ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ ದರ ಹೆಚ್ಚಳ ಮಾಡಲು ನಿರ್ಧರಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ ದರ ಹೆಚ್ಚಳ ಮಾಡಲು ನಿರ್ಧರಿಸಿದೆ.

ಬೆಂಗಳೂರು, ಜನವರಿ 07: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ ದರ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಕುರಿತು ದರ ಏರಿಕೆಯ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳು ಪ್ರತಿ ಯುನಿಟ್‌ಗೆ 50ರಿಂದ 60 ಪೈಸೆಯಷ್ಟು ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿವೆ. ಯುನಿಟ್‌ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರ ಪ್ರತಿಯ ದಲ್ಲಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಅದನ್ನು KERC ಪರಿಶೀಲನೆ ನಡೆಸಿ ಬೆಸ್ಕಾಂ ಹಾಗೂ ಗ್ರಾಹಕರು ಇಬ್ಬರಿಗೂ ಹೊರೆಯಾಗದ ರೀತಿಯಲ್ಲಿ ಸದ್ಯದಲ್ಲೇ ದರ ಪರಿಷ್ಕರಣೆ ಮಾಡಲಿದೆ. ಸರ್ಕಾರದ ಅನುಮೋದನೆ ಸಿಕ್ಕಿದರೆ ವಿದ್ಯುತ್ ಪರಿಷ್ಕೃತ ದರವು ಮುಂದಿನ ಏಪ್ರೀಲ್ 1ರಿಂದಲೇ ಅನುಷ್ಠಾನಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ವಿದ್ಯತ್ ದರ ಏರಿಕೆಗೆ ಮನವಿ ಸರಬರಾಜು ಕಂಪನಿ ಕಲಬುರಗಿ ವಿದ್ಯುತ್ ಸರಬರಾಜು ಸಹ ವಿದ್ಯುತ್‌ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ. ವಿದ್ಯುತ್ ಆಘಾತ, ಸಾವಿನ ಘಟನೆಗಳಿಗೆ ಸಚಿವರೇ ನೇರ ಹೊಣೆಗಾರರು: ಸುನೀಲ್‍ಕುಮಾರ್ ಮೂಲಗಳ ಪ್ರಕಾರ ನಾಲ್ಕೂ ಎಸ್ಕಾಂಗಳು ಪ್ರತಿ ಯುನಿಟ್‌ಗೆ 50 ರಿಂದ 60 ಪೈಸೆಯಷ್ಟು ವಿದ್ಯುತ್‌ ದರ ಪರಿಷ್ಕರಣೆಗೆ ಮನವಿ ಮಾಡಿವೆ ಎಂದು ತಿಳಿದು ಬಂದಿದೆ. ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್ ಹೊಡೆಯಲಿದೆ. ಕಲ್ಲಿದ್ದಲು ಖರೀದಿ, ವಿದ್ಯುತ್ ಖರೀದಿ ಹಾಗೂ ವಿದ್ಯುತ್ ಸರಬರಾಜು ವೆಚ್ಚ ಸೇರಿ ದಂತೆ ಹಲವು ಕಾರಣಗಳಿಂದ ನಿರ್ವಹಣೆಗೆ ನಿರ್ವಹಣಾ ಕಂಪನಿಗಳಿಗೆ ಹೊರೆ ಆಗುತ್ತಿದೆ. ಹೀಗಾಗಿ ನಷ್ಟ ಸರಿತೂಗಿಸಲು 2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅವೆಲ್ಲ ಸಂಸ್ಥೆಗಳು ಮನವಿ ಮಾಡಿವೆ.

Previous Post
ಸಬರ್ಬನ್ ರೈಲು: 31 ಮೀ. ಉದ್ದದ ಯು-ಗರ್ಡರ್ ಸಿದ್ಧ
Next Post
ಬೆಳಗಾವಿಯಲ್ಲಿ ಸಂಚಾರ ದಟ್ಟಣೆ ನಿವಾರಿಸಲು 4.50 ಕಿ. ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬುದು ಸತೀಶ್ ಜಾರಕಿಹೊಳಿ ಚಿಂತನೆ

Recent News