ಲೋಕಸಭೆ ಚುನಾವಣೆ ಸಿದ್ಧತೆ: ನಾಳೆಯಿಂದ ರಾಜ್ಯಗಳಿಗೆ ಚುನಾವಣಾ ಆಯೋಗ ಭೇಟಿ

ಲೋಕಸಭೆ ಚುನಾವಣೆ ಸಿದ್ಧತೆ: ನಾಳೆಯಿಂದ ರಾಜ್ಯಗಳಿಗೆ ಚುನಾವಣಾ ಆಯೋಗ ಭೇಟಿ

ನವದೆಹಲಿ, ಜ‌. 5: ಜನವರಿ 7 ಮತ್ತು 10ರವರೆಗೆ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡುವ ಮೂಲಕ ಚುನಾವಣಾ ಆಯೋಗವು (ಇಸಿ) ಲೋಕಸಭೆ ಚುನಾವಣೆಗೆ ರಾಜ್ಯಗಳ ಸಿದ್ಧತೆಯನ್ನು ಪರಿಶೀಲಿಸಲು ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ, ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರನ್ನೊಳಗೊಂಡ ಆಯೋಗವು ಜನವರಿ 7 ಮತ್ತು 10 ರ ನಡುವೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪರಿಶೀಲಿಸಲಿದೆ. ಭೇಟಿಗೂ ಮುನ್ನ, ಉಪ ಚುನಾವಣಾ ಆಯುಕ್ತರು ಜನವರಿ 6 ರಂದು ಎರಡು ರಾಜ್ಯಗಳಲ್ಲಿ ಸಿದ್ಧತೆಗಳ ಬಗ್ಗೆ ಸಂಪೂರ್ಣ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ. ಉಪಚುನಾವಣಾ ಆಯುಕ್ತರು ಈಗಾಗಲೇ ಬಹುತೇಕ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಲೋಕಸಭಾ ಚುನಾವಣೆಯ ಸಿದ್ಧತೆಯ ಮೇಲ್ವಿಚಾರಣೆ ನಡೆಸಿದ್ದಾರೆ.

ರಾಜಕೀಯ ಪಕ್ಷಗಳು, ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು. ಅದರ ಬೂತ್ ಮಟ್ಟದ ಚುನಾವಣಾ ಸಿಬ್ಬಂದಿಗಳನ್ನು ಭೇಟಿ ಮಾಡಲು ಚುನಾವಣೆಗಳಿಗೆ ಮುಂಚಿತವಾಗಿ ರಾಜ್ಯಗಳ ಪ್ರವಾಸವನ್ನು ಕೈಗೊಳ್ಳುವುದು ಚುನಾವಣಾ ಆಯೋಗದ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ, ಆಯೋಗದ ಅಧಿಕಾರಿಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದ ರಾಜ್ಯಗಳನ್ನು ಪ್ರವಾಸ ಪಟ್ಟಿಯಿಂದ ಬಿಟ್ಟುಬಿಡಬಹುದು.

2019ರಲ್ಲಿ, ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಯಿತು. ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಯಿತು. ಮೇ 23 ರಂದು ಮತ ಎಣಿಕೆ ಮಾಡಲಾಯಿತು.

Previous Post
ಪೋಕ್ಸೋ; ಕೊಲ್ಕತ್ತಾ ಹೈಕೋರ್ಟ್ ತಪ್ಪು ಸಂದೇಶ ರವಾನಿಸುತ್ತಿದೆ ಎಂದ ಸುಪ್ರೀಂ
Next Post
ರಾಜ್ಯಸಭೆ ನಾಮನಿರ್ದೇಶನಕ್ಕೆ ಸಹಿ ಹಾಕಲು ಸಂಜಯ್ ಸಿಂಗ್‌ಗೆ ಕೋರ್ಟ್‌ ಅನುಮತಿ

Recent News