ವೆಂಕಯ್ಯ ನಾಯ್ಡು, ಚಿರಂಜೀವಿ ಸೇರಿದಂತೆ 132 ಸೆಲೆಬ್ರಿಟಿಗಳಿಗೆ ಪದ್ಮ ಪ್ರಶಸ್ತಿ

ವೆಂಕಯ್ಯ ನಾಯ್ಡು, ಚಿರಂಜೀವಿ ಸೇರಿದಂತೆ 132 ಸೆಲೆಬ್ರಿಟಿಗಳಿಗೆ ಪದ್ಮ ಪ್ರಶಸ್ತಿ

ನವದೆಹಲಿ ಜನವರಿ 26: ಗಣರಾಜ್ಯೋತ್ಸವಕ್ಕೂ ಮುನ್ನಾ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ವರ್ಷ 5 ‘ಪದ್ಮವಿಭೂಷಣ’, 17 ‘ಪದ್ಮಭೂಷಣ’ ಮತ್ತು 110 ‘ಪದ್ಮಶ್ರೀ’ ಪ್ರಶಸ್ತಿಗಳನ್ನು ನೀಡಲಾಗುವುದು. ಹಿರಿಯ ನಟಿ ವೈಜಯಂತಿ ಮಾಲಾ ಮತ್ತು ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ನಟ ಮಿಥುನ್ ಚಕ್ರವರ್ತಿ ಮತ್ತು ಗಾಯಕಿ ಉಷಾ ಉತ್ತುಪ್ ಅವರು ‘ಪದ್ಮಭೂಷಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ 34 ಅಸಾಧಾರಣ ವೀರರು ಸೇರಿದಂತೆ 110 ಜನರಿಗೆ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿದ ವ್ಯಕ್ತಿಗಳಲ್ಲಿ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ (ಮರಣೋತ್ತರ) ಕೂಡ ಸೇರಿದ್ದಾರೆ. ಇದರೊಂದಿಗೆ ತೈವಾನ್‌ನ ಫಾಕ್ಸ್‌ಕಾನ್ ಕಂಪನಿಯ ಅಧ್ಯಕ್ಷ ಯಂಗ್ ಲಿಯು ಕೂಡ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಹಿರಿಯ ನಟಿ ವೈಜಯಂತಿಮಾಲಾ ಜೊತೆಗೆ, ಖ್ಯಾತ ನೃತ್ಯಗಾರ್ತಿ ಪದ್ಮಾ ಸುಬ್ರಮಣ್ಯಂ, ಹಿರಿಯ ನಟ ಚಿರಂಜೀವಿ ಮತ್ತು ಸುಲಭ್ ಟಾಯ್ಲೆಟ್ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ (ಮರಣೋತ್ತರ) ಅವರ ಹೆಸರುಗಳೂ ಪದ್ಮವಿಭೂಷಣ ಪ್ರಶಸ್ತಿಯ ಪಟ್ಟಿಯಲ್ಲಿ ಸೇರಿವೆ. ಪದ್ಮ ಪ್ರಶಸ್ತಿ ವಿಜೇತರ ಪೈಕಿ 30 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲಿ ವಿದೇಶಿ/ಎನ್‌ಆರ್‌ಐ/ಪಿಐಒ/ಒಸಿಐ ವರ್ಗದ 8 ಮಂದಿ ಇದ್ದಾರೆ. 