ನಮ್ಮ ಅಪ್ಪ ಸಂಘಿ ಅಲ್ಲ: ರಜನಿಕಾಂತ್‌ ಪುತ್ರಿ ಐಶ್ವರ್ಯಾ ಹೇಳಿಕೆ

ನಮ್ಮ ಅಪ್ಪ ಸಂಘಿ ಅಲ್ಲ: ರಜನಿಕಾಂತ್‌ ಪುತ್ರಿ ಐಶ್ವರ್ಯಾ ಹೇಳಿಕೆ

ಚೆನ್ನೈ, ಜ. 27: ಚಿತ್ರ ಲಾಲ್ ಸಲಾಮ್‌ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ತಮ್ಮ ತಂದೆ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಬೆಂಬಲವಾಗಿದ್ದಾರೆ ಎಂಬ ಟೀಕೆಗಳ ವಿರುದ್ಧ ಪ್ರತಿಕ್ರಿಯಿಸಿದ್ದು, ಆತ ‘ಸಂಘಿ’ ಆಗಿದ್ದರೆ ಲಾಲ್‌ ಸಲಾಂ ಸಿನಿಮಾ ಮಾಡುತ್ತಿರಲಿಲ್ಲ ಎಂದೂ ಹೇಳಿದ್ದಾರೆ. ‘ಸಂಘಿ’ ಎಂಬುದು ಸಂಘಪರಿವಾರದ ಹಿಂದುತ್ವ ಸಿದ್ಧಾಂತದ ಬೆಂಬಲಿಗರ ವಿರುದ್ಧ ಬಳಸುವ ಪದವಾಗಿದೆ. ಇದೇ ಪದವನ್ನು ಐಶ್ವರ್ಯಾ ರಜನಿಕಾಂತ್ ಅವರು ಟ್ವೀಟ್‌ನಲ್ಲಿ ಬಳಸಿದ್ದು, ತಂದೆಯ ಪರ ಬೆಂಬಲವನ್ನು ಸೂಚಿಸಿದ್ದಾರೆ.

ಫೆಬ್ರವರಿ 9ರಂದು ಲಾಲ್ ಸಲಾಮ್‌ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ರಜನಿಕಾಂತ್ ಮುಸ್ಲಿಂ ಪಾತ್ರದ ‘ಮೊಯ್ದೀನ್ ಭಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾನು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಂಡವು ಜನರು ಏನು ಮಾತನಾಡುತ್ತಾರೆ ಎಂಬುದನ್ನು ನನಗೆ ತೋರಿಸುತ್ತಲೇ ಇರುತ್ತಾರೆ. ಇತ್ತೀಚೆಗ ರಜನಿಕಾಂತ್‌ಗೆ ಜನರು ‘ಸಂಘಿ’ ಎಂಬ ಒಂದು ಪದವನ್ನು ಹೇಳುತ್ತಿದ್ದಾರೆ ಮತ್ತು ಜನರು ಅವರನ್ನು ಏಕೆ ಆ ರೀತಿ ಕರೆಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಇದನ್ನು ಹೇಳುತ್ತೇನೆ, ಸೂಪರ್‌ಸ್ಟಾರ್ ರಜನಿಕಾಂತ್ ‘ಸಂಘಿ’ ಅಲ್ಲ. ‘ಸಂಘಿ’ ಆಗಿದ್ದರೆ ಲಾಲ್ ಸಲಾಂ ಮಾಡುತ್ತಿರಲಿಲ್ಲ. ಈ ಸಿನಿಮಾವನ್ನು ಮಾನವೀಯತೆ ಇರುವ ವ್ಯಕ್ತಿಯಿಂದ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಜನವರಿ 22ರಂದು ತಮಿಳು ನಟ ಧನುಷ್ ಮತ್ತು ರಜನಿಕಾಂತ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ವ್ಯಾಪಕ ಟೀಕೆ ಮತ್ತು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಕೆಲವು ದಿನಗಳ ನಂತರ ಐಶ್ವರ್ಯಾ ರಜನಿಕಾಂತ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದು ಸೂಪರ್‌ಸ್ಟಾರ್‌ನ ರಾಜಕೀಯ ಒಲವಿನ ಮೇಲೆ ಮತ್ತೆ ಗಮನ ಸೆಳೆಯಿತು. ತಮಿಳು ನಿರ್ದೇಶಕ ಪಾ ರಂಜಿತ್ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗುವುದು ವೈಯಕ್ತಿಕ ಆಯ್ಕೆ ಎಂದು ಹೇಳಿದ್ದರು. 500 ವರ್ಷಗಳಷ್ಟು ಹಳೆಯದಾದ ಸಮಸ್ಯೆ ಕೊನೆಗೊಂಡಿದೆ. ಆದರೆ ಆ ಸಮಸ್ಯೆಯ ಹಿಂದಿನ ರಾಜಕೀಯವನ್ನು ನಾವು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ರಜನಿಕಾಂತ್ ತಮ್ಮ ಹಿಂದಿನ ಬ್ಲಾಕ್‌ಬಸ್ಟರ್ ‘ಜೈಲರ್’ ವಿಶೇಷ ಪ್ರದರ್ಶನದಲ್ಲಿ ಆಗಸ್ಟ್ 18ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಲಕ್ನೋದಲ್ಲಿ ಭಾಗವಹಿಸಿದ್ದರು. ಅವರು ಯೋಗಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಇದು ತಮಿಳುನಾಡಿನ ಜನರಿಂದ ವ್ಯಾಪಕವಾದ ಟೀಕೆಗೆ ಕಾರಣವಾಗಿತ್ತು. ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ರಜನಿಕಾಂತ್, ಯೋಗಿಗಳು ಮತ್ತು ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಅವರ ಆಶೀರ್ವಾದಕ್ಕಾಗಿ ಅವರ ಪಾದಗಳನ್ನು ಸ್ಪರ್ಶಿಸುವುದು ಅಭ್ಯಾಸವಾಗಿದೆ ಎಂದು ಸಮರ್ಥಿಸಿದ್ದರು. ನವೆಂಬರ್ 2019 ರಲ್ಲಿ, ರಜನಿಕಾಂತ್ ಅವರು ಬಿಜೆಪಿಗೆ ಸೇರಲು ಆಹ್ವಾನದ ಕುರಿತ ಸುದ್ದಿಯನ್ನು ತಳ್ಳಿಹಾಕಿದ್ದರು. ಮಾಧ್ಯಮದ ಒಂದು ವಿಭಾಗ ಮತ್ತು ಕೆಲವು ವ್ಯಕ್ತಿಗಳು ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

Previous Post
ಜೆಡ್ಜ್ ಗಳ ನಡುವೆ ಸಂಘರ್ಷ: ಕಲ್ಕತ್ತಾ ಹೈಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ
Next Post
ಮರಾಠ ಮೀಸಲಾತಿ: ತಮ್ಮದೇ ಸರಕಾರದ ವಿರುದ್ಧ ಸಿಡಿದೆದ್ದ ಸಚಿವ

Recent News