ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ದೆಹಲಿಯಲ್ಲಿ ಧೀಢಿರ್ ಪ್ರತಿಭಟನೆ ಸಾಧ್ಯತೆ, ರೈತ ಹೋರಾಟ ಗಂಭೀರತೆ ಬಗ್ಗೆ ಗುಪ್ತಚರ ಇಲಾಖೆ ವರದಿ

ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ದೆಹಲಿಯಲ್ಲಿ ಧೀಢಿರ್ ಪ್ರತಿಭಟನೆ ಸಾಧ್ಯತೆ, ರೈತ ಹೋರಾಟ ಗಂಭೀರತೆ ಬಗ್ಗೆ ಗುಪ್ತಚರ ಇಲಾಖೆ ವರದಿ

ನವದೆಹಲಿ : ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ಜಾರಿ ಸೇರಿ ವಿವಿಧ ಬೇಡಿಕೆಗಳಿಗೆ ಈಡೇರಿಕೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಸಣ್ಣ ಸಣ್ಣ ಗುಂಪುಗಳಲ್ಲಿ ದೆಹಲಿಗೆ ಆಗಮಿಸುತ್ತಿರುವ ರೈತರು ಪ್ರಧಾನಿ ಹಾಗೂ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಬಹುದು ಎಂದು ಎಚ್ಚರಿಕೆ ನೀಡಿದೆ‌.

ಕೇಂದ್ರ ಸಚಿವರ ಜೊತೆಗಿನ ಮಾತುಕತೆ ವಿಫಲವಾದ ಬಳಿಕ ರೈತರು ದೆಹಲಿ ಚಲೋ ಹೋರಾಟ ಆರಂಭಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ತನ್ನ ವರದಿ ನೀಡಿದೆ. ವರದಿ ಪ್ರಕಾರ ಪಂಜಾಬ್ ಒಂದರಿಂದಲೇ 1500 ಟ್ರ್ಯಾಕ್ಟರ್, 509 ವಿವಿಧ ವಾಹನಗಳ ಮೂಲಕ ರೈತರು ದೆಹಲಿಯತ್ತ ಹೊರಟಿದ್ದಾರೆ, ಹರಿಯಾಣದಲ್ಲಿ ಈ ಸಂಖ್ಯೆ ಇನ್ನು ಹೆಚ್ಚಳವಾಗಲಿದೆ ಎಂದು ಹೇಳಿದೆ.

ಇಷ್ಟು ಮಾತ್ತವಲ್ಲದೇ ಸುಮಾರು ಆರು ತಿಂಗಳಿಗೆ ಬೇಕಾಗುವ ಆಹಾರ ಧಾನ್ಯಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಂಗ್ರಹ ಮಾಡಿಕೊಂಡಿದ್ದು, ಟ್ರ್ಯಾಕ್ಟರ್‌ಗಳನ್ನೆ ಶೆಲ್ಟರ್ ಮಾಡಿಕೊಂಡಿದ್ದಾರೆ ಹೀಗಾಗೀ ಕಳೆದ ಬಾರಿಯಂತೆ ದೆಹಲಿಯ ಗಡಿಯಲ್ಲಿ ಸುಧೀರ್ಘ ಧರಣಿ ನಡೆಯಬಹುದು ಎಂದು ಅದು ಎಚ್ಚರಿಸಿದೆ. ಸುಧೀರ್ಘ ಹೋರಾಟಕ್ಕಾಗಿ ದಕ್ಷಿಣ ರಾಜ್ಯಗಳ ಬೆಂಬಲವನ್ನು ಕೋರಲಾಗಿದೆ‌.

ಮುಂದುವರಿದು ರೈತರು ಸಣ್ಣ ಗುಂಪುಗಳಲ್ಲಿ ಬಂದು ದೆಹಲಿಯ ಸುತ್ತಮುತ್ತಲಿನ ಗುರುದ್ವಾರಗಳು, ಧರ್ಮಶಾಲಾಗಳು, ಆಶ್ರಮಗಳು, ಅತಿಥಿ ಗೃಹಗಳಲ್ಲಿ ಅಡಗಿಕೊಂಡಿದ್ದು ಕ್ಷಿಪ್ರ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದ್ದಾರೆ, ಅವರು ಪ್ರಧಾನ ಮಂತ್ರಿ ಭವನ, ಗೃಹ ಸಚಿವರ ಭವನದಂತಹ ಸ್ಥಳಗಳು ಸಂಭಾವ್ಯ ಪ್ರತಿಭಟನೆಯ ಗುರಿಗಳಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದೆ.

Previous Post
ರೈತರ ಹೋರಾಟಕ್ಕೆ ಕಾಂಗ್ರೇಸ್ ಬೆಂಬಲ – ಖರ್ಗೆ ಘೋಷಣೆ
Next Post
ನಮ್ಮ ಮೆಟ್ರೋ ಈ ಮಾರ್ಗಗಳು ನೀರ್ಣಾಯಕ: 1,150 ಹೊಸ ಬಸ್ ಬಿಡುಗಡೆ: ಗೆಹ್ಲೋಟ್

Recent News