ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಗುಡುಗು

ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಗುಡುಗು

ಕೋಲ್ಕತ್ತಾ, ಜ. 29: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಜಟಾಪಟಿ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬಿಹಾರ ತಲುಪಿರುವ ಹೊತ್ತಲ್ಲಿ ಈ ವಿವಾದ ಉಂಟಾಗಿದೆ.

ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಯಾತ್ರೆ ಗುರುವಾರ ಬಂಗಾಳವನ್ನು ಪ್ರವೇಶಿಸಿತ್ತು. ಎರಡು ದಿನಗಳ ವಿರಾಮದ ನಂತರ ಇಂದು ಮತ್ತೆ ಆರಂಭಗೊಂಡು ಬಿಹಾರ ತಲುಪಿದೆ. ಇದು ಈ ವಾರದ ಕೊನೆಯಲ್ಲಿ ಮತ್ತೆ ಬಂಗಾಳಕ್ಕೆ ಪ್ರವೇಶಿಸಲಿದೆ. ಯಾತ್ರೆಯ ಪರಿಣಾಮದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ಗಾಂಧಿ ಅವರನ್ನು ಮೂರ್ಖ ಎಂದು ಸೂಚಿಸಲು ಅವಹೇಳನಕಾರಿ ಹೇಳಿಕೆಯನ್ನು ಬಳಸಿದರು.

ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ‘ಒಲೆಯ ಮೇಲೆ ಕಲ್ಲಿದ್ದಲು’ ಹೇಳಿಕೆ ಬಳಸಿದ್ದು, ಇದನ್ನೇ ಸುವೇಂದು ಪುನರಾವರ್ತಿಸಿದ್ದಾರೆ. ರಾಹುಲ್ ಗಾಂಧಿ ಯಾರು?. ಕಲ್ಲಿದ್ದಲು ಒಲೆಯ ಮೇಲೆ ಹಾಕಿದ ನಂತರ ಚಹಾವನ್ನು ಬಿಸಿ ಮಾಡಬೇಕು ಎಂದು ಅವರು ಹೇಳುತ್ತಾರೆ. ಒಲೆಯ ಮೇಲೆ ಕಲ್ಲಿದ್ದಲು? ನಾನು ಈ ರೀತಿ ಏನನ್ನೂ ಕೇಳಿಲ್ಲ” ಎಂದಿದ್ದಾರೆ ಬಿಜೆಪಿ ನಾಯಕ.

ಅಸ್ಸಾಂನ ಧುಬ್ರಿಯಲ್ಲಿ ನಡೆದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರದ ಕುರಿತು ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಕಲ್ಲಿದ್ದಲು, ಚಹಾ ಸೇರಿದಂತೆ ಎಲ್ಲಾ ವ್ಯವಹಾರಗಳಲ್ಲಿ ಕಡಿತ ಹೊಂದಿದ್ದಾರೆ ಎಂದು ಆರೋಪಿಸಿದ ರಾಹುಲ್ , “ನೀವು ಬೆಳಿಗ್ಗೆ ಎದ್ದ ನಂತರ ಚಹಾ ತಯಾರಿಸಲು ಕಲ್ಲಿದ್ದಲು ಒಲೆಯ ಮೇಲೆ ಇಟ್ಟಾಗ ಕಲ್ಲಿದ್ದಲಿನಿಂದ ಬರುವ ಲಾಭ ನಿಮ್ಮ ಮುಖ್ಯಮಂತ್ರಿಗೆ ಹೋಗುತ್ತದೆ, ನೀವು ಕುಡಿಯುವ ಚಹಾ, ಅದರ ತೋಟಗಳು ನಿಮ್ಮ ಮುಖ್ಯಮಂತ್ರಿಗೆ ಸೇರಿವೆ ಎಂದಿದ್ದರು.

ಯಾತ್ರೆಯಲ್ಲಿ ನಿರತರಾಗಿರುವ ಕಾರಣ ರಾಜ್ಯ ಕಾಂಗ್ರೆಸ್, ಸುವೇಂದು ಅಧಿಕಾರಿಯವರ ಅವಹೇಳನಕಾರಿ ಹೇಳಿಕೆ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ ಇಂಡಿಯಾ ಮೈತ್ರಿಕೂಟದಲ್ಲಿನ ಅದರ ಮಿತ್ರ ಪಕ್ಷ ತೃಣಮೂಲ,ಬಿಜೆಪಿ ಮತ್ತು ವಿಶೇಷವಾಗಿ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ಗುರಿಯಾಗಿಸಲು ಅವಕಾಶವನ್ನು ಬಳಸಿಕೊಂಡಿದೆ.

ತೃಣಮೂಲ ನಾಯಕ ಹಾಗೂ ವಕ್ತಾರ ಕುನಾಲ್‌ ಘೋಷ್‌ ಅವರು ‘ರಾಹುಲ್‌ ಗಾಂಧಿಯನ್ನು ಗುರಿಯಾಗಿಸಲು ಅವರು ಯಾವ ಭಾಷೆ ಬಳಸುತ್ತಿದ್ದಾರೆ. ರಾಜಕೀಯದಲ್ಲಿ ಇಂತಹ ಅಸಭ್ಯ ವರ್ತನೆ ನಿಲ್ಲಬೇಕು. ಬಿಜೆಪಿಯ ಪಿಂಪ್‌ಗಳಂತೆ ವರ್ತಿಸುವ ರಾಜ್ಯ ಕಾಂಗ್ರೆಸ್‌ ನಾಯಕರು ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ? ಇಷ್ಟು ಕೀಳು ಮಟ್ಟಕ್ಕೆ ಇಳೀತೀರಾ? ಸುವೇಂದು ಅವರ ರಾಜಕೀಯಕ್ಕೆ ಈಗ ನಾಚಿಕೆಯೇ ಇಲ್ಲ.ಈ ರೋಗಗ್ರಸ್ತ ಭಾಷೆಯನ್ನು ನಾನು ಪ್ರತಿಭಟಿಸುತ್ತೇನೆ ಎಂದಿದ್ದಾರೆ. ಹಿಂದೆ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿಯವರ ನಂಬಿಕಸ್ಥರಾಗಿದ್ದ ಸುವೇಂದು ಅಧಿಕಾರಿಯನ್ನು ತೃಣಮೂಲ ಕಾಂಗ್ರೆಸ್ ದೇಶದ್ರೋಹಿ ಎಂದಿತ್ತು.

Previous Post
ಜಸ್ಪ್ರೀತ್ ಬುಮ್ರಾ; ಕಠಿಣ ಕ್ರಮ ಕೈಗೊಂಡ ಐಸಿಸಿ
Next Post
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​​ಗೆ 10 ವರ್ಷ ಜೈಲು ಶಿಕ್ಷೆ

Recent News