ತೈವಾನ್ ತಿಕ್ಕಾಟ, ಚೀನಾ ಕೊಟ್ಟ ವಾರ್ನಿಂಗ್ ಏನು ಗೊತ್ತೆ?

ತೈವಾನ್ ತಿಕ್ಕಾಟ, ಚೀನಾ ಕೊಟ್ಟ ವಾರ್ನಿಂಗ್ ಏನು ಗೊತ್ತೆ?

ಈಗಾಗಲೇ ಜಗತ್ತಿನಲ್ಲಿ 2 ಭೀಕರ ಯುದ್ಧಗಳು ಆರಂಭವಾಗಿವೆ, ಒಂದು ಯುರೋಪ್ ಖಂಡ & ಇನ್ನೊಂದು ಮಧ್ಯ ಪ್ರಾಚ್ಯದಲ್ಲಿ ತಲ್ಲಣ ಎಬ್ಬಿಸಿದೆ. ಹೀಗೆ ಭೂಮಿಯ ಎರಡು ಪ್ರಮುಖ ಭಾಗದಲ್ಲಿ ನೆತ್ತರು ಚೆಲ್ಲಾಡುವ ಸಮಯದಲ್ಲೇ, ಏಷ್ಯಾ ಖಂಡದಲ್ಲೂ ಯುದ್ಧದ ಆತಂಕವು ಆವರಿಸಿದೆ. ತೈವಾನ್ ಹಾಗೂ ಚೀನಾ ನಡುವೆ ಇನ್ನೇನು ಯುದ್ಧ ನಡೆಯುತ್ತೆ ಎನ್ನುವಂತೆ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ. ದ್ವೀಪರಾಷ್ಟ್ರ ತೈವಾನ್ ಕುರಿತು ಅಮೆರಿಕ & ಅದರ ಸ್ನೇಹಿತ ದೇಶಗಳು ತೆಗೆದುಕೊಳ್ಳುವ, ಪ್ರತಿ ನಿರ್ಧಾರಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ತೈವಾನ್ ವಿಚಾರ ಪ್ರಸ್ತಾಪ ಮಾಡ್ತಾ ಚೀನಾ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪ ಮಾಡುತ್ತಿದೆ ಚೀನಾ. ಹೀಗಿದ್ದಾಗಲೇ ಆ ದ್ವೀಪರಾಷ್ಟ್ರ ನಮ್ಮದು ಎನ್ನುವ ಸಂದೇಶವನ್ನು ಚೀನಾ ಕೊಟ್ಟಿದೆ. ತೈವಾನ್‌ ಎಂದೆಂದಿಗು ಒಂದು ರಾಷ್ಟ್ರವಾಗಿರಲಿಲ್ಲ. ಭವಿಷ್ಯದಲ್ಲೂ ಅದು ರಾಷ್ಟ್ರವಾಗಿ ಇರುವುದಿಲ್ಲ ಎಂಬ ಮೆಸೇಜ್ ಕೊಟ್ಟಿದೆ ಚೀನಾ!