9 ಮಂದಿ ಸೆಲೆಬ್ರಿಟಿಗಳಿಗೆ ಮರಣೋತ್ತರ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಪದ್ಮವಿಭೂಷಣವನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣವನ್ನು ನೀಡಲಾಗುತ್ತದೆ. ಪದ್ಮಶ್ರೀಯನ್ನು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಪದ್ಮ ಪ್ರಶಸ್ತಿಗಳು 2024 ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ: ಪದ್ಮವಿಭೂಷಣ 1. ವೈಜಯಂತಿಮಾಲಾ ಬಾಲಿ (Vyjayantimala Bali) 2. ಕೊನಿಡೇಲ ಚಿರಂಜೀವಿ (Konidela Chiranjeevi) 3.ಎಂ ವೆಂಕಯ್ಯ ನಾಯ್ಡು (M Venkaiah Naidu) 4. ಬಿಂದೇಶ್ವರ ಪಾಠಕ್ (ಮರಣೋತ್ತರ) Bindeshwar Pathak (Posthumous) 5. ಪದ್ಮಾ ಸುಬ್ರಹ್ಮಣ್ಯಂ (Padma Subrahmanyam) ಪದ್ಮಭೂಷಣ 1. ಎಂ ಫಾತಿಮಾ ಬೀವಿ (ಮರಣೋತ್ತರ) 2. ಹಾರ್ಮುಸ್ಜಿ ಎನ್ ಕಾಮಾ (ormusji N Cama) 3. ಮಿಥುನ್ ಚಕ್ರವರ್ತಿ 4. ಸೀತಾರಾಮ್ ಜಿಂದಾಲ್ 5. ಯಂಗ್ ಲಿಯು (Young Liu) 6. ಅಶ್ವಿನ್ ಬಾಲಚಂದ್ ಮೆಹ್ತಾ 7. ಸತ್ಯಬ್ರತ ಮುಖರ್ಜಿ (ಮರಣೋತ್ತರ) 8. ರಾಮ್ ನಾಯಕ್ 9. ತೇಜಸ್ ಮಧುಸೂದನ್ ಪಟೇಲ್ 10. ಓಲಂಚೇರಿ ರಾಜಗೋಪಾಲ್ (Olanchery Rajagopal) 11. ದತ್ತಾತ್ರೇಯ ಅಂಬಾದಾಸ್ ಮಾಯಾಲೂ ಅಲಿಯಾಸ್ ರಾಜ್ದತ್ (Dattatray Ambadas Mayaloo Alias Rajdutt) 12. ಟೋಗ್ಡಾನ್ ರಿಂಪೋಚೆ (ಮರಣೋತ್ತರ) Togdan Rinpoche (Posthumous) 13. ಪ್ಯಾರೇಲಾಲ್ ಶರ್ಮಾ 14. ಚಂದ್ರೇಶ್ವರ ಪ್ರಸಾದ್ ಠಾಕೂರ್ 15. ಉಷಾ ಉತ್ತುಪ್ 16. ವಿಜಯಕಾಂತ್ (ಮರಣೋತ್ತರ) 17. ಕುಂದನ್ ವ್ಯಾಸ್ ಪದ್ಮಶ್ರೀ 1.ಖಲೀಲ್ ಅಹಮದ್ 2. ಬದ್ರಪ್ಪನ ಎಂ (Badrappan M) 3. ಕಾಲೂರಮ್ ಬಮಾನಿಯಾ 4. ರೆಜ್ವಾನಾ ಚೌಧರಿ ಬನ್ಯಾ 5. ನಸೀಮ್ ಬಾನೋ 6. ರಾಮಲಾಲ್ ಬರೆತ್ 7. ಗೀತಾ ರಾಯ್ ಬರ್ಮನ್ 8. ಪರ್ಬತಿ ಬರುವಾ 9. ಸರ್ಬೇಶ್ವರ ಬಾಸುಮತರಿ (Sarbeswar Basumatary) 10. ಸೋಮ್ ದತ್ತ್ ಬಟ್ಟು 11. ತಕ್ದಿರಾ ಬೇಗಂ 12. ಸತ್ಯನಾರಾಯಣ ಬೇಲೇರಿ 13.