ರಾಜ್ಯಸಭೆ ನಾಮನಿರ್ದೇಶನಕ್ಕೆ ಸಹಿ ಹಾಕಲು ಸಂಜಯ್ ಸಿಂಗ್‌ಗೆ ಕೋರ್ಟ್‌ ಅನುಮತಿ

ರಾಜ್ಯಸಭೆ ನಾಮನಿರ್ದೇಶನಕ್ಕೆ ಸಹಿ ಹಾಕಲು ಸಂಜಯ್ ಸಿಂಗ್‌ಗೆ ಕೋರ್ಟ್‌ ಅನುಮತಿ

ನವದೆಹಲಿ, ಜ. 5: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರ ರಾಜ್ಯಸಭೆಗೆ ಮರು ನಾಮನಿರ್ದೇಶನಕ್ಕಾಗಿ ದಾಖಲೆಗಳಿಗೆ ಸಹಿ ಹಾಕಲು ದೆಹಲಿ ನ್ಯಾಯಾಲಯವು ಅನುಮತಿ ನೀಡಿದ್ದು, ಸಂಜಯ್ ಸಿಂಗ್ ಅವರ ಅಧಿಕಾರಾವಧಿ ಜನವರಿ 27ಕ್ಕೆ ಕೊನೆಗೊಳ್ಳಲಿದೆ.

ಅರ್ಜಿದಾರರಾದ ಸಂಜಯ್ ಸಿಂಗ್ ಅವರಿಗೆ ರಾಜ್ಯಸಭೆಯಿಂದ ‘ನಿರಾಕ್ಷೇಪಣಾ ಪ್ರಮಾಣ ಪತ್ರ’ ಪಡೆಯುವ ಸಂಬಂಧದ ಅಗತ್ಯವಿರುವ ಪತ್ರಗಳಲ್ಲಿ ಸಿಂಗ್ ಅವರ ಸಹಿ ತೆಗೆದುಕೊಳ್ಳಲು ಅನುಮತಿಗಾಗಿ ದೆಹಲಿಯ ರೂಸ್ ಅವೆನ್ಯೂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಯಿತು.

ರಾಜ್ಯಸಭಾ ಸದಸ್ಯರಾಗಿರುವ ಅವರ ಹಾಲಿ ಅವಧಿ ಜನವರಿ 27ಕ್ಕೆ ಮುಕ್ತಾಯವಾಗುತ್ತಿದ್ದು, ‘ಜನವರಿ 2ರಂದು ಚುನಾವಣೆ ನಡೆಸಲು ಚುನಾವಣಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಈ ಆದೇಶ ನೀಡಿದ್ದಾರೆ. ನಾಮಪತ್ರಗಳನ್ನು ಜನವರಿ 9 ರೊಳಗೆ ಸಲ್ಲಿಸಬೇಕು ಎನ್ನಲಾಗಿದೆ. ಅರ್ಜಿಯು ದಾಖಲೆಗಳಿಗೆ ಸಹಿ ಹಾಕಲು ಸಿಂಗ್‌ಗೆ ಅನುಮತಿ ನೀಡುವಂತೆ ತಿಹಾರ್ ಜೈಲು ಅಧೀಕ್ಷಕರಿಂದ ನಿರ್ದೇಶನವನ್ನು ಕೋರಿದೆ.

‘ಜನವರಿ 6, 2024 ರಂದು ಜೈಲು ಅಧಿಕಾರಿಗಳ ಮುಂದೆ ಸಿಂಗ್ ಪರ ವಕೀಲರು ದಾಖಲೆಗಳನ್ನು ಹಾಜರುಪಡಿಸಿದರೆ, ಜೈಲು ಅಧೀಕ್ಷಕರು ಆರೋಪಿಯ ಸಹಿಯನ್ನು ಈ ದಾಖಲೆಗಳಲ್ಲಿ ತೆಗೆದುಕೊಳ್ಳಲು ಅನುಮತಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರನ್ನು ಭೇಟಿ ಮಾಡಲು ಸಹ ಅನುಮತಿಸಲಾಗಿದ್ದು, ನಾಮನಿರ್ದೇಶನ ಸಲ್ಲಿಕೆಗೆ ಸಂಬಂಧಿಸಿದಂತೆ ವಿಧಾನಗಳ ಬಗ್ಗೆ ಚರ್ಚಿಸಲು ಅವರ ವಕೀಲರು ಅರ್ಧ ಘಂಟೆ ಸಮಾಯವಾಕಾಶ ನೀಡಬೇಕು’ ಎಂದು ನ್ಯಾಯಾಧೀಶರು ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ಮನಿ ಲಾಂಡರಿಂಗ್ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯವು ಅಕ್ಟೋಬರ್ 4 ರಂದು ಸಿಂಗ್ ಅವರನ್ನು ಬಂಧಿಸಿತ್ತು. ಕೆಲವು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವಿತ್ತೀಯ ಪರಿಗಣನೆಗಾಗಿ ಲಾಭದಾಯಕವಾದ ಈಗ ರದ್ದಾದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ, ಎಎಪಿ ನಾಯಕರು ಈ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದಾರೆ.

Previous Post
ಲೋಕಸಭೆ ಚುನಾವಣೆ ಸಿದ್ಧತೆ: ನಾಳೆಯಿಂದ ರಾಜ್ಯಗಳಿಗೆ ಚುನಾವಣಾ ಆಯೋಗ ಭೇಟಿ
Next Post
ರಾಜ್ಯ ಸರಕಾರದ ವಶಕ್ಕೆ ನೈಸ್ ಯೋಜನೆ ; ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ದೇವೇಗೌಡರ ಆಗ್ರಹ

Recent News