ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ

ಬೆಂಗಳೂರು, ಜ. 7 ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿ, ಲಘುವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೊಕ್ಕಿನ ಮನುಷ್ಯ ಕಿಡಿಕಾರಿರುವ ಜೆಡಿಎಸ್, ಅಪರ ಬ್ರೂಟಸ್ ಎಂದು ಜರಿದಿದೆ.
ಈ ಬಗ್ಗೆ ಎಕ್ಸ್ ಮಾಡಿರುವ ಜೆಡಿಎಸ್, ಮಾಜಿ ಪ್ರಧಾನಿ ದೇವೇಗೌಡರು ಹೇಳಿರುವುದರಲ್ಲಿ ಲವಶೇಷವೂ ಉತ್ಪ್ರೇಕ್ಷೆ ಏನೂ ಇಲ್ಲ. ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಜೆಡಿಎಸ್ ಪುನರುಚ್ಛರಿಸಿದೆ.
ದೇಶವನ್ನು ಜಾತಿ ಧರ್ಮದಲ್ಲಿದೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್. ಚರಿತ್ರೆಯ ಕೊನೆ ಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ಹೇಳಿದೆ.
ಮಾಜಿ ಪ್ರಧಾನಿ ದೇವೇಗೌಡರು ಎಂದೂ ಶಾಪ ಹಾಕುವುದಿಲ್ಲ. ಅವರದು ಅಭಯ ಹಸ್ತ. ಆಶೀರ್ವಾದ, ಅನುಗ್ರಹದ ಹಸ್ತ ಎಂದು ಹೇಳಿರುವ ಜೆಡಿಎಸ್, ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿಯ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದನ್ನು ಮರೆತಿರಾ ಸಿದ್ಧರಾಮಯ್ಯ ಎಂದು ಪ್ರಶ್ನಿಸಿರುವ ಜೆಡಿಎಸ್, ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಸಿದ್ಧರಾಮಯ್ಯನವರೇ ಎಂದು ಜೆಡಿಎಸ್ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದೆ.
ಜಾತ್ಯಾತೀತತೆ ನೀವಷ್ಟೇ ಹೇಳಬೇಕು ಸಿದ್ಧರಾಮಯ್ಯನವರೇ. ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಡೋಂಗಿ ಜಾತ್ಯಾತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಬಿಪ್ರಾಯ, ಭಿನ್ನಾಭಿಪ್ರಾಯ ಪ್ರಾಮಾಣಿಕತೆ, ಜಾತ್ಯಾತೀತತೆ ಈ ಎಲ್ಲ ಪದಗಳೆಲ್ಲಾ ನಿಮಗೆ ಆಗಿ ಬರುವುದಿಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ, ಸರ್ವಾಧಿಕಾರ ಧೋರಣೆ, ತೊಘಲಕ್ ಮನಸ್ಥಿತಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಮಾಜಿ ಪ್ರಧಾನಿ ದೇವೇಗೌಡರು ಸಾಮಾಜಿಕ ನ್ಯಾಯ. ಜಾತ್ಯಾತೀತತೆ , ನಂಬಿಕೆ ವಿಶ್ವಾಸ ಉಳ್ಳವರು, ಹಾಗಿಲ್ಲದಿದ್ದರೆ ನೀವು ಈವರೆಗೂ ಏನೆಲ್ಲಾ ಆಗಿದ್ದಿರಲ್ಲಾ ಅದರಲ್ಲಿ ಏನೆಂದೊ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿ, ಅವರ ಬೆನ್ನಿಗೆ ಇರಿದ ಹಪರ ಬ್ರೂಟಸ್ ನೀವು ಎಂದು ಕಿಡಿಕಾರಿರುವ ಜೆಡಿಎಸ್, ಬೂಟಾಟಿಕೆ ಮಾಡಿಕೊಂಡೇ ರಾಜಕೀಯ ಬದುಕು ಕಟ್ಟಿಕೊಂಡರುವ ನೀವು ಎಂದು ಜೆಡಿಎಸ್ ಸಿದ್ಧರಾಮಯ್ಯ ನವರಿಗೆ ಕುಟುಕಿದೆ.