ದ್ರೋಣ ಭೂಯಾನ್ 14. ಅಶೋಕ್ ಕುಮಾರ್ ಬಿಸ್ವಾಸ್ 15. ರೋಹನ್ ಮಚಂಡ ಬೋಪಣ್ಣ 16. ಸ್ಮೃತಿ ರೇಖಾ ಚಕ್ಮಾ 17. ನಾರಾಯಣ ಚಕ್ರವರ್ತಿ 18. ಎ ವೇಲು ಆನಂದ ಚಾರಿ 19. ರಾಮ್ ಚೇತ್ ಚೌಧರಿ 20.ಕೆ ಚೆಲ್ಲಮ್ಮಾಳ್ 21. ಜೋಷ್ನಾ ಚಿನಪ್ಪ 22. ಷಾರ್ಲೆಟ್ ಚಾಪಿನ್ 23. ರಘುವೀರ್ ಚೌಧರಿ 24. ಜೋ ಡಿಕ್ರೂಜ್ 25. ಗುಲಾಂ ನಬಿ ದಾರ್ 26.ಚಿತ್ತ ರಂಜನ್ ದೆಬ್ಬರ್ಮ 27. ಉದಯ್ ವಿಶ್ವನಾಥ್ ದೇಶಪಾಂಡೆ 28. ಪ್ರೇಮಾ ಧನರಾಜ್ 29. ರಾಧಾ ಕ್ರಿಶನ್ ಧೀಮಾನ್ 30. ಮನೋಹರ್ ಕೃಷ್ಣ ಡೋಲ್ 31. ಪಿಯರೆ ಸಿಲ್ವೈನ್ ಫಿಲಿಯೋಜಾಟ್ 32. ಮಹಾಬೀರ್ ಸಿಂಗ್ ಗುಡ್ಡು 33. ಅನುಪಮಾ ಹೊಸ್ಕೆರೆ 34. ಯಾಜ್ಡಿ ಮಾನೇಕ್ಷಾ ಇಟಲಿ (Yazdi Maneksha Italia) 35. ರಾಜಾರಾಂ ಜೈನ್ 36. ಜಂಕಿಲಾಲ್ 37. ರತನ್ ಕಹಾರ್ 38. ಯಶವಂತ್ ಸಿಂಗ್ ಕಟೋಚ್ 39. ಜಹೀರ್ I ಕಾಜಿ 40. ಗೌರವ್ ಖನ್ನಾ 41. ಸುರೇಂದ್ರ ಕಿಶೋರ್ 42. ದಾಸರಿ ಕೊಂಡಪ್ಪ 43. ಶ್ರೀಧರ್ ಮಾಕಂ ಕೃಷ್ಣಮೂರ್ತಿ 44.ಯಾನುಂಗ್ ಜಮೋಹ್ ಲೆಗೊ 45. ಜೋರ್ಡಾನ್ ಲೆಪ್ಚಾ 46. ​​ಸತೇಂದ್ರ ಸಿಂಗ್ ಲೋಹಿಯಾ 47. ಬಿನೋದ್ ಮಹಾರಾಣಾ 48. ಪೂರ್ಣಿಮಾ ಮಹತೋ 49. ಉಮಾ ಮಹೇಶ್ವರಿ ಡಿ 50. ದುಖು ಮಾಝಿ 51. ರಾಮ್ ಕುಮಾರ್ ಮಲ್ಲಿಕ್ 52. ಹೇಮಚಂದ್ ಮಾಂಝಿ 53. ಚಂದ್ರಶೇಖರ್ ಮಹದೇವರಾವ್ ಮೇಶ್ರಮ್ 54. ಸುರೇಂದ್ರ ಮೋಹನ್ ಮಿಶ್ರಾ (ಮರಣೋತ್ತರ) 55. ಅಲಿ ಮೊಹಮ್ಮದ್ ಮತ್ತು ಶ್ರೀ ಘನಿ ಮೊಹಮ್ಮದ್ (ಜೋಡಿ) 56. ಕಲ್ಪನಾ ಮೊರ್ಪಾರಿಯಾ 57. ಚಾಮಿ ಮುರ್ಮು 58. ಸಸಿಂದ್ರನ್ ಮುತ್ತುವೆಲ್ 59. ಜಿ ನಾಚಿಯಾರ್ 60. ಕಿರಣ್ ನಾಡರ್ 61. ಪಕರವೂರ್ ಚಿತ್ರನ್ ನಂಬೂದಿರಿಪಾಡ್ (ಮರಣೋತ್ತರ) 62. ನಾರಾಯಣನ್ ಇ ಪಿ 63. ಶೈಲೇಶ್ ನಾಯಕ್ 64. ಹರೀಶ್ ನಾಯಕ್ (ಮರಣೋತ್ತರ) 65. ಫ್ರೆಡ್ ನೆಗ್ರಿಟ್ 66. ಹರಿ ಓಂ 67. ಭಗಬತ್ ಪಧಾನ್ 68. ಸನಾತನ ರುದ್ರ ಪಾಲ್ 