ಬಾಂಗ್ಲಾ & ಭಾರತ ಬ್ರದರ್ಸ್, ಹೊಸ ರಣತಂತ್ರ ರೂಪಿಸಿದ ಭಾರತ!

ಬಾಂಗ್ಲಾ & ಭಾರತ ಬ್ರದರ್ಸ್, ಹೊಸ ರಣತಂತ್ರ ರೂಪಿಸಿದ ಭಾರತ!

ಬಾಂಗ್ಲಾದೇಶ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಪೈಕಿ ಬಾಂಗ್ಲಾದೇಶ ಕೂಡ ಒಂದಾಗಿದೆ. ಭಾರತದ ಜೊತೆ ಬಾಂಗ್ಲಾ ಉತ್ತಮ ಒಡನಾಟ ಹೊಂದಿದ್ದು, ಈಗ ಅಲ್ಲಿ ಚುನಾವಣೆ ಫಲಿತಾಂಶ ಬಂದಿದೆ. ಹೀಗೆ ಮತ್ತೊಮ್ಮೆ ಬಾಂಗ್ಲಾದೇಶದ ಅಧಿಕಾರ ಹಿಡಿದ ಹಾಲಿ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಮೋದಿಯವರು ಫೋನ್ ಮಾಡಿ ಮಾತನಾಡಿದ್ದಾರೆ. ಹೌದು, ಬಾಂಗ್ಲಾದ ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ & ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ಮಧ್ಯೆ ಬಾಂಗ್ಲಾದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಇದೇ ಭಾನುವಾರ ಅಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷ ಅಭೂತ ಪೂರ್ವ ಬಹುಮತವನ್ನು ಗಳಿಸಿದೆ. ಈ ಮೂಲಕ ಪ್ರಧಾನಿ ಶೇಖ್‌ ಹಸೀನಾ ಸತತ 4ನೇ ಬಾರಿಗೆ ಪ್ರಧಾನಿ ಪಟ್ಟ ಪಡೆದು, ದಾಖಲೆ ನಿರ್ಮಿಸಿದ್ದಾರೆ. ಈ ಹಿನ್ನೆಲೆ ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್‌ ಹಸೀನಾ ಮರು ಆಯ್ಕೆ ಆಗಿದ್ದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ಹೇಳಿದ್ದೇನು? ಈ ಬಗ್ಗೆ ವಿಶೇಷ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಅವರು, ‘ಸಂಸತ್‌ ಚುನಾವಣೆಯಲ್ಲಿ ಸತತ 4ನೇ ಬಾರಿ ಐತಿಹಾಸಿಕ ಜಯ ಸಾಧಿಸಿದ್ದಕ್ಕೆ ಶೇಖ್ ಹಸೀನಾ ಅವರನ್ನ ಅಭಿನಂದಿಸಿದ್ದೇನೆ. ಚುನಾವಣೆ ಯಶಸ್ವಿಯಾಗಿ ನಡೆಸಿದ್ದಕ್ಕೆ ಅಲ್ಲಿನ ಜನರಿಗೂ ಧನ್ಯವಾದ ಸಲ್ಲಿಸುತ್ತೇನೆ. ಭಾರತ & ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಲಪಡಿಸಲು ನಾವು ಬದ್ಧ’ ಎಂದು ಇದೀಗ ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಲ್ಲದೆ ಬಾಂಗ್ಲಾ ಪ್ರಧಾನಿ ಜೊತೆಗೆ ದೂರವಾಣಿ ಮೂಲಕ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.

ಚುನಾವಣೆ ನಡೆದಿದ್ದು ಯಾವಾಗ? ಅಷ್ಟಕ್ಕೂ ಬಾಂಗ್ಲಾದೇಶ ಸಂಸತ್‌ನ ಒಟ್ಟು 300 ಸ್ಥಾನ ಪೈಕಿ 299 ಸ್ಥಾನಕ್ಕೆ ಇದೇ ಭಾನುವಾರ ಚುನಾವಣೆ ನಡೆದಿತ್ತು. ಇಷ್ಟು ಸ್ಥಾನದಲ್ಲಿ ಹಸೀನಾ ನೇತೃತ್ವದ ಪಕ್ಷ 223 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) 11 ಸ್ಥಾನದಲ್ಲಿ ಗೆದ್ದು ಹಿನ್ನಡೆನ ಅನುಭವಿಸಿದೆ. ಇನ್ನುಳಿದ ಪಕ್ಷಗಳು ಹೆಸರಿಗೆ ಮಾತ್ರ ಎಂಬಂತೆ ಒಂದೋ ಎರಡೋ ಸ್ಥಾನ ಗೆದ್ದಿದ್ದು. ಬಾಂಗ್ಲಾದೇಶದ ಜನ ಶೇಖ್‌ ಹಸೀನಾ ಆಡಳಿತಕ್ಕೆ ಮತ್ತೊಮ್ಮೆ ಜೈ ಎಂದಿದ್ದಾರೆ.

