‘ನಮ್ಮ ಮೆಟ್ರೋ’ ಸಿಹಿ ಸುದ್ದಿ: ಪಂದ್ಯಾವಳಿ ದಿನ ರೈಲು ಸೇವೆ ವಿಸ್ತರಣೆ, ದಿನಾಂಕ, ಸಮಯದ ಮಾಹಿತಿ

‘ನಮ್ಮ ಮೆಟ್ರೋ’ ಸಿಹಿ ಸುದ್ದಿ: ಪಂದ್ಯಾವಳಿ ದಿನ ರೈಲು ಸೇವೆ ವಿಸ್ತರಣೆ, ದಿನಾಂಕ, ಸಮಯದ ಮಾಹಿತಿ

ಬೆಂಗಳೂರು, ಜನವರಿ 15: ಬೆಂಗಳೂರಿನಲ್ಲಿ ಟಿ-20 ಪಂದ್ಯಾವಳಿ ನಡೆಯಲಿದೆ. ಹೀಗಾಗಿ ಪ್ರತಿಬಾರಿಯಂತೆ ಈ ಸಲುವ ಬೆಂಗಳೂರು ನಮ್ಮ ಮೆಟ್ರೋ (Bengaluru Namma metro) ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದೆ. ಯಾವ ದಿನ, ವಿಸ್ತರಣೆಯ ಸಮಯದ ಮಾಹಿತಿ ಇಲ್ಲಿ ತಿಳಿಯಿರಿ. ಇದು ಕ್ರಿಕೆಟ್ ಪ್ರೇಮಿಗಳ ಜೊತೆಗೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಇಂಡಿಯಾ vs ಅಫ್ಘಾನಿಸ್ತಾನ ಮಧ್ಯೆ ಮೂರನೇ ಟಿ-20 ಪಂದ್ಯಾವಳಿಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಜನವರಿ 17ರಂದು ಬುಧವಾರದಂದು ಕ್ರಿಕೆಟ್ ಪಂದ್ಯ ನಡೆಯಲಿದ್ದು, ಅಂದು ಅಭಿಮಾನಿಗಳಿಗೆ, ಸಾರ್ವಜನಿಕರು ಓಡಾಡಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ನಿಗದಿತ ಸಮಯಕ್ಕಿಂತಲೂ ಹೆಚ್ಚು ಸಮಯ ರೈಲು ಸೇವೆ ನೀಡಲಿದೆ.

ಜನವರಿ 17 ರಂದು ಬೆಂಗಳೂರಿನಲ್ಲಿ BMRCL ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ರೈಲು ಸೇವೆಗಳನ್ನು ರಾತ್ರಿ 11.45 ಗಂಟೆಯವರೆಗೆ ವಿಸ್ತರಣೆ ಮಾಡಿದೆ.

ಟಿಕೆಟ್ ಖರೀದಿ ಸಮಯದ ವಿವರ ಪ್ರಯಾಣಿಕರ ಅನೂಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ದಿನಾಂಕ 17ನೇ ಜನವರಿ 2024 ಬುಧವಾರ ಮಧ್ಯಾಹ್ನ 02 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಕಾಗದದ ಟಿಕೆಟ್‌ಗಳು ರಾತ್ರಿ 08 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ದಿನದ ವಿಸ್ತ್ರತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತ ಆಗಿರುತ್ತದೆ.

ಪೇಪರ್ ಟಿಕೆಟ್, ರಿಯಾಯಿತಿ‌ ವ್ಯವಸ್ಥೆ ರೂ. 50/-ರ ಪೇಪರ್ ಟಿಕೆಟ್ ಜೊತೆಗೆ, ಸಾಮಾನ್ಯ ದರದಲ್ಲಿ ಶೇಕಡಾ 5% ರಿಯಾಯಿತಿಯೊಂದಿಗೆ ಕ್ಯೂ.ಆರ್ ಕೋಡ್ ಟಿಕೆಟ್‌ಗಳು, ಪಂದ್ಯದ ದಿನದಂದು ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಿರುತ್ತದೆ. ಅನೂಕೂಲಕರ ಪ್ರಯಾಣಕ್ಕಾಗಿ ಕ್ರಿಕೆಟ್ ಪಂದ್ಯದ ಆರಂಭಕ್ಕೆ ವಾಟ್ಸಾಪ್, ನಮ್ಮ ಮೆಟ್ರೋ ಆಫ್, ಪೇಟಿಎಂ ಮತ್ತು ಕ್ಯೂಆರ್‌ಕೋಡ್ ಬಳುಸುವಂತೆ ನಮ್ಮ ಮೆಟ್ರೋ ಸಾರ್ವಜನಿಕರಿಗೆ ಸೂಚಿಸಿದೆ.

ಸ್ಮಾರ್ಟ್‌ಕಾರ್ಡ್ ಸಹ ಬಳಸಬಹುದು ಸ್ಮಾರ್ಟ್ ಕಾರ್ಡ್‌ಗಳು ಮತ್ತು NCMC ಕಾರ್ಡ್ ಗಳನ್ನು ಸಹ ಎಂದಿನಂತೆ ಬಳಸಬಹುದು. ವಿಸ್ತ್ರತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಪೇಪರ್ ಟಿಕೆಟ್‌ಗಳನ್ನು ಮಾತ್ರ ಅನುಮತಿಸಲಾಗಿದೆ. ಕಬ್ಬನ್ ಪಾರ್ಕ್‌ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಸೋಮವಾರ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ.

Previous Post
ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್
Next Post
ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ: ರಾಜಕೀಯ ತಂತ್ರಗಾರಿಕೆ ಇನ್ನೂ ಮಾತ್ರ ನಿಗೂಢ!

Recent News