ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ: ಎಲ್ಲೆಡೆ ಅಲರ್ಟ್!

ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ: ಎಲ್ಲೆಡೆ ಅಲರ್ಟ್!

ಮುಂಬೈ ಫೆಬ್ರವರಿ 2: ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಸಂದೇಶವೊಂದು ಬಂದಿದೆ. ಮುಂಬೈನ ಆರು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಸಂದೇಶದ ನಂತರ ಮುಂಬೈ ಪೊಲೀಸರು ಮತ್ತು ಇತರ ಏಜೆನ್ಸಿಗಳು ಅಲರ್ಟ್ ಆಗಿವೆ. ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಬೈ ಸಂಚಾರ ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆ ಬಂದಿದೆ. ಕಂಟ್ರೋಲ್ ರೂಮ್‌ಗೆ ಅಪರಿಚಿತ ವ್ಯಕ್ತಿಯಿಂದ “ಮುಂಬೈನ ಆರು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ” ಎಂದು ಹೇಳುವ ಸಂದೇಶವನ್ನು ಸ್ವೀಕರಿಸಲಾಗಿದೆ.

ಮುಂಬೈ ಪೊಲೀಸರು ಸಂದೇಶ ಕಳುಹಿಸಿದವರ ಪತ್ತೆಗೆ ತನಿಖೆ ಆರಂಭಿಸಿದ್ದು, ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥಹ ಹಲವಾರು ಬೆದರಿಕೆ ಸಂದೇಶಗಳು ಬಂದಿವೆ. ಆದರೆ ಅವುಗಳನ್ನು ನೆಗ್ಲೆಟ್ ಮಾಡುವಂತಿಲ್ಲ.

ಈ ಹಿಂದೆ ವಿವಿಧ ಬ್ಯಾಂಕ್‌ಗಳ ಕೇಂದ್ರ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ನಗರದ ಆರ್‌ಬಿಐ ಕೇಂದ್ರ ಕಚೇರಿ ಸೇರಿದಂತೆ ಹನ್ನೊಂದು ಕಡೆಗಳಲ್ಲಿ ಮಧ್ಯಾಹ್ನ 1.30 ಗಂಟೆಗೆ ಬಾಂಬ್ ಸ್ಪೋಟವಾಗುತ್ತದೆ ಎಂಬ ಸಂದೇಶ ಬಂದಿತ್ತು. ಎಲ್ಲೆಡೆ ಶಕ್ತಿಶಾಲಿ ಬಾಂಬ್‌ಗಳನ್ನು ಅಳವಡಿಸಲಾಗಿದೆ ಎಂಬ ಬೆದರಿಕೆ ಸಂದೇಶದ ಇ-ಮೇಲ್ ಮಂಗಳವಾರ ಪೊಲೀಸರನ್ನು ತಲ್ಲಣಗೊಳಿಸಿತ್ತು. ತಕ್ಷಣವೇ ಅಲರ್ಟ್ ಆದ ಪೊಲೀಸರು ಎಲ್ಲೆಡೆ ಪರಿಶೀಲನೆ ನಡೆಸಿದರು. ಇವರೊಂದಿಗೆ ಬಾಂಭ್ ನಿಷ್ಕ್ರೀಯದಳದ ಅಧಿಕಾರಿಗಳೂ ಕೂಡ ಭಾಗಿಯಾಗಿದ್ದರು. ಆದರೆ ಪರಿಶೀಲನೆ ಬಳಿಕ ಇದೊಂದು ಹುಸಿ ಬೆದರಿಕೆ ಸಂದೇಶ ಎಂದು ತಿಳಿದು ಬಂದಿದೆ.

ಬಾಂಬ್‌ ಬೆದರಿಕೆ ಜತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ರಾಜೀನಾಮೆ ನೀಡಬೇಕು ಎಂದು ಇ-ಮೇಲ್‌ನಲ್ಲಿ ಒತ್ತಾಯಿಸಲಾಗಿತ್ತು. ಅಲ್ಲದೆ ಬ್ಯಾಂಕಿಂಗ್‌ ಹಗರಣವನ್ನು ಬಹಿರಂಗಪಡಿಸುವ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ಇ – ಮೇಲ್‌ನಲ್ಲಿ ಒತ್ತಾಯಿಸಲಾಗಿತ್ತು. ಬೆದರಿಕೆ ಸಂದೇಶದವನ್ನು ಕಳುಹಿಸಿದ ಇ-ಮೇಲ್‌ನಲ್ಲಿ ‘ಕಿಲಾಫತ್‌ ಇಂಡಿಯಾ’ ಎಂಬ ಯೂಸರ್‌ನೇಮ್‌ ಇತ್ತು. ಈ ಸಂಬಂಧ ಮುಂಬಯಿನ ಎಂಆರ್‌ಎ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಆರ್‌ಬಿಐ ಅಲ್ಲದೆ, ಚರ್ಚ್‌ಗೇಟ್‌ನಲ್ಲಿರುವ ಎಚ್‌ಡಿಎಫ್‌ಸಿ ಹೌಸ್‌, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಐಸಿಐಸಿಐ ಬ್ಯಾಂಕ್‌ ಕಚೇರಿ, ಬಾಂಬ್‌ ಸ್ಫೋಟಿಸಲಾಗುತ್ತದೆ ಎಂದು ಬೆದರಿಕೆಯೊಡ್ಡಲಾಗಿತ್ತು.

Previous Post
ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ವಿವಾದವೆಬ್ಬಿಸಿದೆ.ಡಿ.ಕೆ ಸುರೇಶ್
Next Post
5 ದಿನ ಇಡಿ ವಶಕ್ಕೆ ಮಾಜಿ ಸಿಎಂ ಹೇಮಂತ್ ಸೊರೇನ್

Recent News