ರೈತರ ಹೋರಾಟಕ್ಕೆ ಕಾಂಗ್ರೇಸ್ ಬೆಂಬಲ – ಖರ್ಗೆ ಘೋಷಣೆ

ರೈತರ ಹೋರಾಟಕ್ಕೆ ಕಾಂಗ್ರೇಸ್ ಬೆಂಬಲ – ಖರ್ಗೆ ಘೋಷಣೆ

ನವದೆಹಲಿ : ಬಿಜೆಪಿ ತಾನು ನೀಡಿದ ಭರವಸೆಗಳನ್ನು ಮರೆತು ಈಗ ರೈತರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ, ಕಾಂಗ್ರೇಸ್ ಅನ್ನದಾತರ ಹೋರಾಟಕ್ಕೆ ಬೆಂಬಲಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ದೆಹಲಿ ಚಲೋ ಹೋರಾಟಕ್ಕೆ ಸಂಬಂಧಿಸಿದಂತೆ ಪೊಸ್ಟ್ ಮಾಡಿರುವ ಅವರು ರೈತರು ದೆಹಲಿಗೆ ಬಾರದಂತೆ ತಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು‌.

ವಿವಿಧ ಬೇಡಿಕೆಗೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ ಪ್ರತಿಭಟನೆ ಆರಂಭವಾಗಿದೆ, ಮೋದಿ ಸರ್ಕಾರ ರಸ್ತೆಗೆ ಸಿಮೆಂಟ್ ಬಿಕ್ಸ್ ಅಳವಡಿಸಿ, ಬ್ಯಾರಿಕೇಡ್ ಹಾಕಿ ಮುಳ್ಳುತಂತಿಗಳನ್ನು ಹಾಕಿ ರಸ್ತೆಗೆ ಮೊಳೆ ಹೊಡೆದು ರೈತರನ್ನು ತಡೆಯುತ್ತಿದೆ. ಡ್ರೋನ್‌ಗಳಿಂದ ರೈತರ ಮೇಲೆ ಅಶ್ರುವಾಯು ಸಿಡಿಸುತ್ತಿದೆ ರೈತರ ಧ್ವನಿಗೆ ಹತ್ತಿಕ್ಕಲು ನರೇಂದ್ರ ಮೋದಿ ಸರ್ವಾಧಿಕಾರಿಯಾಗಲು ಹೊರಟಿದ್ದಾರೆ ಎಂದು ಆರೋಪಿಸಿದರು‌.

ಹಿಂದಿನ ಪ್ರತಿಭಟನೆಯಲ್ಲಿ ನರೇಂದ್ರ ಮೋದಿ ಅವರು 750 ರೈತರ ಪ್ರಾಣವನ್ನು ಬಲಿ ತೆಗೆದುಕೊಂಡರು, 10 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಅನ್ನದಾತರಿಗೆ ನೀಡಿದ್ದ ಮೂರು ಭರವಸೆಗಳನ್ನು ಪೂರೈಸಿಲ್ಲ, ರೈತರ ಆದಾಯ 2022 ರ ವೇಳೆಗೆ ದ್ವಿಗುಣಗೊಂಡಿಲ್ಲ, ಸ್ವಾಮಿನಾಥನ್ ವರದಿಯ ಪ್ರಕಾರ ಇನ್‌ಪುಟ್ ವೆಚ್ಚದ ಅನುಷ್ಠಾನ + 50% MSP ಜಾರಿಯಾಗಿಲ್ಲ, MSP ಕಾನೂನು ಜಾರಿ ಮಾಡಿಲ್ಲ

ಈಗ 62 ಕೋಟಿ ರೈತರು ಧ್ವನಿ ಎತ್ತುವ ಸಮಯ ಬಂದಿದೆ, ಕಾಂಗ್ರೆಸ್ ರೈತರ ಪರವಾಗಿ ಧ್ವನಿ ಎತ್ತಲಿದೆ ರೈತ ಚಳವಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ, ನಾವು ಹೆದರುವುದಿಲ್ಲ, ತಲೆಬಾಗುವುದಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಪೊಸ್ಟ್ ಮಾಡಿದ್ದಾರೆ.

Previous Post
ಸಮಸ್ಯೆ ಪರಿಹಾರಕ್ಕಾಗಿ ನಾವು ಮಾತುಕತೆಗೆ ಸಿದ್ಧ ದೆಹಲಿ ಚೆಲೋ ಹೋರಾಟದ ಬಗ್ಗೆ ಕೃಷಿ ಸಚಿವ ಅರ್ಜುನ್ ಮುಂಡಾ ಪ್ರತಿಕ್ರಿಯೆ
Next Post
ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ದೆಹಲಿಯಲ್ಲಿ ಧೀಢಿರ್ ಪ್ರತಿಭಟನೆ ಸಾಧ್ಯತೆ, ರೈತ ಹೋರಾಟ ಗಂಭೀರತೆ ಬಗ್ಗೆ ಗುಪ್ತಚರ ಇಲಾಖೆ ವರದಿ

Recent News