ಯಾರೂ ಯಾರ ಸಂಘ ಮಾಡಿದರು. ಯಾವ ಗಾಳಿ ಯಾರಿಗೆ ಸೋಕಿತ್ತು. ಇಂತಹ ಕಾಗಕ್ಕ, ಗೂಬಕ್ಕ ಕತೆಗಳ ಮೂಲಕ ಸಿದ್ಧರಾಮಯ್ಯ ಹಾಗೂ ಶಿವಕುಮಾರ್ ನೀವೇ ಬೆತ್ತಲ ಸ್ಥಿತಿಯಲ್ಲಿ ನಿಲ್ಲಬೇಕಾದಂತಹ ನಿ ಸ್ಥಿತಿ ತಂದುಕೊಳ್ಳಬೇಡಿ. ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ. ಅದಕ್ಕೆ ಕಳಂಕ ಮೆತ್ತಿಕೊಳ್ಳಬೇಡಿ ಎಂದು ನಮ್ಮ ಕಳಕಳಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ನಿಮ್ಮಂತಹ ಆತ್ಮಸಾಕ್ಷಿಹೀನರು ಇದ್ದರೆ ಕಾಂಗ್ರೆಸ್ ಅಂತ್ಯವಾಗುತ್ತದೆ ನಿಜ. ಜೆಡಿಎಸ್ ಪಕ್ಷವನ್ನು ಅಂತ್ಯ ಕಾಣಿಸಲು ನೀವು ಆಡುತ್ತಿರುವ ಸಿದ್ದಾರಾಮೆ ಆಟ ಯಾರಿಗೆ ಗೊತ್ತಿಲ್ಲ. ಇವತ್ತಿಗೂ ಕತ್ತಲಾದೊಡನೆ ನಮ್ಮ ಪಕ್ಷದ ನಾಯಕರ ಮನೆ ಮುಂದೆ ಕಡಾಯಿಸುವ ನಿಮ್ಮ ಕತ್ತಲು ಗಿರಾಕಿಗಳ ಬಗ್ಗೆ ಹೇಳಬೇಕೇ, ಜೆಡಿಎಸ್ ಅಂತ್ಯ ನಿಮ್ಮ ಕನಸಷ್ಟೇ. ಸೊಕ್ಕು ನಿಮ್ಮ ಪೆಟೆಂಟ್. ನಿಮ್ಮ ಸದ್ಗುಣವನ್ನು ದೇವೇಗೌಡರಿಗೆ ಅಂಟಿಸುವ ಪಾಪದ ಕೆಲಸ ಮಾಡಬೇಡಿ. ಕರ್ನಾಟಕದ ಸೊಕ್ಕಿನ ಮನುಷ್ಯ ಅಂತ ಯಾರಾದರೂ ಇದ್ದರೆ ಅದು ನೀವೆ ಸಿದ್ಧರಾಮಯ್ಯ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ದೇವೇಗೌಡರು ಕೇಳಿದ್ದು ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಿರಿ ಎಂದು. ನೀವು ಆ ಪಾಯಿಂಟ್‌ಗೆ ಬರುತ್ತಿಲ್ಲ. ಸತ್ಯದ ಸ್ವಲೆತ್ತದೆ ಸೈಲಂಟಾಗಿ ನೈಸ್ ಯೋಜನೆಯನ್ನು ಪಕ್ಕಕ್ಕೆ ಸರಿಸಿಬಿಡುತ್ತಿದ್ದೀರೀ ಏಕೆ ಎಂದು ಕಾರಣ ಹೇಳಿ ಬಿಡಿ ಎಂದು ಜೆಡಿಎಸ್ ಪ್ರಶ್ನಿಸಿದೆ.
ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯವುದು ಕಷ್ಟವಿದ್ದರೆ ಹೇಳಿಬಿಡಿ ಆ ಕಳಂಕ ಕಪ್ಪು ಚುಕ್ಕೆ ಹೊತ್ತುಕೊಂಡೆ ರಾಜಕೀಯ ಅಂತ್ಯ ಕಾಣಬೇಕೆ ಎಂದು ಹೇಳಿರುವ ಜೆಡಿಎಸ್, ನೈಸ್ ಯೋಜನೆಯನ್ನು ವಾಪಸ್ ಪಡೆಯಲು ಯಾವ ಅತೀಂದ್ರ ಶಕ್ತಿ ಅಡ್ಡವಿದೆ ಎಂದು ಪ್ರಶ್ನಿಸಿದೆ.

Previous Post
ಕೇಂದ್ರ ಮಂತ್ರಿ ಆಗುವುದರ ವದಂತಿಗಳನ್ನು ತಳ್ಳಿ ಹಾಕಿದ ಹೆಚ್.ಡಿ.ಕುಮಾರಸ್ವಾಮಿ
Next Post
ಅಯೋಧ್ಯೆಯಲ್ಲಿ ಈ ತಿಂಗಳ ೨೨ ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೆ ತಮಗೆ ಆಹ್ವಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Recent News