ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್

ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್

ದೆಹಲಿ ಜನವರಿ 15: ವಿಮಾನ ಹಾರಾಟ ವಿಳಂಬವಾಗಿದ್ದಕ್ಕೆ ಇಂಡಿಗೋ ಪೈಲಟ್ ಮೇಲೆ ಪ್ರಯಾಣಿಕನಿಂದ ಹಲ್ಲೆ ನಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಪ್ರಯಾಣಿಕರನ್ನು ಸದ್ಯ ಬಂಧಿಸಲಾಗಿದೆ. ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಭಾನುವಾರ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಕೋಪಗೊಂಡು ಪೈಲಟ್ ಮೇಲೆ ಹಲ್ಲೆ ಮಾಡಿದ್ದಾರೆ. ದೆಹಲಿಯಿಂದ ಗೋವಾಕ್ಕೆ ತೆರಳಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ‘ನೀವು ವಿಮಾನವನ್ನು ಹಾರಿಸಲು ಬಯಸದಿದ್ದರೆ’ ಎಂದು ಹೇಳುತ್ತಾ ಪ್ರಯಾಣಿಕ ಪೈಲೆಟ್ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಈ ವೇಳೆ ಗಗನಸಖಿ ಪ್ರಯಾಣಿಕನನ್ನು ತಡೆಯಲು ಮುಂದಾಗುತ್ತಾರೆ. ಆದರೂ ಪ್ರಯಾಣಿಕ ಪೈಲೆಟ್ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಈ ದೃಶ್ಯವನ್ನು ಕಂಡು ಇತರ ಪ್ರಯಾಣಿಕರು ಆಘಾತಕ್ಕೊಳಗಾದರು. ವೀಡಿಯೊದ ಕೊನೆಯಲ್ಲಿ ಇತರ ಪ್ರಯಾಣಿಕರು ಕೋಪಗೊಂಡ ಪ್ರಯಾಣಿಕನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ.

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಭಾನುವಾರ ರಾತ್ರಿ ಬಳಕೆದಾರ ಎವ್ಜೆನಿಯಾ ಬೆಲ್ಸ್ಕಯಾ ಎಂಬುವವರು ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) ಡಿಸಿಪಿ ಪ್ರಕಾರ, ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ. ಘಟನೆಯನ್ನು ಪರಿಹರಿಸಲು ಇಂಡಿಗೋ ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಅಸಭ್ಯ ವರ್ತನೆಯ ಪ್ರಯಾಣಿಕರನ್ನು ‘ನೊ-ಫ್ಲೈ ಲಿಸ್ಟ್’ ನಲ್ಲಿ ಹಾಕಬಹುದು. ಹೀಗೆ ಮಾಡಿದಲ್ಲಿ ಆ ಪ್ರಯಾಣಿಕ ಎಂದಿಗೂ ವಿಮಾನದಲ್ಲಿ ಹಾರಾಟ ಮಾಡಲು ಅರ್ಹನಾಗಿರುವುದಿಲ್ಲ. ಈ ಸಮಿತಿ ಪ್ರಯಾಣಿಕರ ಸಂಭಾವ್ಯ ವರ್ತನೆಯ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಿದೆ.

ವಿಮಾನ ಹಾರಾಟ ತಡವಾಗಿದ್ದು ಯಾಕೆ? ಬಾನುವಾರ ದಟ್ಟವಾದ ಮಂಜಿನ ಸ್ಥಿತಿಯಿಂದಾಗಿ ವಿಮಾನ ಕಾರ್ಯಾಚರಣೆಗಳಲ್ಲಿ ಭಾರಿ ಅಡೆತಡೆ ಉಂಟಾಗಿದೆ. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 11 ಗಂಟೆಗಳ ಕಾಲ ದಟ್ಟವಾದ ಮಂಜು ಆವರಿಸಿತ್ತು. ಹೀಗಾಗಿ 11 ಗಂಟೆಗಳ ಕಾಲ ವಿಮಾನ ಹಾರಾಟ ತಡವಾಗಿದೆ. ಸಾವಿರಾರು ಪ್ರಯಾಣಿಕರು ಗಂಟೆಗಳ ಕಾಲ ಕಾಯಬೇಕಾಯಿತು. ಇದರಿಂದ ಪ್ರಯಾಣಿಕ ಕೋಪಗೊಂಡಿದ್ದಾನೆ. ಈ ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯೆ ಈ ವಿಡಿಯೋ ಕಂಡು ಹಲವಾರು ಜನ X ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಯಾಣಿಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೆಲವರು ವಿಮಾನ ಹಾರಾಟ ವಿಳಂಬದಿಂದಾಗಿ ಹತಾಶೆಯನ್ನು ಸೂಚಿಸಿದ್ದಾರೆ. “ಪೈಲಟ್ ಸರಿಯಾಗಿದ್ದಾನೆ. ಪೈಲಟ್‌ಗಳ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಅಪರೂಪ. @DGCAIndia ಗೆ ನಾನು ವಿನಂತಿಸುತ್ತೇನೆ, ಆ ಪ್ರಯಾಣಿಕನು ನೋ ಫ್ಲೈ ಲಿಸ್ಟ್‌ನಲ್ಲಿ ಇರಬೇಕೆಂದು ಬಯಸುತ್ತೇನೆ” ಒಬ್ಬ ಬಳಕೆದಾರರು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, “ಇದರಲ್ಲಿ ವಿಮಾನ ಸಿಬ್ಬಂದಿಯದ್ದು ತಪ್ಪೇನಿದೆ. ಹವಾಮಾನದಲ್ಲಿ ಬದಲಾವಣೆಯಾದಾಗ ವಿಮಾನ ಹಾರಾಟ ಮಾಡಲು ಹೇಗೆ ಸಾಧ್ಯ? ಇದರ ಸಣ್ಣ ಪರಿವಿಲ್ಲದೆ ವಿಮಾನ ಹಾರಾಟ ಮಾಡುವ ಪ್ರಯಾಣಿಕ ಈತ. ಈತನನ್ನು ನೋ ಫ್ಲೈ ಲಿಸ್ಟ್ ಹಾಕುವುದು ಸೂಕ್ತ” ಎಂದು ಬರೆದಿದ್ದಾರೆ. “ವಿಳಂಬಕ್ಕೆ ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿ ಏನು ಮಾಡಬೇಕು? ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ. ಈ ಮನುಷ್ಯನನ್ನು ಬಂಧಿಸಿ. ಅವನನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಿ”ಎಂದು ಇನ್ನೊಬ್ಬ ಎಕ್ಸ್ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದಿದ್ದಾರೆ.

Previous Post
ಶ್ರೀರಾಮ ಮಂದಿರದ ಸಾರ್ವಜಕರ ಪ್ರವೇಶಕ್ಕೆ ದಿನಾಂಕ ಫಿಕ್ಸ್
Next Post
‘ನಮ್ಮ ಮೆಟ್ರೋ’ ಸಿಹಿ ಸುದ್ದಿ: ಪಂದ್ಯಾವಳಿ ದಿನ ರೈಲು ಸೇವೆ ವಿಸ್ತರಣೆ, ದಿನಾಂಕ, ಸಮಯದ ಮಾಹಿತಿ

Recent News