ಮೈದಾನದಲ್ಲೇ ಗಿಲ್ ವಿರುದ್ಧ ಉಗ್ರರೂಪ ತಾಳಿದ ರೋಹಿತ್ ಶರ್ಮಾ

ಮೈದಾನದಲ್ಲೇ ಗಿಲ್ ವಿರುದ್ಧ ಉಗ್ರರೂಪ ತಾಳಿದ ರೋಹಿತ್ ಶರ್ಮಾ

ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ 14 ತಿಂಗಳ ನಂತರ ಮತ್ತೆ ಅಂತಾರಾಷ್ಟ್ರೀಯ ಟಿ20 ತಂಡಕ್ಕೆ ವಾಪಸಾಗಿದ್ದಾರೆ. 14 ತಿಂಗಳ ಬಳಿಕ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದ ಹಿಟ್ ಮ್ಯಾನ್ ಯಾವುದೇ ರನ್ ಗಳಿಸದೇ ರನೌಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಶುಭಮನ್ ಗಿಲ್ ಮಾಡಿದ ಎಡವಟ್ಟಿನಿಂದ ರೋಹಿತ್ ಔಟಾಗಬೇಕಾಯಿತು. ಈ ಸಂದರ್ಭದಲ್ಲಿ ರೋಹಿತ್ ತಾಳ್ಮೆ ಕಳೆದುಕೊಂಡರು.

ಫಜಲ್ಹಕ್ ಫಾರೂಕಿ ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ 0 ರನ್ ಗಳಿಸಿ ರನೌಟ್ ಆದರು. ಔಟಾದ ನಂತರ ರೋಹಿತ್ ಗಿಲ್ ವಿರುದ್ಧ ಸಂಪೂರ್ಣವಾಗಿ ಕೋಪಗೊಂಡಿದ್ದರು. ಡ್ರೆಸ್ಸಿಂಗ್‌ರೂಮ್‌ಗೆ ಹಿಂದಿರುಗುವ ಮೊದಲು ಶುಭಮನ್‌ ಗಿಲ್‌ಗೆ ಸನ್ನೆ ಮಾಡಿದನು. ಅವರ ಹಾವ ಭಾವ ನೋಡಿದವರಿಗೆ ಅವರು ಎಷ್ಟು ಕೋಪಗೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ. ಅಷ್ಟಕ್ಕೂ ಆಗಿದ್ದೇನು? ರೋಹಿತ್ ಚೆಂಡನ್ನು ಮಿಡ್ ಆಫ್‌ಗೆ ಓಡಿಸಿ ಸಿಂಗಲ್‌ಗೆ ಕರೆದರು. ಆದರೆ ಗಿಲ್ ಚೆಂಡನ್ನು ನೋಡುತ್ತಲೇ ಇದ್ದರು ಮತ್ತು ಕದಲಲಿಲ್ಲ. ಅಷ್ಟರಲ್ಲಾಗಲೇ ರೋಹಿತ್ ಇನ್ನೊಂದು ತುದಿಗೆ ಓಡಿದ್ದರು. ಅಫ್ಘಾನಿಸ್ತಾನ ಫೀಲ್ಡರ್‌ಗಳು ಯಾವುದೇ ತಪ್ಪು ಮಾಡದೆ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.

ಪಂದ್ಯದ ಬಳಿಕ ಮಾತನಾಡಿದ ಅವರು “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ರೀತಿ ರನ್ ಔಟ್‌ಗಳು ಸಂಭವಿಸುತ್ತವೆ. ಮುಖ್ಯವಾಗಿ ತಂಡವು ಗೆದ್ದಿದೆ, ಅದು ನನಗೆ ಮುಖ್ಯವಾಗಿದೆ ಮತ್ತು ಗಿಲ್ ಉತ್ತಮ ಇನ್ನಿಂಗ್ಸ್ ಆಡಿದರು”. ಎಂದು ಹೇಳಿದ್ದಾರೆ. ದಾಖಲೆ ಬರೆದ ರೋಹಿತ್ ರೋಹಿತ್ ಶರ್ಮಾ ಔಟಾದರು ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು. ಟಿ20 ಇತಿಹಾಸದಲ್ಲೇ 100 ಪಂದ್ಯಗಳ ಗೆಲುವಿನಲ್ಲಿ ಭಾಗಿಯಾದ ಆಟಗಾರ ಎನಿಸಿಕೊಂಡರು. ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದರು. ಮುಂದಿನ ಎರಡು ಪಂದ್ಯಗಳಲ್ಲಿ ಕೊಹ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೂನ್ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಮುನ್ನ ಭಾರತ ತಂಡದ ಆಯ್ಕೆಯಲ್ಲಿ ಈ ಸರಣಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತಕ್ಕೆ ಗೆಲುವು ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಫ್ಘಾನಿಸ್ತಾನ 20 ಓವರ್ ಗಳಲ್ಲಿ5 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಈ ಸುಲಭ ಸವಾಲನ್ನು ಬೆನ್ನತ್ತಿದ ಭಾರತ 17.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಸುಲಭ ಗೆಲುವು ಸಾಧಿಸಿದರು. ಶಿವಂ ದುಬೆ ಅಜೇಯ 60 ರನ್ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭವಾಗಿಸಿದರು.

Previous Post
ರಾಮಮಂದಿರ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯಲು ಪ್ರಮುಖ ಹಿಂದೂ ಸ್ವಾಮೀಜಿಗಳು ನಿರ್ಧಾರ
Next Post
ಚುನಾವಣಾ ಆಯುಕ್ತರ ಕಾಯ್ದೆ ಜಾರಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

Recent News