ಭಾರತಕ್ಕೆ 75ನೇ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ ಕೆನಡಾ!

ಭಾರತಕ್ಕೆ 75ನೇ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ ಕೆನಡಾ!

ಭಾರತ & ಕೆನಡಾ ಈಗ ಶತ್ರುಗಳ ರೀತಿ ಕಿತ್ತಾಡುತ್ತಿವೆ. ಅದರಲ್ಲೂ ಕೆನಡಾ ಪ್ರಧಾನಿ ನೀಡಿದ್ದ ಎಡವಟ್ಟು ಹೇಳಿಕೆ ಕಿಚ್ಚು ಹೊತ್ತಿಸಿದೆ. ಖಲಿಸ್ತಾನಿ ಉಗ್ರರನ್ನು ಬೆಂಬಲಿಸುವ ಅಬ್ಬರದಲ್ಲಿ ಇದೇ ಕೆನಡಾ ಭಾರಿ ಎಡವಟ್ಟು ಮಾಡಿಕೊಂಡಿದೆ. ಹೀಗಿದ್ದಾಗ ಭಾರತ & ಕೆನಡಾ ಸಂಬಂಧದಲ್ಲಿ ದೊಡ್ಡ ಬಿರುಕು ಮೂಡಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗುತ್ತಿರುವಾಗ ಖುದ್ದು ಕೆನಡಾ, ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದೆ ಭಾರತಕ್ಕೆ! ಇದೀಗ ಭಾರತದಲ್ಲಿ ಇರುವ ಕೆನಡಾ ರಾಯಭಾರ ಕಚೇರಿ ಕಡೆಯಿಂದ ಭಾರತಕ್ಕೆ ಗಣರಾಜ್ಯ ದಿನದ ಶುಭಾಶಯ ಕೋರಲಾಗಿದ್ದು. ಹಿಂದಿ & ಇಂಗ್ಲಿಷ್ ಭಾಷೆಯಲ್ಲಿ ಕೆನಡಾ ಶುಭಾಶಯ ತಿಳಿಸಿದೆ. ಭಾರತಕ್ಕೆ ಫ್ರಾನ್ಸ್ ಅಧ್ಯಕ್ಷರು ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಅತಿಥಿಯಾಗಿ, ಆಗಿಮಿಸಿರುವ ಸಮಯದಲ್ಲೇ ಕೆನಡಾ ಈ ರೀತಿ ಭಾರತಕ್ಕೆ ಶುಭಾಶಯ ಕೋರಿದ್ದು ಕುತೂಹಲ ಕೆರಳಿಸಿದೆ. ಹಾಗೇ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆ ಕಾಣುತ್ತಾ? ಎಂಬ ಕುರಿತು ಆಶಾವಾದ ಕೂಡ ಮೂಡಿದೆ.

ಕಿರಿಕ್ ಶುರುವಾಗಿದ್ದು ಎಲ್ಲಿಂದ? ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ 2023ರ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಭಾರತ ಕೂಡ ತಿರುಗೇಟು ನೀಡಿತ್ತು ಸೂಕ್ತ ಸಾಕ್ಷ್ಯಗಳೇ ಇಲ್ಲದೆ ಇಂತಹ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ಬೆಳವಣಿಗೆ ಮಧ್ಯೆ ಕಿರಿಕಿರಿ ಕೂಡ ಜೋರಾಗುತ್ತಿದ್ದು ಈಗ ಭಾರತಕ್ಕೆ ಕೆನಡಾ ರಾಯಭಾರ ಕಚೇರಿ ಶುಭಾಶಯ ಕೋರಿದೆ. ಗಣರಾಜ್ಯೋತ್ಸವ ಶುಭಾಶಯ ತಿಳಿಸಿ, ಗಮನ ಕೂಡ ಸೆಳೆದಿದೆ. ಹಾಗೇ ಪರಿಸ್ಥಿತಿ ಸುಧಾರಿಸುವ ಮುನ್ಸೂಚನೆ ಕೂಡ ಸಿಗುತ್ತಿದೆ.

ಹಠ ಬಿಡದ ಕೆನಡಾ ಪ್ರಧಾನಿ ಭಾರತದ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಯಾಗಿಸಬೇಕಿದ್ದ ಕೆನಡಾ ಮಾತ್ರ ಹಠ ಬಿಡುತ್ತಿಲ್ಲ ಅದ್ರಲ್ಲೂ ಕೆನಡಾ ಪ್ರಧಾನಿ ತೆಗೆದುಕೊಳ್ಳುತ್ತಿರುವ ನಿರ್ಧಾರದಿಂದ ಈಗ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಭಾರತ, ಕೆನಡಾ ಸಂಬಂಧ ಸಂಪೂರ್ಣ ಹಾಳಾಗಿ ಹೋಗುವ ಹಂತ ತಲುಪಿದೆ ಎನ್ನಲಾಗಿತ್ತು. ಆದರೆ ಸಂಬಂಧ ಸುಧಾರಣೆಗೆ ಇತರ ದೇಶಗಳು ಪ್ರಯತ್ನ ಆರಂಭಿಸಿವೆ. ಈ ನಡುವೆ ಖುದ್ದು ಕೆನಡಾ ರಾಜತಾಂತ್ರಿಕ ಕಚೇರಿ ಕೂಡ ಭಾರತಕ್ಕೆ ಶುಭಾಶಯ ಕೋರಿದೆ. ಒಟ್ನಲ್ಲಿ ಕೆನಡಾ ಸರ್ಕಾರ ಖಲಿಸ್ತಾನಿಗಳ ಪರ ಮೃದು ಧೋರಣೆ ಹೊಂದಿರುವುದೇ ದೊಡ್ಡ ಎಡವಟ್ಟಿಗೆ ಕಾರಣವಾಗುತ್ತಿದೆ. ಹೀಗಿದ್ದಾಗ ಭಾರತದ ಜೊತೆಗೆ ಸಂಬಂಧ ಕೂಡ ಹಾಳಾಗಿ, ಆತಂಕದ ವಾತಾವರಣ ನಿರ್ಮಾಣ ಆಗುತ್ತಿದೆ. ಭಾರತ ಕೂಡ ಕೆನಡಾದ ಆರೋಪಕ್ಕೆ ತಕ್ಕ ಉತ್ತರ ನೀಡುತ್ತಿದೆ. ಹೀಗಾಗಿ ಇದೆಲ್ಲ ಎಲ್ಲಿಗೆ ಬಂದು ನಿಲ್ಲುತ್ತೆ? ಅಂತಾ ಕಾದು ನೋಡಬೇಕಿದೆ.

Previous Post
ಮಂಡ್ಯ ಜಿಲ್ಲೆಯ 24,489 ರೈತರ ಬ್ಯಾಂಕ್‌ ಖಾತೆಗೆ ₹ 28.89 ಕೋಟಿ ಬರಪರಿಹಾರ : ಕೃಷಿ ಸಚಿವ
Next Post
ಗಣರಾಜ್ಯೋತ್ಸವ ಸಮಾರಂಭದಲ್ಲಿ ಕುಸಿದುಬಿದ್ದ ಮಾಜಿ ಡಿಸಿಎಂ

Recent News