ಶೀಘ್ರವೇ ನೂರಾರು ಇವಿ ಬಸ್ ಕಾರ್ಯಾಚರಣೆ, ಟೆಂಡರ್ ಆಹ್ವಾನ

ಶೀಘ್ರವೇ ನೂರಾರು ಇವಿ ಬಸ್ ಕಾರ್ಯಾಚರಣೆ, ಟೆಂಡರ್ ಆಹ್ವಾನ

ಬೆಂಗಳೂರು, ಜನವರಿ 28: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಮುಂದಿನ ಕೆಲವೇ ದಿನಗಳಲ್ಲಿ ಪರಿಸರ ಸ್ನೇಹಿ ನೂರಾರು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿಕ್ AC ಬಸ್‌ಗಳನ್ನು ಓಡಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕೆಲವು ಬಸ್‌ಗಳ ಟೆಂಡರ್ ಆಹ್ವಾನಿಸಿದೆ. ಡೀಸೆಲ್‌ ಸಹಿತ ಬಸ್‌ಗಳಿಂದ ನಿಗಮವು ಆದಷ್ಟು ಶೀಘ್ರವೇ ಮುಕ್ತಗೊಳ್ಳಲಿದೆ. ನಿಗಮಕ್ಕೆ ನಷ್ಟ ಕಡಿಮೆ ಮಾಡುವ ಈ ನೂತನ ಎಲೆಕ್ಟ್ರಿಕ್ ಬಸ್‌ಗಳತ್ತ ಬಿಎಂಟಿಸಿ ಮುಖ ಮಾಡಿದೆ. ವರ್ಷದಿಂದ ವರ್ಷಕ್ಕೆ ಇ-ಬಸ್‌ಗಳ ಖರೀದಿ, ಕಾರ್ಯಾಚರಣೆ ಹೆಚ್ಚಾಗುತ್ತಿದೆ. ಬಿಎಂಟಿಸಿ ಸಂಸ್ಥೆಯ 470 ವಿದ್ಯುತ್‌ ಚಾಲಿತ ಬಸ್‌ಗಳು ನಗರದಲ್ಲಿ ಸೇವೆ ನೀಡುತ್ತಿವೆ.

ಬಸ್ ಖರೀದಿಗೆ ಟೆಂಡರ್ ಆಹ್ವಾನ ಬಿಎಂಟಿಸಿಗೆ ಒಪ್ಪಂದದಂತೆ ಟಾಟಾ ಕಂಪನಿಯು 921 ಇವಿ ಬಸ್‌ಗಳನ್ನು ಪೂರೈಸುತ್ತಿದೆ. ಈ ಮಧ್ಯೆ ಬಿಎಂಟಿಸಿಯು ಒಟ್ಟು 120 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ನಿಗಮ ಟೆಂಡರ್‌ ಆಹ್ವಾನಿಸಿದೆ. ಇವು ಸೇರಿದಂತೆ ಒಟ್ಟು 320 ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡಲು ನಿಗಮ ಪ್ಲಾನ್ ಮಾಡಿದೆ. ಇದೀಗ ಮೊದಲ ಹಂತದಲ್ಲಿ ಟೆಂಡರ್ ಕರೆದಿದೆ.

ಇವಿ ಬಸ್‌ಗಳು ಬೆಂಗಳೂರಿನಲ್ಲಿ ಮಾಲಿನ್ಯ ರಹಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಖುರ್ಚು ಅಧಿಕವಾಗಿರುವ ಡೀಸೆಲ್ ಬಸ್‌ ಬಿಟ್ಟು ಇವಿ ಬಸ್‌ಗಳನ್ನು ಓಡಿಸಲು ನಿಗಮ ಸಿದ್ಧತೆ ಆರಂಭಿಸಿದೆ. ಈ ಬಸ್‌ಗಳಿಂದ ನಷ್ಟ ಕಡಿಮೆ ಎನ್ನಲಾಗಿದೆ. ಎಸಿ ಇವಿ ಬಸ್‌ ಖರೀದಿಗೆ ನೆರವಿನ ಮಾಹಿತಿ ಬಿಎಂಟಿಸಿಗೆ 120 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌) ರಾಜ್ಯ ನಗರ ಸಾರಿಗೆ ನಿಧಿಯಡಿ 15 ಕೋಟಿ ರೂ. ನೆರವು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ಟೆಂಡರ್‌ ಆಹ್ವಾನಿಸಿದೆ. ಇವುಗಳನ್ನು ಮೆಟ್ರೋ ಫೀಡರ್‌ ಬಸ್‌ಗಳಾಗಿ ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ.