69. ಶಂಕರ ಬಾಬಾ ಪುಂಡ್ಲಿಕರಾವ್ ಪಾಪಲ್ಕರ್ 70. ರಾಧೆ ಶ್ಯಾಮ್ ಪರೀಕ್ 71. ದಯಾಳ್ ಮಾವ್ಜಿಭಾಯಿ ಪರ್ಮಾರ್ 72. ಬಿನೋದ್ ಕುಮಾರ್ ಪಸಾಯತ್ 73. ಸಿಲ್ಬಿ ಪಾಸಾಹ್ 74. ಶಾಂತಿ ದೇವಿ ಪಾಸ್ವಾನ್ ಮತ್ತು ಶ್ರೀ ಶಿವನ್ ಪಾಸ್ವಾನ್ (ಜೋಡಿ) 75. ಸಂಜಯ್ ಅನಂತ ಪಾಟೀಲ್ 76. ಮುನಿ ನಾರಾಯಣ ಪ್ರಸಾದ್ 77.ಕೆ ಎಸ್ ರಾಜಣ್ಣ 78. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ 79. ಭಗವತಿಲಾಲ್ ರಾಜಪುರೋಹಿತ್ 80. ರೊಮಾಲೋ ರಾಮ್ 81. ನವಜೀವನ್ ರಸ್ತೋಗಿ 82. ನಿರ್ಮಲ್ ರಿಷಿ 83. ಪ್ರಾಣ್ ಸಬರ್ವಾಲ್ 84. ಗದ್ದಂ ಸಮ್ಮಯ್ಯ 85. ಸಂಗತಂಕಿಮ 86. ಮಚಿಹನ್ ಸಸಾ 87. ಓಂಪ್ರಕಾಶ್ ಶರ್ಮಾ 88. ಏಕಲಬ್ಯ ಶರ್ಮಾ 89. ರಾಮ್ ಚಂದರ್ ಸಿಹಾಗ್ 90. ಹರ್ಬಿಂದರ್ ಸಿಂಗ್ 91. ಗುರ್ವಿಂದರ್ ಸಿಂಗ್ 92. ಗೋದಾವರಿ ಸಿಂಗ್ 93. ರವಿ ಪ್ರಕಾಶ್ ಸಿಂಗ್ 94. ಶೇಷಂಪಟ್ಟಿ ಟಿ ಶಿವಲಿಂಗಂ 95. ಸೋಮಣ್ಣ 96. ಕೇತಾವತ್ ಸೋಮಲಾಲ್ 97. ಶಶಿ ಸೋನಿ 98. ಊರ್ಮಿಳಾ ಶ್ರೀವಾಸ್ತವ 99. ನೇಪಾಳ ಚಂದ್ರ ಸೂತ್ರಧರ್ (ಮರಣೋತ್ತರ) 100. ಗೋಪಿನಾಥ್ ಸ್ವೈನ್ 101. ಲಕ್ಷ್ಮಣ್ ಭಟ್ ತೈಲಂಗ್ 102. ಮಾಯಾ ಟಂಡನ್ 103. ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ತಂಪುರಟ್ಟಿ 104. ಜಗದೀಶ್ ಲಾಭಶಂಕರ್ ತ್ರಿವೇದಿ 105. ಸಾನೋ ವಮುಜೊ 106. ಬಾಲಕೃಷ್ಣನ್ ಸದನಂ ಪುತಿಯ ವೀಟಿಲ್ 107. ಕುರೆಲ್ಲ ವಿಟ್ಟಲಾಚಾರ್ಯ 108. ಕಿರಣ್ ವ್ಯಾಸ್ 109. ಜಾಗೇಶ್ವರ್ ಯಾದವ್ 110. ಬಾಬು ರಾಮ್ ಯಾದವ್

Previous Post
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೃತೂರ್ವಕ ಶುಭಾಶಯಗಳನ್ನು ಕೋರಿ, ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
Next Post
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮಹಿಳಾ ಆನೆ ಮಾವುತ

Recent News