ಭಾರತದಲ್ಲಿ 5 ವರ್ಷಗಳಲ್ಲಿ 500ಕ್ಕೂ ಹೆಚ್ಚು ಸಿಂಹಗಳ ಸಾವು

ಭಾರತದಲ್ಲಿ 5 ವರ್ಷಗಳಲ್ಲಿ 500ಕ್ಕೂ ಹೆಚ್ಚು ಸಿಂಹಗಳ ಸಾವು

ನವದೆಹಲಿ, ಫೆಬ್ರವರಿ 05: ಜನವರಿ 31ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಿದ್ದು, ಲೋಕಸಭೆ ಚುನಾವಣೆ 2024ರ ಚುನಾವಣೆಗೂ ಮುನ್ನ ನಡೆಯುತ್ತಿರುವ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಸಂಸತ್ ಅಧಿವೇಶನ ಇದಾಗಿದೆ. ಈ ಬಾರಿ ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಜನವರಿ 31ರಿಂದ ಫೆಬ್ರವರಿ 9ರವರೆಗೆ ಈ ಅಧಿವೇಶನ ನಡೆಯಲಿದೆ. ಇಂದು ಕೂಡ ಸಂಸತ್ತಿನ ಅಧಿವೇಶನದಲ್ಲಿ ಚರ್ಚೆಗಳು ಜೋರಾಗಿದ್ದು, ದೇಶದಲ್ಲಿ ಸಿಂಹಗಳ ಸಾವು ಮತ್ತು ದೇಶದಲ್ಲಿರುವ ಸಿಂಹಗಳ ಸಂಖ್ಯೆ ಹಾಗೂ ಅವುಗಳ ಸಾವಿನ ತನಿಖೆ ಬಗ್ಗೆ ಚರ್ಚೆ ನಡೆದಿದ್ದು, ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಮಹತ್ವ ವಿಚಾರಗಳನ್ನು ಸಂಸತ್ತಿನಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ರಾಜೀವ್ ಪ್ರತಾಪ್ ರೂಡಿ ದೇಶದ ಸಿಂಹಗಳ ಅಂಕಿ-ಅಂಶದ ಮೇಲೆ ಪ್ರಶ್ನೆಗಳನ್ನು ಕೇಳಿದ್ದು, ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಒಂದೊಂದಾಗಿಯೇ ಉತ್ತರಿಸಿದ್ದಾರೆ. ದೇಶದಲ್ಲಿರುವ ಒಟ್ಟು ಸಿಂಹಗಳ ಸಂಖ್ಯೆ ವಿವರಣೆ, ದೇಶದಲ್ಲಿ ಸಿಂಹಗಳ ಸಾವು ಹೆಚ್ಚಾಗುತ್ತಿದ್ದರೆ ಅದರ ವಿವರಣೆಗಳೇನು?, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಸಿಂಹಗಳ ಸಾವಿನ ಸಂಖ್ಯೆ ಎಷ್ಟು? ಸಿಂಹಗಳ ಸಾವಿನ ಕಾರಣ ತಿಳಿಯಲು ಸರ್ಕಾರ ನಡೆಸಿರುವ ತನಿಖೆ ಏನು? ತನಿಖೆಯಾಗಿದ್ದರೆ ಅದರ ವಿವರಗಳು, ಒಂದು ವೇಳೆ ತನಿಖೆ ನಡೆಸದಿದ್ದರೆ ಅದಕ್ಕೆ ಕಾರಣಗಳನ್ನು ನೀಡುವಂತೆ ಸಂಸತ್‌ನಲ್ಲಿ ರಾಜೀವ್ ಪ್ರತಾಪ್ ರೂಡಿ ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಸಚಿವ ಅಶ್ವಿನಿ ಕುಮಾರ್ ಚೌಬೆ ಸವಿವರವಾಗಿ ಉತ್ತರಿಸಿದ್ದಾರೆ. ದೇಶದಲ್ಲಿ ಗುಜರಾತ್ ರಾಜ್ಯದ ಕಾಡಿನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಿದೆ. ಜೂನ್ 2020ರಲ್ಲಿ ವರದಿ ಮಾಡಿದಂತೆ ಗುಜರಾತ್‌ನಲ್ಲಿ 674 ಸಿಂಹಗಳಿವೆ ಎಂದು ತಿಳಿಸಿದ್ದಾರೆ.

ಈ ಹಿಂದಿನ ವರದಿಯಂತೆ ಸಿಂಹಗಳ ಸಾವಿನ ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲಾಗುತ್ತದೆ. ಅರಣ್ಯ ಅಧಿಕಾರಿಗಳು ಮತ್ತು ಪಶುವೈದ್ಯರು, ಪ್ರತಿಯೊಂದು ಪ್ರಕರಣದಲ್ಲಿ ಸೂಕ್ತ ವರದಿ ನೀಡಲು ಸೂಚಿಸಲಾಗಿದೆ. ಸಿಂಹಗಳ ಸಾವು ನಡೆದ ಘಟನೆಯ ಸ್ಥಳ ಮತ್ತು ಸಮಯದ ವಿವರಗಳನ್ನು ಪ್ರಾಥಮಿಕ ವರದಿಯಲ್ಲಿ ನೀಡುವಂತೆ, ಪಶು ವೈದ್ಯರು ಮರಣೋತ್ತರ ಪರೀಕ್ಷೆಯ ವರದಿ ಸಿದ್ಧಪಡಿಸುವಂತೆ, ಅಗತ್ಯವಿದ್ದರೆ ಹೆಚ್ಚಿನ ಮಾಹಿತಿ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚನೆ ನೀಡಲಾಗಿದ್ದು, ಈ ಮಾರ್ಗಸೂಚಿಯ ಮೇಲೆ ವರದಿ ಸಿದ್ಧವಾಗುತ್ತದೆ ಎಂದು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಸಿಂಹಗಳ ಸಾವಿನ ಸಂಖ್ಯೆ ವಿವರ.

ಕ್ರಮ ಸಂಖ್ಯೆ ವರ್ಷ ಸಿಂಹಗಳ ಸಾವಿನ ಸಂಖ್ಯೆ 2019 – 113 ;  2020 – 124; 2021 – 105 ; 2022 – 110;  2023 – 103.

Previous Post
ಕುಟಂಬವಾದದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ: ಕಾಂಗ್ರೆಸ್‌ಗೆ ಕೌಂಟರ್ ಅಟ್ಯಾಕ್
Next Post
ಜನಾರ್ದನ ಪೂಜಾರಿ – ಈಶ್ವರ ಖಂಡ್ರೆ ಭೇಟಿ

Recent News