ಲೈಂಗಿಕ ಕಿರುಕುಳದ ಆರೋಪ: 500 ವಿದ್ಯಾರ್ಥಿನಿಯರಿಂದ ಪ್ರಧಾನಿ, ಹರಿಯಾಣ ಸಿಎಂಗೆ ಪತ್ರ

ಲೈಂಗಿಕ ಕಿರುಕುಳದ ಆರೋಪ: 500 ವಿದ್ಯಾರ್ಥಿನಿಯರಿಂದ ಪ್ರಧಾನಿ, ಹರಿಯಾಣ ಸಿಎಂಗೆ ಪತ್ರ

ಸಿರ್ಸಾ ಜನವರಿ 9: ಚೌಧರಿ ದೇವಿ ಲಾಲ್ ವಿಶ್ವವಿದ್ಯಾನಿಲಯದ (Chaudhary Devi Lal University) ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಅವರ ಅಮಾನತು ಹಾಗೂ ತನಿಖೆಗೆ ಆಗ್ರಹಿಸಿ ಹರಿಯಾಣದ ಸಿರ್ಸಾದ ಐನೂರು ಮಹಿಳಾ ಕಾಲೇಜು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಮುಖ್ಯಮಂತ್ರಿ ಎಂಎಲ್ ಖಟ್ಟರ್‌ಗೆ (Chief Minister ML Khattar) ಪತ್ರ ಬರೆದಿದ್ದಾರೆ. ಪತ್ರದ ಪ್ರತಿಗಳನ್ನು ಉಪಕುಲಪತಿ ಡಾ ಅಜ್ಮೀರ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ಹಿರಿಯ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೂ ಕಳುಹಿಸಲಾಗಿದೆ.