5ನೇ ಬಾರಿ ಬಾಂಗ್ಲಾದ ಪ್ರಧಾನಿ 76 ವರ್ಷದ ಹಸೀನಾ ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರಹಮಾನ್‌ ಪುತ್ರಿ. ಶೇಖ್ ಹಸೀನಾ ಬಾಂಗ್ಲಾದೇಶವನ್ನು 2009ರಿಂದ ಆಳುತ್ತಿದ್ದಾರೆ. 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸತತ 4 & ಒಟ್ಟಾರೆ 5ನೇ ಬಾರಿ ಬಾಂಗ್ಲಾದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಇದರೊಂದಿಗೆ ಸ್ವತಂತ್ರ ಬಾಂಗ್ಲಾದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಹಸೀನಾ ಅವರು ಈಗ ಪಾತ್ರರಾಗಿದ್ದಾರೆ.

1947ರಲ್ಲಿ ಜನಿಸದ್ದ ಹಸೀನಾ ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ ಅಂದ್ರೆ ಈಗಿನ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರು ಜನಿಸಿದ್ದರು. 1947ರಲ್ಲಿ ಜನಿಸದ್ದ ಹಸೀನಾ ಢಾಕಾ ವಿವಿ ಮೂಲಕ ತಮ್ಮ ಅಧ್ಯಯನವನ್ನ ಪೂರ್ಣಗೊಳಿಸಿದ್ದರು. ಹಾಗೇ ವಿದ್ಯಾಭ್ಯಾಸ ಮಾಡುತ್ತಿರುವಾಗ ಸಕ್ರಿಯ ರಾಜಕಾರಣಕ್ಕೆ ಕೂಡ ಪ್ರವೇಶ ಮಾಡಿದ್ದರು. ಆ ನಂತರ ಬಾಂಗ್ಲಾದಿಂದ ಹೊರ ಹೋಗಬೇಕಾದ ಪರಿಸ್ಥಿತಿ ಕೂಡ, ಹಸೀನಾ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೀಗ ಅಂತಿಮವಾಗಿ ಸತತ 4ನೆಯ ಬಾರಿಗೆ ಗೆದ್ದು ಬೀಗಿದ್ದು, ಬಾಂಗ್ಲಾ ಜನರು ಹಸೀನಾ ಆಡಳಿತಕ್ಕೆ ಜೈ ಎಂದಿದ್ದಾರೆ.

ಒಟ್ನಲ್ಲಿ ಬಾಂಗ್ಲಾದೇಶದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಭಾರತಕ್ಕೆ ಇದರಿಂದ ಹೆಚ್ಚು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಹಾಗೇ ಭಾರತಕ್ಕೆ ನೆರೆಯ ದೇಶವಾಗಿರುವ ಬಾಂಗ್ಲಾದೇಶ, ಭಾರತದ ಜೊತೆಗೆ ಉತ್ತಮ ಒಡನಾಟ ಹೊಂದಲು ಸದಾ ಪ್ರಯತ್ನ ಕೂಡ ಪಡುತ್ತಿದೆ. ಹಾಗೇ ಭಾರತವೂ ಬಾಂಗ್ಲಾ ಜೊತೆಗಿನ ಸಂಬಂಧ ವೃದ್ಧಿಗೆ ಒತ್ತು ನೀಡುತ್ತಿದೆ.

Previous Post
Maldives-India-Israel: ವಿವಾದ ಮಧ್ಯೆ ಲಕ್ಷದ್ವೀಪದಲ್ಲಿ ‘ಇಸ್ರೇಲ್’ ಮಹತ್ವದ ಘೋಷಣೆ
Next Post
RCB : ಇಷ್ಟವಿಲ್ಲದಿದ್ದರೂ ಹೆದರಿಸಿ ಆರ್‌ಸಿಬಿ ತಂಡಕ್ಕಾಗಿ ಆಡಿಸಿದರು: ಮಾಜಿ ಆಟಗಾರನ ಸ್ಫೋಟಕ ಹೇಳಿಕೆ

Recent News