ಶ್ರೀರಾಮ ಮಂದಿರದ ಸಾರ್ವಜಕರ ಪ್ರವೇಶಕ್ಕೆ ದಿನಾಂಕ ಫಿಕ್ಸ್

ಶ್ರೀರಾಮ ಮಂದಿರದ ಸಾರ್ವಜಕರ ಪ್ರವೇಶಕ್ಕೆ ದಿನಾಂಕ ಫಿಕ್ಸ್

ಬೆಂಗಳೂರು, ಜನವರಿ 15: ಭಾರತೀಯರು ಬಹುಕಾತರದಿಂದ ಕಾಯುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರ  ಉದ್ಘಾಟನೆಯು ಜನವರಿ 22ರಂದು ನಡೆಯಲಿದೆ. ಸಾವಿರಾರು ಮಂದಿ ಅತಿಥಿಗಳು ಈ ಭವ್ಯ ಸಮಾರಂಭದಲ್ಲಿ ಪಾಳ್ಗೊಳ್ಳಲಿದ್ದಾರೆ. ಹಾಗಾದರೆ ಭಕ್ತರಿಗೆ ಯಾವಾಗ ಶ್ರೀರಾಮ ದರ್ಶನಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಹೌದು, ರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಮನ ಭಕ್ತಗಣದಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿದೆ. ಕರ್ನಾಟಕ ಸೇರಿದಂತೆ ದೂರ ದೂರದ ರಾಜ್ಯಗಳ ಜನರು, ಹಿಂದೂಗಳು, ರಾಮ ಭಕ್ತರು ಅಯೋಧ್ಯೆಗೆ ತೆರಳಲು ಕಾತರರಾಗಿದ್ದಾರೆ. ಅವರ ಈ ಕಾಯುವಿಕೆಯು ಜನವರಿ 23ರಿಂದಲೇ ಅಂತ್ಯಗೊಳ್ಳಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧಿಕೃತ ಮಾಹಿತಿ ನೀಡಿದೆ.

ಈ ಕುರಿತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಮಾಹಿತಿ ನೀಡಿದ್ದು, ಅಯೋಧ್ಯೆಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ರಾಮಮೂರ್ತಿ ಪ್ರತಿಷ್ಠಾಪನೆಗೊಂಡ ಮರು ದಿನವೇ ರಾಮಭಕ್ತರಿಗೆ ಅಯೋಧ್ಯೆ ರಾಮಮಂದಿರ ಮುಕ್ತಗೊಳ್ಳಲಿದೆ ಎಂದರು.

ಮಂದಿರ ಉದ್ಘಾಟನೆ ಬಳಿಕ ಭಕ್ತರಲ್ಲಿ ಹೆಚ್ಚಳ ಜನವರಿ ವಿಮಾನಗಳ ದರ ಏರಿಕೆ ಆಗಿವೆ ಎನ್ನಲಾಗಿದೆ. ಕಾರಣ ರಾಮ ಭಕ್ತರು ಉತ್ತರ ಪ್ರದೇಶ ರಾಜ್ಯದತ್ತ ಮುಖ ಮಾಡಿದ್ದಾರೆ. ವಿವಿಧ ರಾಜ್ಯಗಳ ಜನರು ರೈಲಿನ ಮೂಲಕವಾಗಿಯು ಆಗಮಿಸುತ್ತಿದ್ದಾರೆ. ಮಂದಿರ ಉದ್ಘಾಟನೆ ಬಳಿಕ ಭಕ್ತರ ಆಗಮಿಸುವಿಕೆ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆಗಳು ಇವೆ.

ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಇದರಲ್ಲಿ ಸುಮಾರು 7000ಕ್ಕೂ ಅಧಿಕ ಅತಿಥಿಗಳು ಭಾಗಿಯಾಗಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಕಾರ್ಯಕ್ರಮ ಕಣ್ತುಂಬಿಕೊಳ್ಳಲಿದ್ದಾರೆ. ಈ ಸಂಬಂಧ ಎಲ್ಲ ತಯಾರಿಗಳು ನಡೆದಿವೆ.

ಜನವರಿ 16ರಿಂದಲೇ ಧಾರ್ಮಿಕ ಕಾರ್ಯ ಶುರು ಸಂಕ್ರಾಂತಿ ನಂತರ ಅಂದರೆ ಜನವರಿ 16ರಿಂದ ಅಯೋಧ್ಯೆಯಲ್ಲಿ ಎಲ್ಲ ವಿಧದ ಧಾರ್ಮಿಕ ಕೈಂಕರ್ಯಗಳು ಆರಂಭಗೊಳ್ಳಲಿವೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೂ ನಾಲ್ಕು ದಿನಗಳು ಮೊದಲ ವಿಗ್ರವು ಗರ್ಭಗುಡಿ ಸೇರಲಿದೆ. ವಿಶೇಷ ಪೂಜೆಗಳು, ಹವನಗಳು ನೆರವೇರಲಿವೆ. ನಂತರ ಜನವರಿ 22ರಂದು ಸೋಮವಾರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಜತೆಗೆ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಹಿಂದೂಗಳು ಸೇರಿದಂತೆ ಭಾರತೀಯರ ಶತಮಾನಗಳ ಕನಸು ನನಸಾಗಲಿದೆ. ಜೊತೆಗೆ ಉತ್ತರ ಪ್ರದೇಶವು ಮಹತ್ತರ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ರಾಮಮಂದಿರ ಆಮಂತ್ರಣ ಪತ್ರಿಕೆ, ಅರತಕ್ಷತೆ ಭಕ್ತರಿಗೆ ವಿವಿಧ ಹಿಂದುಪರ ಸಂಘಟನೆಗಳೂ, ಕರಸೇವಕರು, ಕಾರ್ಯಕರ್ತತರು ಮನೆ ಮನೆಗೆ ತೆರಳು ತಲುಪಿಸಿದ್ದಾರೆ.

Previous Post
ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಸಾರಿದೆಯಾ ಬ್ರಿಟನ್?
Next Post
ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್

Recent News