್ತು ಜನವರಿ 28, 2024 ರ ನಡುವೆ ನಡೆಸಲಾಗಿದೆ. ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 35,801 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲಾ ರಾಜ್ಯಗಳ ಫಲಿತಾಂಶವನ್ನು ಇಂಡಿಯಾ ಟುಡೆ ಪ್ರಕಟಿಸಿದೆ. ಇನ್ನು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ 24 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆಪ್ ನೇತೃತ್ವದ ಇಂಡಿಯಾ ಬ್ಲಾಕ್ ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಸಮೀಕ್ಷೆ ಭವಿಷ್ಯ ನುಡಿದಿದೆ.

Previous Post
ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ/ಅಹವಾಲುಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
Next Post
ಪಿವಿಎನ್ ಸೇರಿ ಮೂವರಿಗೆ ಭಾರತ ರತ್ನ: ಸೋನಿಯಾ ಗಾಂಧಿ ಸ್ವಾಗತ

Recent News