ದೆಹಲಿಗೆ ಪ್ರತಿಭಟಗೆ ತೆರಳುತ್ತಿದ್ದ ರಾಜ್ಯದ ನೂರಕ್ಕೂ ಅಧಿಕ ರೈತರ ಬಂಧನ

ದೆಹಲಿಗೆ ಪ್ರತಿಭಟಗೆ ತೆರಳುತ್ತಿದ್ದ ರಾಜ್ಯದ ನೂರಕ್ಕೂ ಅಧಿಕ ರೈತರ ಬಂಧನ

ನವದೆಹಲಿ : ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರೈತರು ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಕರ್ನಾಟಕದಿಂದ ಆಗಮಿಸುತ್ತಿದ್ದ ರೈತರನ್ನು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

ದೆಹಲಿಗೆ ಆಗಮಿಸುವ ವೇಳೆ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ರೈಲಿನ ಒಳಗೆ ನುಗ್ಗಿದ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿ, ಮಳೆಯರನ್ನು ಸೇರಿ ರೈತರನ್ನು ರೈಲಿನ ಒಳಗೆ ಎಳೆದಾಡಲಾಗಿದೆ, ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ‌.

ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್,ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು,. ಮಂಜೇಶ್ ಸೇರಿ ನೂರಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

ಘಟನೆಯ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ನಾಳೆ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆಗೆ ತಿರ್ಮಾನಿಸಿದೆ, ಭರವಸೆಗಳನ್ನು ನೀಡಿ ಒಂದು ವರ್ಷವಾದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ, ರೈತರ ಸಾಲ ಮನ್ನಾ, ರೈತರಿಗೆ ಪಿಂಚಣಿ, ಬೆಂಬಲ ಬೆಲೆ ಕಾನೂನು, ಸ್ವಾಮಿನಾಥನ್ ವರದಿ ಅನಿಷ್ಠಾನಕ್ಕೆ ಮನವಿ ಮಾಡಿದೆ ಕೇಂದ್ರ ಸರ್ಕಾರ ಈವರೆಗೂ ಬೇಡಿಕೆ ಈಡೇರಿಸಿಲ್ಲ

ಈ ಹಿನ್ನಲೆ ಮತ್ತೆ ಪ್ರತಿಭಟನೆಗೆ ಕರೆ ನೀಡಿದೆ ನಾಳಿನ ಪ್ರತಿಭಟನೆಗೂ ಮುನ್ನ ರೈತರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ ದೆಹಲಿಗೆ ಆಗಮಿಸುವ ರೈತರನ್ನು ತಡೆಯಲಾಗುತ್ತಿದೆ ಕರ್ನಾಟಕದಿಂದ ಆಗಮಿಸುತ್ತಿದ್ದ ನೂರಕ್ಕೂ ಅಧಿಕ ರೈತರನ್ನು ಭೂಪಾಲ್ ನಲ್ಲಿ ಬಂಧಿಸಿದೆ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದು, ನನ್ನ ಪತ್ನಿಯೂ ಸೇರಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous Post
ತಮಿಳುನಾಡಿಗೆ ಕಾವೇರಿ ನೀರಿ ಹರಿಸಲು CWRC ಶಿಫಾರಸ್ಸು
Next Post
ಮಾತೃ ಭಾಷೆಯಲ್ಲಿ ಸಿಎಪಿಎಫ್ ಪರೀಕ್ಷೆ ಬರೆಯಲು ಅನುಮತಿ

Recent News