ಪ್ರಶ್ನೆಗಾಗಿ ನಗದು ಪ್ರಕರಣ: ವಕೀಲ ಜೈ ಅನಂತ್ ಗೆ ಸಿಬಿಐನಿಂದ ಸಮನ್ಸ್

ಪ್ರಶ್ನೆಗಾಗಿ ನಗದು ಪ್ರಕರಣ: ವಕೀಲ ಜೈ ಅನಂತ್ ಗೆ ಸಿಬಿಐನಿಂದ ಸಮನ್ಸ್

ನವದೆಹಲಿ, ಜ. 23: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯಿ ಅವರಿಗೆ ಸಮನ್ಸ್ ನೀಡಿದ್ದು, ಅವರನ್ನು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮಹುವಾ ಮೊಯಿತ್ರಾ ಅವರ ವಿರುದ್ಧದ ‘ಪ್ರಶ್ನೆಗಾಗಿ ನಗದು’ (ಕ್ಯಾಶ್ ಫಾರ್ ಕ್ವೆರಿ) ಆರೋಪದ ಕುರಿತು, ಲೋಕಸಭೆ ನೈತಿಕ ಸಮಿತಿಯ ವರದಿಯ ನಂತರ ಕಳೆದ ತಿಂಗಳು ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.

ಸಂಸತ್ತಿನಲ್ಲಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ₹2 ಕೋಟಿ ನಗದು ಮತ್ತು “ಐಷಾರಾಮಿ ಉಡುಗೊರೆ ವಸ್ತುಗಳು” ಸೇರಿದಂತೆ ಲಂಚ ಪಡೆದ ಆರೋಪ 49 ವರ್ಷದ ಮಾಝಿ ಸಂಸದೆ ಮೋಯಿತ್ರಾ ಅವರ ಮೇಲಿದೆ. ನೈತಿಕ ಸಮಿತಿಯು ಮೊಯಿತ್ರಾ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸ್ಪೀಕರ್ ಅವರಿಗೆ ವರದಿ ನೀಡಿತ್ತು. ಅವರ ಕ್ರಮಗಳು “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಅಪರಾಧ” ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದರು. ಮೊಯಿತ್ರಾ ಸರ್ಕಾರದ ವಿರುದ್ಧ ಕೇಳಿರುವ ಪ್ರಶ್ನೆಗೆ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತೃಣಮೂಲ ಸಂಸದರ ವಿರುದ್ಧ ಜೈ ಅನಂತ್ ದೆಹದ್ರಾಯಿ ಅವರ ಪತ್ರವನ್ನು ಆಧರಿಸಿ ದೂರು ನೀಡಲಾಗಿತ್ತು; ಸ್ಪೀಕರ್ ಈ ವಿಷಯವನ್ನು ನೈತಿಕ ಸಮಿತಿಗೆ ಒಪ್ಪಿಸಿದ್ದರು.

ಅಕ್ಟೋಬರ್‌ನಲ್ಲಿ ದೇಹದ್ರಾಯ್ ಅವರು ಮಹುವಾ ಮೊಯಿತ್ರಾ ವಿರುದ್ಧ ತಮ್ಮ ಬಳಿಯಿದ್ದ ಎಲ್ಲ ಪುರಾವೆಗಳನ್ನು ಲೋಕಸಭೆಯ ನೈತಿಕ ಸಮಿತಿಯ ಮುಂದೆ ಇರಿಸಿದ್ದರು. ಅಫಿಡವಿಟ್‌ನಲ್ಲಿ, ‘ತೃಣಮೂಲ ಕಾಂಗ್ರೆಸ್ ಸಂಸದರು ತಮ್ಮ ಇಮೇಲ್ ಐಡಿಯನ್ನು ಹೀರಾನಂದನಿ ಅವರೊಂದಿಗೆ ಹಂಚಿಕೊಂಡಿದ್ದಾರೆ, ಇದರಿಂದಾಗಿ ಉದ್ಯಮಿ ತಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು, ಮಹುವಾ ಅವರು ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಬಹುದು’ ಎಂದು ಆರೋಪಿಸಿದ್ದಾರೆ.

Previous Post
ಇಸ್ರೇಲ್‌-ಹಮಾಸ್ ಸಂಘರ್ಷ: ಒಂದೇ ದಿನ 24 ಇಸ್ರೇಲಿ ಸೈನಿಕರು ಸಾವು
Next Post
2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ: ವರದಿ

Recent News