ಬಹುಮತ ಸಾಬೀತುಪಡಿಸಿದ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಎನ್‌ಡಿಎ ಆಡಳಿತ

ಬಹುಮತ ಸಾಬೀತುಪಡಿಸಿದ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಎನ್‌ಡಿಎ ಆಡಳಿತ

ಪಾಟ್ನಾ : ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಬಿಹಾರ ವಿಧಾನಸಭೆಯಲ್ಲಿ ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದೆ. ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳದ ಮೂವರು ಶಾಸಕರು ಸೇರಿದಂತೆ 129 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸಿತು. ಇದಕ್ಕೂ ಮೊದಲು ಸಿಎಂ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ರಚಿಸಿರುವ ಹೊಸ ಸರ್ಕಾರದಲ್ಲಿ ವಿಶ್ವಾಸ ಕೋರಲು ರಾಜ್ಯ ವಿಧಾನಸಭೆಯ ಮುಂದೆ ಪ್ರಸ್ತಾವನೆಯನ್ನು ಮಂಡಿಸಿದರು.

ಇತ್ತೀಚೆಗೆ ಜೆಡಿಯು ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಿತೀಶ್ ಕುಮಾರ್ ಅವರು, ಆರ್‌ಜೆಡಿಯ ಅವಧ್ ಬಿಹಾರಿ ಚೌಧರಿ ಅವರನ್ನು ವಿಧಾನಸಭೆಯ ಸ್ಪೀಕರ್ ಸ್ಥಾನದಿಂದ ವಜಾಗೊಳಿಸುವ ನಿರ್ಣಯವನ್ನು ಸದನವು ಅಂಗೀಕರಿಸಿದ ಕೂಡಲೇ ಪ್ರಸ್ತಾವನೆಯನ್ನು ಮಂಡಿಸಿದರು. 125 ಶಾಸಕರು ಈ ಮಸೂದೆಯ ಪರವಾಗಿ ಮತ ಹಾಕಿದರೆ, 112 ಶಾಸಕರು ವಿರೋಧವಾಗಿ ಮತ ಚಲಾಯಿಸಿದರು.

ಬಹುಮತ ಸಾಬೀತಿನ ಬಳಿಕ ಮಾತನಾಡಿದ ಸಿಎಂ ನಿತೀಶ್ ಕುಮಾರ್, ರಾಜ್ಯದಲ್ಲಿ ಆಡಳಿತದ ಸಮಯದಲ್ಲಿ ಆರ್‌ಜೆಡಿ ಭ್ರಷ್ಟ ಆಚರಣೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ತೇಜಸ್ವಿ ಯಾದವ್ ಅವರನ್ನು ಟೀಕಿಸಿದ ಅವರು ಹೊಸ ಎನ್‌ಡಿಎ ನೇತೃತ್ವದ ಸರ್ಕಾರವು ಅದರ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತದೆ ಎಂದು ಭರವಸೆ ನೀಡಿದರು.

ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಬಗ್ಗೆ ಮಾತನಾಡಿ ಅವರು ರಾಜ್ಯವನ್ನು ಆಳಿದ ಸಮಯದ ಬಗ್ಗೆ ನೆನಪಿಸಿದರು. ಇದಕ್ಕಿಂತ ಮೊದಲು, ತೇಜಸ್ವಿಯಾದವ್ ಅವರ ತಂದೆ ಮತ್ತು ತಾಯಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಗ ಬಿಹಾರದಲ್ಲಿ ಏನಾಯಿತು? ಆ ಸಮಯದಲ್ಲಿ ಯಾರಾದರೂ ರಾತ್ರಿಯಲ್ಲಿ ಹೊರಗೆ ಹೋಗಲು ಧೈರ್ಯ ಮಾಡುತ್ತಿದ್ದರೇ? ಯಾವುದಾರೂ ಒಳ್ಳೆ ರಸ್ತೆ ಇತ್ತೆ? ಅವರು ತಮ್ಮ ವ್ಯಾಪರ ಮಾಡುತಿದ್ದರು ಎಂದು ನಿತೀಶ್ ತಮ್ಮ ಭಾವನಾತ್ಮಕ ಭಾಷಣದಲ್ಲಿ ಹೇಳಿದರು.

Previous Post
ಕಾಂಗ್ರೇಸ್‌ಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಗುಡ್ ಬೈ – ಲೋಕಸಭೆ ಹೊಸ್ತಿಲಲ್ಲಿ ಮಹರಾಷ್ಟ್ರದಲ್ಲಿ ಕಾಂಗ್ರೇಸ್ ಗೆ ಹಿನ್ನಡೆ
Next Post
ವಿವಿಧ ಬೇಡಿಕೆಗಳ ಅಂಗೀಕಾರಕ್ಕಾಗಿ ದೆಹಲಿ ಚಲೋಗೆ ಕರೆ ಇಂದು ದೆಹಲಿಯ ಗಡಿಗಳಲ್ಲಿ ಅನ್ನದಾತರ ಪ್ರತಿಭಟನೆ

Recent News