ಇನ್ನೂ ಮೊದಲ ಭಾರಿಗೆ ಬಿಎಂಟಿಸಿಯು 320 ಎಸಿ ಇ-ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ರಸ್ತೆಗೆ ಇಳಿಸಲು ನಿರ್ಧರಿಸಿದೆ. ಅದಕ್ಕಾಗಿ ರಾಜ್ಯ ಸರ್ಕಾರವೇ ವಿಶೇಷ ಯೋಜನೆಯಡಿ ಸುಮಾರು 150 ಕೋಟಿ ರೂಪಾಯಿ ಹಣದ ನೆರವು ಒದಗಿಸಿದೆ. ದೂರದ ಮಾರ್ಗಕ್ಕೆ ಇವಿ ಬಸ್ ಸಂಚಾರ ಬಿಎಂಟಿಸಿ ಬೆಂಗಳೂರಿನಲ್ಲಿ ಸುಮಾರು 800ಕ್ಕೂ ಹೆಚ್ಚು ಹವಾನಿಯಂತ್ರಿತ ವೋಲ್ವೊ, ವಾಯುವಜ್ರ ಬಸ್‌ಗಳನ್ನು ಓಡಿಸುತ್ತಿದೆ. ಇವುಗಳನ್ನು ಬಹುತೇಕ ಬಸ್‌ಗಳು ಬೆಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಐಟಿಪಿಎಲ್, ವೈಟ್‌ಫೀಲ್ಡ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಬಿಎಂಟಿಸಿ ಭವಿಷ್ಯದ ದೃಷ್ಟಿಯಿಂದ ಡೀಸೆಲ್‌ ಸಹಿತ ಬಸ್‌ಗಳನ್ನು ಇವಿಗೆ ಬದಲಾಯಿಸಲು ಯೋಜನೆ ರೂಪಿಸಲಾಗಿದೆ. ಹೀಗಾಗಿ ನೂರಾರು ಬಸ್‌ಗಳನ್ನು ಮುಂದಿನ ದಿನಗಳಲ್ಲಿ ರಸ್ತೆಗೆ ಇಳಿಸಲು ಬಿಎಂಟಿಸಿ ಸಜ್ಜಾಗಿದೆ. 320 ಎಸಿ ಇ-ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್‌ ಕರೆಯಲಾಗಿದೆ. ಎಂಟು ಕಡೆಗಳಲ್ಲಿ ಚಾರ್ಜಿಂಗ್ ಮಾಡಬಹುದು ನಗರದ ಎಂಟು ಘಟಕಗಳಲ್ಲಿ ಇ-ಬಸ್‌ಗಳು ಚಾರ್ಜಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ. ಅದಕ್ಕಾಗಿ ಪ್ರತಿ ಡಿಪೋದಲ್ಲಿ ಒಟ್ಟು 14-15 ಚಾರ್ಜಿಂಗ್‌ ಘಟಕಗಳನ್ನು ಅಳವಡಿಸಲಾಗುತ್ತಿದೆ. ಮೆಜೆಸ್ಟಿಕ್, ಶಿವಾಜಿನಗರ, ಬಿಟಿಎಂ ಲೇಔಟ್‌, ಕೆ.ಆರ್‌. ಮಾರುಕಟ್ಟೆ ಹಾಗೂ ಹೆಬ್ಬಾಳ ಬಸ್‌ ನಿಲ್ದಾಣದಲ್ಲೂ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತಿದೆ. ಬಿಎಂಟಿಸಿ ಒಟ್ಟು ಇವಿ ಬಸ್‌ ಸಂಖ್ಯೆ? ಸ್ಮಾರ್ಟ್‌ ಸಿಟಿ ಯೋಜನೆ ಹಾಗೂ ಕೇಂದ್ರ ಸರ್ಕಾರ ಫೇಮ್-2 ಯೋಜನೆಯಡಿ ಸಹಾಯಧನ ಪಡೆದು ಗುತ್ತಿಗೆ ಆಧಾರದ ಮೇಲೆ 390 ಎಲೆಕ್ಟ್ರಿಕ್‌ ಬಸ್‌ ಗಳು ಓಡುತ್ತಿವೆ. ಟಾಟಾ ಕಂಪನಿಯು 921 ಬಸ್‌ಗಳ ಪೈಕಿ 100 ಪೂರೈಸಿದೆ. ಉದ್ದೇಶಿತ ಎಲ್ಲ ಬಸ್‌ಗಳನ್ನು ಮುಂದಿನ ಕೆಲವೇ ತಿಂಗಳಲ್ಲಿ ಪೂರೈಕೆ ಆಗಲಿದೆ ಎಂದು ಕಂಪನಿ ತಿಳಿಸಿದೆ. 9 ಮೀಟರ್‌ ಉದ್ದದ 120 ಇ-ಬಸ್‌ಗಳು ಹಾಗೂ 320 ಎಸಿ ಇ-ಬಸ್‌ಗಳು ಸೇರ್ಪಡೆಯಾದರೆ, ಸಾರಿಗೆ ಸಂಸ್ಥೆಯ ಒಟ್ಟು ಇ-ಬಸ್‌ಗಳ ಬಲವು 1,750 ತಲುಪಲಿದೆ.

Previous Post
ಸರ್ಕಾರದ ವಿರುದ್ಧ ಬಿಜೆಪಿ ಮತ್ತೆ ಪ್ರತಿಭಟನೆ: ಜ.29ಕ್ಕೆ ಕೋಲಾರದಲ್ಲಿ ಆಯೋಜನೆ, ಕಾರಣವೇನು?
Next Post
ಆಸ್ಟ್ರೇಲಿಯನ್ ಓಪನ್ ಗೆದ್ದು ಹೊಸ ಇತಿಹಾಸ ಬರೆದ ಕರ್ನಾಟಕದ ರೋಹನ್ ಬೋಪಣ್ಣ

Recent News