ಚೀನಾ ಕೊಟ್ಟ ವಾರ್ನಿಂಗ್ ಇದು! ಅಂದಹಾಗೆ ಕಳೆದ ಕೆಲವು ತಿಂಗಳಿಂದ ಚೀನಾ ಮತ್ತು ತೈವಾನ್ ವಿಚಾರ ಭಾರಿ ಚರ್ಚೆಗೂ ವೇದಿಕೆ ಒದಗಿಸಿದೆ. ಇದಕ್ಕೆಲ್ಲಾ ಕಾರಣ ತೈವಾನ್ ದೇಶದಲ್ಲಿನ ಚುನಾವಣೆ. ಹೀಗೆ ತೈವಾನ್ ಎಲೆಕ್ಷನ್ ಮುಗಿದು ಹೋದರೂ ಕಿರಿಕ್ ಮಾತ್ರ ನಿಲ್ಲುತ್ತಿಲ್ಲ. ಚೀನಾ ವಿರುದ್ಧವಾಗಿ ತೈವಾನ್ ಅನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಆರೋಪವನ್ನ ಚೀನಾ ಪದೇ ಪದೇ ಮಾಡುತ್ತಿದ್ದು. ಇಷ್ಟೆಲ್ಲಾ ಬೆಳವಣಿಗೆ ನಡುವೆ ತೈವಾನ್‌ ಎಂದೆಂದಿಗು ಒಂದು ದೇಶವಾಗಿಲ್ಲ. ಭವಿಷ್ಯದಲ್ಲೂ ಅದು ರಾಷ್ಟ್ರವಾಗಿ ಇರುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಈಜಿಪ್ಟ್ ನೆಲದಿಂದ ಸಂದೇಶ ರವಾನೆ ಅಂದಹಾಗೆ ಕೈರೊದಲ್ಲಿ ಈಜಿಪ್ಟ್‌ ವಿದೇಶಾಂಗ ಸಚಿವ ಸಮೇಹ್‌ ಶೌಕ್ರಿ ಅವರ ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ವಾಂಗ್‌ ಯಿ ಈ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೇ ಚೀನಾ ಪದೇ ಪದೇ ನೀಡುತ್ತಿರುವ ಎಚ್ಚರಿಕೆ ನಡುವೆಯೂ ಸ್ವಯಂ ಆಡಳಿತ ಇರುವ ದ್ವೀಪರಾಷ್ಟ್ರ ತೈವಾನ್‌ ಪ್ರಜೆಗಳು ಶನಿವಾರ ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಲಾಯ್‌ ಚಿಂಗ್‌ ಟೆರನ್ನು ಆಯ್ಕೆ ಮಾಡಿದ್ದರು. ಈ ಮೂಲಕ ಜಾಗತಿಕ ಮಟ್ಟದಲ್ಲೂ ಮತ್ತೊಂದು ಆತಂಕ ತಲೆದೂರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದೊಡ್ಡ ಪ್ರಮಾಣದ ನಷ್ಟ ಪಕ್ಕಾ! ಅಕಸ್ಮಾತ್ ಚೀನಾ ಏನಾದರೂ ತೈವಾನ್ ವಿರುದ್ಧ ಯುದ್ಧ ಘೋಷಣೆ ಮಾಡಿದರೆ ಸ್ಥಿತಿ ಕೈಮೀರಿ ಹೋಗಲಿದೆ. ಆಗ ಅನಿವಾರ್ಯ ಸ್ಥಿತಿಯಲ್ಲಿ ಅಮೆರಿಕ ಕೂಡ ಮಧ್ಯ ಪ್ರವೇಶ ಮಾಡಬೇಕಾಗುತ್ತೆ ಎಂಬ ಮಾತು ಕೇಳಿಬರುತ್ತಿದೆ. ತೈವಾನ್ ಪರವಾಗಿ ಅಮೆರಿಕ ನಿಂತರೆ, ಇನ್ನೊಂದು ಕಡೆ ಈ ವಿಚಾರದಲ್ಲಿ ಚೀನಾಗೆ ರಷ್ಯಾ ಬೆಂಬಲ ನೀಡುತ್ತೆ. ಈ ಮೂಲಕ ಜಗತ್ತು ಎರಡು ಪಿಸ್ ಆಗುತ್ತದೆ ಎಂಬ ಭಯ ಆವರಿಸಿದೆ. ಹೀಗಾಗಿ ತೈವಾನ್ & ಚೀನಾ ನಡುವಿನ ಯುದ್ಧ ಜಗತ್ತಿಗೆ ಬರೋಬ್ಬರಿ 10 ಟ್ರಿಲಿಯನ್ ಡಾಲರ್ ನಷ್ಟ ಉಂಟುಮಾಡಬಹುದು ಎಂದು ವರದಿಯೊಂದು ಹೇಳಿದೆ.

Previous Post
ಗೆಳತಿಯಂತೆ ವೇಷ ಧರಿಸಿ ಪರೀಕ್ಷೆ ಬರೆಯಲು ಹೋದ ಪ್ರಿಯತಮನ ಬಂಧನ
Next Post
ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಸಾರಿದೆಯಾ ಬ್ರಿಟನ್?

Recent News