ಪ್ರೊಫೆಸರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಪತ್ರದಲ್ಲಿ ಪ್ರೊಫೆಸರ್ ವಿರುದ್ಧ ಅಶ್ಲೀಲ ಕೃತ್ಯಗಳು ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ಪತ್ರದ ಪ್ರಕಾರ ಹುಡುಗಿಯರನ್ನು ತನ್ನ ಕಚೇರಿಗೆ ಕರೆಸಿ ಸ್ನಾನಗೃಹಕ್ಕೆ ಕರೆದುಕೊಂಡು ಹೋಗುತ್ತಾನಂತೆ ಆರೋಪಿ ಪ್ರೊಫೆಸರ್. ಬಳಿಕ ಆತ ವಿದ್ಯಾರ್ಥಿಗಳ ಖಾಸಗಿ ಭಾಗಗಳನ್ನು ಮುಟ್ಟುತ್ತಾನೆ ಮತ್ತು ತಮ್ಮೊಂದಿಗೆ ಅಶ್ಲೀಲ ಕೆಲಸಗಳಿಗೆ ಮುಂದಾಗುತ್ತಾನೆ ಎಂದು ವಿವರಿಸಲಾಗಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಆತನ ವಿರುದ್ಧ ಪ್ರತಿಭಟಿಸಿದಾಗ ಆತ ವಿದ್ಯಾರ್ಥಿಗಳಿಗೆ ‘ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹುಡುಗಿಯರು ಆರೋಪಿಸಿದ್ದಾರೆ. ಪತ್ರದಲ್ಲಿ ಇದು ಹಲವು ತಿಂಗಳುಗಳಿಂದ ನಡೆಯುತ್ತಿದೆ ಎಂದು ಹೇಳಲಾಗಿದೆ. ಇನ್ನೂ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ತಕ್ಷಣವೇ ಐಪಿಎಸ್ ಅಧಿಕಾರಿ ದೀಪ್ತಿ ಗಾರ್ಗ್ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿದ್ದೇವೆ. (ಎಸ್‌ಐಟಿ) ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ತಂಡ ಈಗಾಗಲೇ ಅನೇಕ ಜನರ ಹೇಳಿಕೆಗಳನ್ನು ತೆಗೆದುಕೊಂಡಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀಕಾಂತ್ ಜಾಧವ್ ಹೇಳಿದ್ದಾರೆ. ಎಸ್‌ಐಟಿ ಈಗಾಗಲೇ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು, ಹೇಳಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಶ್ರೀಕಾಂತ್ ಜಾಧವ್ ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಬೆದರಿಕೆ ಹುಡುಗಿಯರು ಪೊಲೀಸ್ ಸಹಾಯಕ್ಕೆ ಬರುವು ಮುಂಚಿತವಾಗಿ ವೈಸ್ ಚಾನ್ಸೆಲರ್‌ಗೆ ಈ ವಿಚಾರ ಹೇಳಿಕೊಂಡರು. ಆದರೆ ಅವರು ವಿದ್ಯಾರ್ಥಿಗಳನ್ನು ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಏಕೆಂದರೆ ಈ ಪ್ರಾಧ್ಯಾಪಕರು ಅಪಾರ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿ ಎಂದು ಉಪಕುಲಪತಿ ಅವರು ಆರೋಪಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರು ಎಂದು ವರದಿಯಾಗಿದೆ. ಹುಡುಗಿಯರು ಅವರ ವಿರುದ್ಧ ಹೋದರೆ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂದು ಅವರು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಈ ನಡುವೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ ರಾಜೇಶ್ ಕುಮಾರ್ ಬನ್ಸಾಲ್ ಅವರು ಅನಾಮಧೇಯ ಪತ್ರದ ಸ್ವೀಕೃತಿಯನ್ನು ಖಚಿತಪಡಿಸಿದ್ದಾರೆ. “ಪೊಲೀಸರು ತನಿಖೆ ನಡೆಸುತ್ತಿದ್ದಾರೆ… ವಿಶ್ವವಿದ್ಯಾನಿಲಯ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ತನ್ನದೇ ಆದ ಸಮಿತಿಯನ್ನು ಹೊಂದಿದೆ. ಇದು ಗಂಭೀರ ಆರೋಪವಾಗಿದೆ … ಪತ್ರದಲ್ಲಿ ಯಾವುದೇ ಹೆಸರಿಲ್ಲ ಆದರೆ ನಾವು ಇದನ್ನು ತನಿಖೆ ಮಾಡುತ್ತೇವೆ” ಎಂದು ರಿಜಿಸ್ಟ್ರಾರ್ ಡಾ ರಾಜೇಶ್ ಕುಮಾರ್ ಅವರು ಎನ್‌ಡಿಟಿವಿಗೆ ತಿಳಿಸಿದರು. ‘ತಪ್ಪು ಮಾಡಿದ್ದರೆ ಶಿಕ್ಷೆ, ತಪ್ಪು ಮಾಡದವರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳಿ’ “ನಂತರವಷ್ಟೇ ಕ್ರಮ ಕೈಗೊಳ್ಳಲಾಗುವುದು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಲಾಗುವುದಿಲ್ಲ. ಆದರೆ ಯಾರಾದರೂ ನಿರಪರಾಧಿಗಳಾಗಿದ್ದರೆ ಅವರ ಪಾತ್ರವನ್ನು ಹತ್ಯೆ ಮಾಡಬಾರದು” ಎಂದು ರಿಜಿಸ್ಟ್ರಾರ್ ಹೇಳಿದರು. ಸಂಬಂಧಿತ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಡಾ ಬನ್ಸಾಲ್ ಹೇಳಿದ್ದಾರೆ. ಆದಾಗ್ಯೂ, ಆರೋಪಿ ಪ್ರೊಫೆಸರ್ ಈಗಾಗಲೇ “ತಮ್ಮ ಕಚೇರಿಯ ಸಿಸಿಟಿವಿ ಫೂಟೇಜ್‌ನಿಂದ ಅವರ ಅಸಭ್ಯ ಕಾರ್ಯಗಳನ್ನು ಅಳಿಸಿದ್ದಾರೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಮ್ಮ ಕುಟುಂಬಗಳಿಗೆ ಅಗೌರವದ ಭಯದಿಂದ ತಮ್ಮ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ ಎಂದು ಹುಡುಗಿಯರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯವು ಸಾರ್ವಜನಿಕ ಅಭಿಪ್ರಾಯ ಹಾಗೂ ಮರ್ಯಾದೆಗೆ ಅಂಜಿ ಪ್ರಾಧ್ಯಾಪಕರ ವಿರುದ್ಧ ಕ್ರಮವನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು. ಅಲ್ಲದೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ತನಿಖೆ ಆರಂಭ ತನಿಖೆ ನಡೆಯುತ್ತಿದೆ ಮತ್ತು ಕೆಲವು ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಸಿರ್ಸಾ ಪೊಲೀಸ್ ಅಧಿಕಾರಿ ದೀಪ್ತಿ ಗಾರ್ಗ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆರೋಪಿ ಪ್ರೊಫೆಸರ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಕಷ್ಟು ಪುರಾವೆಗಳು ದೊರೆತರೆ ಪ್ರಕರಣ ದಾಖಲಿಸಲಾಗುವುದು ಎಂದು ಗರ್ಗ್ ತಿಳಿಸಿದ್ದಾರೆ. ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರನ್ನು, ತನ್ನ ಆಶ್ರಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬಂಧಿಸಲ್ಪಟ್ಟು ಸೇವೆಯಿಂದ ವಜಾಗೊಳಿಸಿದ ತಿಂಗಳ ನಂತರ ಈ ಪತ್ರ ಬಂದಿದೆ.

Previous Post
ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ?
Next Post
Maldives-India-Israel: ವಿವಾದ ಮಧ್ಯೆ ಲಕ್ಷದ್ವೀಪದಲ್ಲಿ ‘ಇಸ್ರೇಲ್’ ಮಹತ್ವದ ಘೋಷಣೆ

Recent News