ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ?

ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ?

ಗುವಾಹಟಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತ ಡ್ರೋನ್‌ (Drone) ಮೂಲಕ ಬಾಂಬ್‌ ದಾಳಿ ನಡೆಸಿದೆ. ಭಾನುವಾರ ತನ್ನ ಶಿಬಿರದ ಮೇಲೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ ಎಂದು ಪರೇಶ್ ಬರುವಾ ನೇತೃತ್ವದ ಉಲ್ಫಾ-I ಸೋಮವಾರ ಹೇಳಿಕೊಂಡಿದೆ.

ಭಾನುವಾರ ಸಂಜೆ 4:10, 4:12 ಮತ್ತು 4:20 ಕ್ಕೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಡ್ರೋನ್‌ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಸಂಘಟನೆಯು ಹೇಳಿಕೊಂಡಿದೆ.

ಮೊದಲ ಎರಡು ಸ್ಫೋಟಗಳಲ್ಲಿ ನಮ್ಮ ಸಂಘಟನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರನೇ ಬಾಂಬ್ ಸ್ಫೋಟಿಸಲಿಲ್ಲ. ಈ ರೀತಿಯ ದಾಳಿಯಿಂದ ನಾವು ನಮ್ಮ ಉದ್ದೇಶದಿಂದ ವಿಚಲಿತಗೊಳ್ಳುವುದಿಲ್ಲ ಎಂದು ಹೇಳಿದೆ. ಭಾರತದ ವಿದೇಶಾಂಗ ಸಚಿವಾಲಯ ಇಲ್ಲಿಯವರೆಗೆ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Previous Post
ಲೋಕಸಭೆ ಟಿಕೇಟ್‌ಗಾಗಿ ಸೋಮಣ್ಣ ಲಾಬಿ – ಇಂದು ಅಮಿತ್ ಶಾ ಭೇಟಿ
Next Post
ಲೈಂಗಿಕ ಕಿರುಕುಳದ ಆರೋಪ: 500 ವಿದ್ಯಾರ್ಥಿನಿಯರಿಂದ ಪ್ರಧಾನಿ, ಹರಿಯಾಣ ಸಿಎಂಗೆ ಪತ್ರ

Recent News