ಭೂಕುಸಿತ: 44 ಸಾವು

ಭೂಕುಸಿತ: 44 ಸಾವು

ಬೀಜಿಂಗ್, ಜ. 22: ಚೀನಾದ ನೈಋತ್ಯ ಪ್ರಾಂತ್ಯದ ಗೈಝೌನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಕನಿಷ್ಠ 44 ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. ಸೋಮವಾರ ಮುಂಜಾನೆ 5.51 ಕ್ಕೆ ಜೆಂಕ್ಯಾಂಗ್ ಕೌಂಟಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೂಕುಸಿತದಿಂದ 18 ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ, ಅವಶೇಷಗಳ ಅಡಿಯಲ್ಲಿ ಹುದುಗಿರುವ ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ರಕ್ಷಣಾ ತಂಡಗಳು ಅವಶೇಷಗಳನ್ನು ತೆಗೆದುಹಾಕಲು ಹಗಲಿರುಳು ಶ್ರಮಿಸುತ್ತಿವೆ ಮತ್ತು ಕೆಲವರನ್ನು ಜೀವಂತವಾಗಿ ರಕ್ಷಿಸಬಹುದು ಎಂದು ನಂಬಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಮಣ್ಣು ಮೆತ್ತಗಾಗಿದ್ದು ಭೂಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

Previous Post
ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದ ಕೊಹ್ಲಿ
Next Post
ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತೇವೆ

Recent News