ಲೋಕಸಭಾ ಚುನಾವಣೆ: ಕಾಂಗ್ರೆಸ್‌ ನಿಂದ 16 ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ರೆಡಿ?

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ನಿಂದ 16 ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ರೆಡಿ?

ಬೆಂಗಳೂರು, ಫೆಬ್ರವರಿ 05: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬಿಗಿರುವ ಕಾಂಗ್ರೆಸ್‌, ಲೋಕಸಮರಕ್ಕೆ ಸಕಲ ಸಿದ್ದತೆಯನ್ನ ನಡೆಸುತ್ತಿದೆ. ಇತ್ತ ಕಾಂಗ್ರೆಸ್‌ ಠಕ್ಕರ್‌ ಕೊಡಲು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಕಮಲ-ದಳ ನಾಯಕರು ಸಹ ಎಚ್ಚರಿಕೆ ಹೆಜ್ಜೆಯೊಂದಿಗೆ ವಿಶೇಷ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಹೌದು, ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನ ಕಣಕ್ಕಿಳಿಸುವ ಕುರಿತು ಸರಣಿ ಚರ್ಚೆಗೂ ನಡೆಯುತ್ತಿದೆ. ಆದರೆ, ಮಂತ್ರಿಗಳು ಮಾತ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿರಾಸಕ್ತಿ ತೋರುತ್ತಿದ್ದಾರೆ. ಇತ್ತ ಕಾಂಗ್ರೆಸ್‌ ಹೈಕಮಾಂಡ್‌ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್‌ ನೀಡಿದೆ. ಇದರ ನಡುವೆ ಕಾಂಗ್ರೆಸ್​ ಅಖಾಡದಲ್ಲಿ ಗೆಲ್ಲುವಂತಹ ಹುರಿಯಾಳುಗಳನ್ನ ಹುಡುಕುತ್ತಿದೆ. ಇದರ ಭಾಗವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂರಾಜ್ಯ ಕಾಂಗ್ರೆಸ್‌ ನಾಯಕರು ಸಿದ್ಧ ಮಾಡಿಕೊಂಡಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಈ ಬಗ್ಗೆ ಮ್ಯಾರಥಾನ್​ ಸಭೆ​ ನಡೆಸಿದ್ದು, 16 ಹೆಚ್ಚು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಬಹುತೇಕ ಸಂಭಾವ್ಯ ಅಭ್ಯರ್ಥಿಗಳ ಇದೆ ಅಂತ ಹೇಳಲಾಗುತ್ತಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ. 16 ಜನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ ಕೋಲಾರ- ಕೆ,ಹೆಚ್​ ಮುನಿಯಪ್ಪ ಅಥವಾ ಚಿಕ್ಕಪೆದ್ದಣ್ಣ ಮೈಸೂರು ಕೊಡಗು -ಎಂ.ಲಕ್ಷ್ಮಣ್​, ವೈದ್ಯ ಶುಶ್ರುತ್​ ಗೌಡ ಅಥವಾ ಯತೀಂದ್ರ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ-ರಕ್ಷಾ ರಾಮಯ್ಯ ಅಥವಾ ಮಾಜಿ ಸಿಎಂ ವೀರಪ್ಪ ಮೊಯ್ಲಿ ಚಾಮರಾಜನಗರ-ಹೆಚ್​.ಸಿ ಮಹದೇವಪ್ಪ ಬಳ್ಳಾರಿ-ಇ.ತುಕರಾಂ ಮಗಳು ಸೌಪರ್ಣಿಕಾ ಬೀದರ್-ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಕಲಬುರಗಿ-ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಬೆಂಗಳೂರು ದಕ್ಷಿಣ-ಎನ್​. ರಮೇಶ್​ ಕುಮಾರ್ ಬೆಂಗಳೂರು ಕೇಂದ್ರ- ಹ್ಯಾರಿಸ್ ಮಹಮದ್ ಬೆಂಗಳೂರು ಉತ್ತರ-ಕುಸುಮಾ ಹನುಮಂತರಾಯಪ್ಪ ಅಥವಾ ಸೌಮ್ಯಾ ರೆಡ್ಡಿ ಹುಬ್ಬಳ್ಳಿ ಧಾರವಾಡ-ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ, ರಜತ್ ಉಳ್ಳಾಗಡ್ಡಿ ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ ಬೆಳಗಾವಿ-ವೈದ್ಯ ಗಿರೀಶ್​ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್ ಮಂಡ್ಯ-ಸಮಾಜ ಸೇವಕ ಸ್ಟಾರ್​ ಚಂದ್ರು ಅಥವಾ ಸುಮಲತಾ ಅಂಬರೀಶ್ ಕೊಪ್ಪಳ-ರಾಜಶೇಖರ್ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಶಿವರಾಮೇಗೌಡ. ತುಮಕೂರು; ಮುದ್ದಹನುಮೇಗೌಡ( ಶೀಘ್ರದಲ್ಲೇ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ) ಇತ್ತ ಕಾಂಗ್ರೆಸ್‌ ಪಾಳಯದಲ್ಲಿ ಲೋಕಸಭಾ ಚುನಾವಣಾ ಟಿಕೆಟ್‌ ಗಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದು, ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ ವೈದ್ಯ ಗಿರೀಶ್​ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​, ಉತ್ತರ ಕನ್ನಡದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್​ ಅಥವಾ ಭೀಮಣ್ಣ ನಾಯಕ್, ತುಮಕೂರಿನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಟಿಕೆಟ್‌ ನೀಡುವ ಸಾಧ್ಯತೆ ಇದೆ.

Previous Post
ಮನಮೋಹನ್ ಸಿಂಗ್ ಆಡಳಿತ ವಿವರಿಸಿ ಬಿಜೆಪಿಗೆ ಚಾಲೆಂಜ್ ಮಾಡಿದ ಜಿ.ಪರಮೇಶ್ವರ್
Next Post
ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿ ಹೇಗಿದೆ

Recent News