ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ – ಲೋಕಸಭೆಯಲ್ಲಿ ಅಮಿತ್ ಶಾ

ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ – ಲೋಕಸಭೆಯಲ್ಲಿ ಅಮಿತ್ ಶಾ

ನವದೆಹಲಿ : ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ಭಾರತದ ಹೊಸ ಪ್ರಯಾಣದ ಆರಂಭ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಗವಾನ್ ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದರು.

ಜನವರಿ 22 ಭವ್ಯ ಭಾರತದ ಆರಂಭವಾಗಿದೆ, ರಾಮನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವವರಿಗೆ ನಮ್ಮ ದೇಶವನ್ನು ಚೆನ್ನಾಗಿ ತಿಳಿದಿಲ್ಲ ಮತ್ತು ಅವರು ವಸಾಹತುಶಾಹಿ ದಿನಗಳನ್ನು ಪ್ರತಿನಿಧಿಸುತ್ತಾರೆ. ಇತಿಹಾಸವನ್ನು ತಿಳಿಯದವರು ಸೋಲುತ್ತಾರೆ ಎಂದು ಹೇಳಲು ಬಯಸುತ್ತೇನೆ. ಜನವರಿ 22 ಮುಂದಿನ ವರ್ಷಗಳಲ್ಲಿ ಐತಿಹಾಸಿಕ ದಿನವಾಗಲಿದೆ, ಇದು ಎಲ್ಲ ರಾಮ ಭಕ್ತರ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಿದ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಮನಿಲ್ಲದೆ ರಾಷ್ಟ್ರವನ್ನು ಕಲ್ಪಿಸಿಕೊಳ್ಳಲಾಗದು, ರಾಮನೇ ನಮಗೆ ರಾಮರಾಜ್ಯವನ್ನು ತೋರಿಸಿದ್ದಾನೆ, ರಾಮ ಮಂದಿರಕ್ಕಾಗಿ ಎಲ್ಲರೂ ಒಂದಾಗಬೇಕು. ಇದೆ ವೇಳೆ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ವ್ರತ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 300 ವರ್ಷಗಳ ಕನಸು ನನಸಾಯಿತು ಮತ್ತು ಪಿಎಂ ಮೋದಿ ಮತ್ತು ಬಿಜೆಪಿ ಅವರು ಭರವಸೆ ನೀಡಿದ್ದನ್ನು ಈಡೇರಿಸಿದ್ದಾರೆ ಎಂದು ಹೇಳಿದರು.

ರಾಮಮಂದಿರ ಆಂದೋಲನವನ್ನು ನಿರ್ಲಕ್ಷಿಸುವ ಮೂಲಕ ಈ ದೇಶದ ಇತಿಹಾಸವನ್ನು ಯಾರೂ ಓದಲು ಸಾಧ್ಯವಿಲ್ಲ. 1528 ರಿಂದ, ಪ್ರತಿ ಪೀಳಿಗೆಯು ಈ ಚಳವಳಿಯನ್ನು ಯಾವುದಾದರೂ ಒಂದು ರೂಪದಲ್ಲಿ ನೋಡಿದೆ ಎಂದರು. ಚರ್ಚೆಯನ್ನು ಆರಂಭಿಸಿದ ಸತ್ಯಪಾಲ್ ಸಿಂಗ್ ರಾಮ ಇರುವಲ್ಲಿ ಧರ್ಮವಿದೆ ಧರ್ಮವನ್ನು ನಾಶಪಡಿಸುವವರನ್ನು ಕೊಲ್ಲಲಾಗುತ್ತದೆ ಮತ್ತು ಧರ್ಮವನ್ನು ರಕ್ಷಿಸುವವರನ್ನು ರಕ್ಷಿಸಲಾಗುತ್ತದೆ, ಅವರು ಶ್ರೀರಾಮನನ್ನು ತಿರಸ್ಕರಿಸಿದ್ದರಿಂದ ಕಾಂಗ್ರೆಸ್ ಇಂದು ಈ ದೇಶದಲ್ಲಿ ಈ ಪರಿಸ್ಥಿತಿಯಲ್ಲಿದೆ ಎಂದರು.

Previous Post
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ: ಈಶ್ವರ ಖಂಡ್ರೆ
Next Post
ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ – ಗೃಹ ಸಚಿವ ಅಮಿತ್ ಭರವಸೆ

Recent News