ಪಾಠ ಕೇಳುತ್ತಿರುವ ವೇಳೆಯಲ್ಲೇ ಹೃದಯಾಘಾತದಿಂದ ಯುವಕ ಸಾವು: ಸಿಸಿಟಿವಿಯಲ್ಲಿ ಸೇರೆಯಾಯ್ತು ಕೊನೆ ಕ್ಷಣದ ದೃಶ್ಯಾವಳಿ

ಪಾಠ ಕೇಳುತ್ತಿರುವ ವೇಳೆಯಲ್ಲೇ ಹೃದಯಾಘಾತದಿಂದ ಯುವಕ ಸಾವು: ಸಿಸಿಟಿವಿಯಲ್ಲಿ ಸೇರೆಯಾಯ್ತು ಕೊನೆ ಕ್ಷಣದ ದೃಶ್ಯಾವಳಿ

ಮಧ್ಯಪ್ರದೇಶ, ಜನವರಿ19: ಹಿಂದಿನ ಕಾಲದಲ್ಲಿ ಮಧ್ಯವಯಸ್ಕ ಅಥವಾ ವೃದ್ಧಾಪ್ಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು, ಮಕ್ಕಳು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಹೌದು,ಇಂದೋರ್​ನ ಖಾಸಗಿ ಕೋಚಿಂಗ್ ಕ್ಲಾಸ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿರುವಾಗಲೇ ನೋಡ ನೋಡುತ್ತಲೇ ತನ್ನ ಸ್ನೇಹಿತರ ಮುಂದೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೃದಯಘಾತದಿಂದ ಪಾಠ ಕೇಳಿತ್ತಿರುವಾಗಲೇ ಕೊನೆ ಉಸಿಸೆಳೆದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ನಗರದ ಭನ್ವಾರ್ಕುವಾನ್ ನಿವಾಸಿ ಮಾಧವ್ (18), ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪ್ರವೇಶ ಪರೀಕ್ಷೆಗೆ ಖಾಸಗಿ ಕೋಚಿಂಗ್ ಕ್ಲಾಸ್‌ನಲ್ಲಿ ತಯಾರಿ ನಡೆಸುತ್ತಿದ್ರು. ಮಾಧವ್ ಅವರು ತನ್ನ ಸ್ನೇಹಿತರೊಂದಿಗೆ ತರಗತಿಯಲ್ಲಿ ಪಾಠ ಕೇಳುತ್ತಿರುವ ವೇಳೆಯಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಧವ್ ಆರಂಭದಲ್ಲಿ MPPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಇತರ ಎಲ್ಲ ವಿದ್ಯಾರ್ಥಿಗಳ ನಡುವೆ ಕುಳಿತುಕೊಂಡು ಪಾಠವನ್ನ ಕೇಳುತ್ತಿದ್ದಾರೆ. ಈ ವೇಳೆ ಆಯಾಸಗೊಂಡತೆ ಕಾಣುತ್ತದೆ. ಕೆಲಹೊತ್ತಿನಲ್ಲೇ ಮೇಜಿನ ಮೇಲೆ ಬಿದ್ದರೂ ಕೂಡ ಯಾರಿಗೂ ತಿಳಿದಿಲ್ಲ. ಕೆಲ ಸೆಕೆಂಡುಗಳಲ್ಲಿ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ತಿಳಿಸಿದೆ. ಮಾಧವ್​ ನೆಲಕ್ಕೆ ಕುಸಿದು ಬಿದ್ದಾಗ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಸುತ್ತುವರಿದಿರುವುದು 32 ಸೆಕೆಂಡ್‌ ವಿಡಿಯೋದಲ್ಲಿ ಸೆರೆಯಾಗಿದೆ. ಪಾಠ ಕೇಳುತ್ತಿರುವ ಸಂದರ್ಭದಲ್ಲಿ ಯುವಕ ಸಾವನ್ನಿಪ್ಪಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Previous Post
ಈ ನಾಲ್ಕು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡ : ಕ್ಷೇತ್ರಗಳ ವಿವರ ನೀಡಿದ ಹೆಚ್‌ ಡಿ ಕುಮಾರಸ್ವಾಮಿ 
Next Post
ಹಿಂದುತ್ವವಾದಿಗಳ ಒತ್ತಡಕ್ಕೆ ಮಣಿದು ನಯನತಾರಾ ಕ್ಷಮೆಯಾಚನೆ

Recent News