ದೇಶವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿದೆ 17 ನೇ ಲೋಕಸಭೆಯ ಕಡೆಯ ಭಾಷಣದಲ್ಲಿ ಮೋದಿ ಪ್ರತಿಪಾದನೆ

ದೇಶವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿದೆ 17 ನೇ ಲೋಕಸಭೆಯ ಕಡೆಯ ಭಾಷಣದಲ್ಲಿ ಮೋದಿ ಪ್ರತಿಪಾದನೆ

ನವದೆಹಲಿ : ಕಳೆದ ಐದು ವರ್ಷಗಳಲ್ಲಿ ದೇಶವು ಹಲವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿದೆ, ಸುಧಾರಣೆ ಮತ್ತು ಕಾರ್ಯಕ್ಷಮತೆ ಎರಡೂ ನೋಡಲು ಸಿಗುವುದು ಬಹಳ ಅಪರೂಪ ಈ ಅವಧಿಯಲ್ಲಿ ನಾವು ನಮ್ಮ ಕಣ್ಣಮುಂದೆಯೇ ಪರಿವರ್ತನೆಯನ್ನು ನೋಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 17 ನೇ ಲೋಕಸಭೆ ಅಂತ್ಯದ ಹಿನ್ನಲೆ ತಮ್ಮ ಕಡೆಯ ಭಾಷಣ ಮಾಡಿದ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದರು‌.

17ನೇ ಲೋಕಸಭೆಯ ಉತ್ಪಾದಕತೆ ಶೇಕಡಾ 97 ರಷ್ಟಿದ್ದು, ಈ ಅವಧಿಯಲ್ಲಿ 30 ಮಸೂದೆಯನ್ನು ಅಂಗೀಕರಿಸಲಾಗಿದೆ. ಜನರ ದಿನನಿತ್ಯದ ಜೀವನದಿಂದ ಸರ್ಕಾರವು ಎಷ್ಟು ಬೇಗನೆ ಹೊರಬರುತ್ತದೆಯೋ ಪ್ರಜಾಪ್ರಭುತ್ವವು ಹೆಚ್ಚು ಬಲಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು, ನಮ್ಮ ಸರ್ಕಾರ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ದಲ್ಲಿ ನಂಬಿಕೆಯನ್ನು ಹೊಂದಿದೆ ಪ್ರತಿಪಾದಿಸಿದರು.

ಈ ಲೋಕಸಭೆಯ ಅವಧಿಯಲ್ಲಿ ಹಲವು ತಲೆಮಾರುಗಳು ದೀರ್ಘಕಾಲದಿಂದ ಕಾಯುತ್ತಿದ್ದ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಲೋಕಸಭೆಯ ಅವಧಿಯಲ್ಲಿ 370 ನೇ ವಿಧಿಯನ್ನು ಸಹ ರದ್ದುಗೊಳಿಸಲಾಯಿತು. ಸಂವಿಧಾನವನ್ನು ರಚಿಸಿದವರು ಇದಕ್ಕಾಗಿ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಜಮ್ಮು ಮತ್ತು ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದರು, ಇಂದು, ನಾವು ಸಾಮಾಜಿಕ ನ್ಯಾಯದ ನಮ್ಮ ಬದ್ಧತೆಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಮಾಜಿಕ ನ್ಯಾಯವನ್ನು ತಂದಿದ್ದೇವೆ ಎಂದು ನಾವು ಸಂತೃಪ್ತರಾಗಿದ್ದೇವೆ. ಭಯೋತ್ಪಾದನೆಯು ಮುಳ್ಳಿನಂತೆ ಚುಚ್ಚುತ್ತಿತ್ತು. ನಾವು ಭಯೋತ್ಪಾದನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನನ್ನು ರಚಿಸಿದ್ದೇವೆ, ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಈ ರೀತಿಯ ಶಕ್ತಿಯನ್ನು ಪಡೆಯುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದರು.

ಚುನಾವಣೆಗಳು ಹೆಚ್ಚು ದೂರವಿಲ್ಲ, ಕೆಲವರು ಆತಂಕಕ್ಕೊಳಗಾಗಬಹುದು. ಆದರೆ ಇದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶವಾಗಿದೆ. ನಮ್ಮ ಚುನಾವಣೆಗಳು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತವೆ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯವನ್ನು ಅನುಸರಿಸುತ್ತವೆ ಎಂದು ನಾನು ನಂಬುತ್ತೇನೆ, ಇದು ಜಗತ್ತನ್ನು ಆಶ್ಚರ್ಯಗೊಳಿಸುತ್ತದೆ. ಬ್ರಿಟಿಷರು ನೀಡಿದ ದಂಡ ಸಂಹಿತೆಯಲ್ಲೇ 75 ವರ್ಷ ಬದುಕಿದ್ದೇವೆ, ಹೊಸ ಪೀಳಿಗೆಗೆ ದೇಶ 75 ವರ್ಷಗಳ ಕಾಲ ದಂಡ ಸಂಹಿತೆಯಡಿ ಬದುಕಿರಬಹುದು, ಆದರೆ ಮುಂದಿನ ಪೀಳಿಗೆ ನ್ಯಾಯ ಸಂಹಿತೆಯೊಂದಿಗೆ ಬದುಕುತ್ತದೆ ಇದು ನಿಜವಾದ ಪ್ರಜಾಪ್ರಭುತ್ವ ಎಂದು ಹೆಮ್ಮೆಯಿಂದ ಹೇಳಬಹುದು.

ಮುಂದಿನ 25 ವರ್ಷಗಳು ನಮ್ಮ ದೇಶಕ್ಕೆ ಬಹಳ ಮುಖ್ಯ, ರಾಜಕೀಯ ಚಟುವಟಿಕೆಗಳು ತಮ್ಮ ಸ್ಥಾನವನ್ನು ಹೊಂದಿವೆ ಆದರೆ ದೇಶದ ಆಕಾಂಕ್ಷೆಗಳು, ನಿರೀಕ್ಷೆಗಳು, ಕನಸುಗಳು ಮತ್ತು ಸಂಕಲ್ಪವೆಂದರೆ ಈ 25 ವರ್ಷಗಳು ದೇಶವು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತದೆ. ರಾಮ ಮಂದಿರಾ ಮುಂದಿನ ತಲೆಮಾರಿಗೆ ಇದು ಹೆಮ್ಮೆಯನ್ನು ಮೂಡಿಸಲಿದೆ, ಇದರಲ್ಲಿ ಸಂವೇದನೆ ಸಂಕಲ್ಪ ಇದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವವೂ ಇದೆ ಎಂದು ಮೋದಿ ಹೇಳಿದರು.

Previous Post
ಪಂಜಾಬ್, ಚಂಡೀಗಢದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್
Next Post
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದ ರೈತ ಮುಖಂಡರು

Recent News