If action is not taken against the perpetrators of the communal conflict in Shimoga, the spark may spread to the state - B.Y. Vijayendra

ಶಿವಮೊಗ್ಗದಲ್ಲಿ ಕೋಮು ಸಂಘರ್ಷ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೇ ಕಿಡಿ ರಾಜ್ಯಕ್ಕೆ ಹಬ್ಬಬಹುದು – ಬಿ.ವೈ ವಿಜಯೇಂದ್ರ

ನವದೆಹಲಿ : ಇತ್ತಿಚೇಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹಿಂದು ಮಹಾಸಭಾ ಗಣಪತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ ಆದರೆ ಭಾನುವಾರ ನಡೆದ ಈದ್ ಮಿಲಾದ್ ರ್ಯಾಲಿಯಲ್ಲಿ ಶಾಂತಿಕದಡಲು ಪ್ರಯತ್ನಿಸಲಾಗಿದೆ, ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು ಇಲ್ಲದಿದ್ದರೇ ಶಿವಮೊಗ್ಗದಲ್ಲಿ ಹತ್ತಿರುವ ಕಿಡಿ ರಾಜ್ಯಕ್ಕೆ ಹಬ್ಬಿದರೂ ಆಶ್ಚರ್ಯವಿಲ್ಲ ಎಂದು ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗ ಪೋಲಿಸರು ರ್ಯಾಲಿಗೆ ಒಳ್ಳೆಯ ಭದ್ರತೆ ನೀಡಿದ್ದರು, ಇದರ ನಡುವೆಯೂ ಶಾಂತಿ ಕದಡುವ ಕೆಲಸ ನಡೆದಿದೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು, ಇಲ್ಲವಾದರೆ ಶಾಂತಿ ಕದಡುವುದಕ್ಕೆ ಕುಮ್ಮಕ್ಕು ಕೊಟ್ಟ ಹಾಗೆ ಆಗುತ್ತದೆ ಎಂದರು.

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಏನು ಹೊಸದಲ್ಲ ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಮಾತನಾಡಿ, ಇದರ ಅರ್ಥ ಯಾರು ಬೇಕಾದ್ರು ಕಲ್ಲೂ ತೂರಾಟ ನಡೆಸಬಹುದು ಅಂತನಾ? ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ, ಇಂತಹ ಹೇಳಿಕೆಗಳಿಂದ ಅವರೆ ಪರ್ಮಿಷನ್ ಕೊಟ್ಟಹಾಗೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹಲವು ಬಾರಿ ಕೋಮು ಸಂಘರ್ಷ ಘಟನೆಗಳು ಶಿವಮೊಗ್ಗದಲ್ಲಿ ನಡೆದಿದೆ, ಕೊಲೆಗಳು ಸಹ ನಡೆದಿದ್ದಾವೆ, ಈಗ ಶಾಂತಿ ನೆಲೆಸಿತ್ತು, ಅದನ್ನ ಕದಡೊ ಕೆಲಸ ಮಾಡಲಾಗುತ್ತಿದೆ, ಹೊರ ರಾಜ್ಯದಿಂದ ಬಂದಿರೋ ಶಂಕೆಯನ್ನು ಸ್ಥಳಿಯ ಶಾಸಕರು ವ್ಯಕ್ತಪಡಿಸಿದ್ದಾರೆ ಆ ಬಗ್ಗೆಯೂ ತನಿಖೆ ಆಗಬೇಕು, ಮೊದಲೇ ರಾಜ್ಯದಲ್ಲಿ ಕಾವೇರಿ ವಿಚಾರದಲ್ಲಿ ಗಲಾಟೆ ಇದೆ, ಮತ್ತೆ ಈ ರೀತಿ ಗಲಾಟೆಯಾದರೇ ಇಡೀ ರಾಜ್ಯಕ್ಕೆ ಗಲಭೆ ಹಬ್ಬಬಹುದು ಎಂದರು.

ವೈಯಕ್ತಿಕ ಕಾರಣಕ್ಕಾಗಿ ನಾನು ದೆಹಲಿಗೆ ಬಂದಿದ್ದೆನೆ, ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಬಂದಿಲ್ಲ, ವಿರೋಧ ಪಕ್ಷ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ನಾನಂತು ಯಾವುದೇ ಆಸೆ ಇಲ್ಲದೆ ಪಕ್ಷದ ಕೆಲಸ ಮಾಡುತ್ತಿದ್ದೇನೆ, ಪಕ್ಷದ ವರಿಷ್ಠರು ರಾಜ್ಯದ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಯಾರಿಗೆ ಕೊಟ್ಟರು ಅವರ ಜೊತೆಗೆ ಕೆಲಸ ಮಾಡುತ್ತೇನೆ. ಆಯ್ಕೆಯ ವಿಳಂಬಕ್ಕೆ ಹೈಕಮಾಂಡ್ ಬಳಿ ಸೂಕ್ತ ಕಾರಣ ಇರುತ್ತೆ ಎಂದರು. ಹೆಚ್‌.ಡಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಮಾಡುತ್ತಾರೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಶಿವಮೊಗ್ಗದಲ್ಲಿ ಕೋಮು ಸಂಘರ್ಷ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೇ ಕಿಡಿ ರಾಜ್ಯಕ್ಕೆ ಹಬ್ಬಬಹುದುಬಿ.ವೈ ವಿಜಯೇಂದ್ರ

Previous Post
ನವದೆಹಲಿಯ ಕರ್ನಾಟಕ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಆಚರಣೆ
Next Post
233 ಗ್ರಾಮ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ

Recent News