ಸಂಕ್ರಾಂತಿಗೆ ಸಿಹಿ ಸುದ್ದಿ: 6 ದಿನದಿಂದ ಚಿನ್ನ ದರ ಇಳಿಕೆ, ಜ.12ರ ಚಿನ್ನ-ಬೆಳ್ಳಿ ದರ ಪಟ್ಟಿ, ಮಾಹಿತಿ

ಸಂಕ್ರಾಂತಿಗೆ ಸಿಹಿ ಸುದ್ದಿ: 6 ದಿನದಿಂದ ಚಿನ್ನ ದರ ಇಳಿಕೆ, ಜ.12ರ ಚಿನ್ನ-ಬೆಳ್ಳಿ ದರ ಪಟ್ಟಿ, ಮಾಹಿತಿ

ಬೆಂಗಳೂರು, ಜನವರಿ 12: ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಚಿನ್ನ ಖರೀದಿಸುವವರಿಗೆ ಸಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ. ಇತ್ತೀಚೆಗೆ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳ ದರಗಳಲ್ಲಿ ಇದೀಗ ಹೆಚ್ಚಳ ಆಗದೇ, ಮತ್ತಷ್ಟು ಇಳಿಕೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಚಿನ್ನ ಬೆಲೆಯು ಕಳೆದ ಒಂಬತ್ತು, ದಿನಗಳಲ್ಲಿ ಒಮ್ಮೆಯು ಬೆಲೆ ಏರಿಕೆ ಆಗಿಲ್ಲ. ಬದಲಾಗಿ ತುಸು ಇಳಿಕೆ ಆಗುತ್ತಲೇ ಬಂದಿದೆ. ಈವರೆಗಿನ ಮಾಹಿತಿ ಪ್ರಕಾರ ಚಿನ್ನವು ಆರು ಭಾರಿ ಇಳಿಕೆ ಆಗಿದೆ. ಇನ್ನೂ ಜಾಗತಿಕವಾಗಿ ಚಿನ್ನದ ದರ ಯಥಾ ಸ್ಥಿತಿಯಲ್ಲಿದ್ದು, ಬೇಡಿಕೆ ಏರಿಕೆ ಆಗುವ ಲಕ್ಷಣ ಕಂಡು ಬಂದಿದೆ.

ಜನವರಿ 12ರಂದು ಶುಕ್ರವಾರ 22 ಕ್ಯಾರೆಟ್ ಚಿನ್ನದ (10ಗ್ರಾಂ) ಬೆಲೆ 57,600 ರೂಪಾಯಿ ಇದ್ದರೆ, 24 ಕ್ಯಾರೇಟ್ ಚಿನ್ನದ (ಅಪರಂಜಿ) ಬೆಲೆ 62,830 ನಷ್ಟಿದೆ. 100 ಗ್ರಾಂ ಬೆಳ್ಳಿ ಬೆಲೆ 7600 ರೂಪಾಯಿ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳು ಮತ್ತು ವಿದೇಶಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ.

10 ದಿನದ ಚಿನ್ನದ ಬೆಲೆ ಇಳಿಕೆ-ಹೋಲಿಕೆ ಈ ಹಿಂದಿನ ಹತ್ತು ದಿನಗಳ ತಟಸ್ಥವಾಗಿದ್ದ ಚಿನ್ನದ ದರ ಕಳೆದ ಆರು ದಿನಗಳಿಂದ ಈವರೆಗೆ ಇಳಿಕೆ ಆಗುತ್ತಲೇ ಬಂದಿದೆ. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು (ಜ.12) 22 ಕ್ಯಾರೆಟ್‌ ಚಿನ್ನದ ದರ 115 ರೂ.ನಷ್ಟು ವ್ಯತ್ಯಾಸ ಕಂಡು ಬಂದಿದೆ. ಕಳೆದ ಜನವರಿ 2 ರಂದು 1 ಗ್ರಾಂ ಚಿನ್ನದ ಚಿನ್ನದ ಬೆಲೆ 5,875 ರೂಪಾಯಿ ಇತ್ತು. ಇಂದು 5,760 ರೂಪಾಯಿ ಇದೆ. ಜನವರಿ 2 ರಂದು 24 ಕ್ಯಾರೆಟ್‌ಗೆ 6,409 ರೂಪಾಯಿ ಕಂಡು ಬಂದಿತ್ತ, ಇಂದು 6,283 ರೂಪಾಯಿ ದರ ನಿಗದಿ ಆಗಿದೆ. ಇಂದಿನ ಬೆಳ್ಳಿಯ ಬೆಲೆ ಮಾಹಿತಿ * ಶುಕ್ರವಾರ 1 ಗ್ರಾಂ ಬೆಳ್ಳಿ- 73.50 ರೂಪಾಯಿ * 8 ಗ್ರಾಂ ಬೆಳ್ಳಿ- 588 ರೂಪಾಯಿ * 10 ಗ್ರಾಂ ಬೆಳ್ಳಿ- 735 ರೂಪಾಯಿ * 100 ಗ್ರಾಂ ಬೆಳ್ಳಿ- 7,350 ರೂಪಾಯಿ * 1 ಕಿಲೋ ಬೆಳ್ಳಿಗೆ- 73,500 ರೂಪಾಯಿ ಇದೆ. ದೇಶದ ಮಹಾನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಪಟ್ಟಿ ಬೆಂಗಳೂರಲ್ಲಿ (10 ಗ್ರಾಂ) ಚಿನ್ನದ ದರ: 57,600 ರೂಪಾಯಿ ಚೆನ್ನೈ: 58,100 ರೂಪಾಯಿ ಮುಂಬೈ: 57,600 ರೂಪಾಯಿ ದೆಹಲಿ: 57,750 ರೂಪಾಯಿ ಅಹ್ಮದಾಬಾದ್: 57,650 ರೂಪಾಯಿ ಜೈಪುರ್: 57,750 ರೂಪಾಯಿ ಲಕ್ನೋ: 57,750 ರೂಪಾಯಿ ಭುವನೇಶ್ವರ್: 57,600 ರೂಪಾಯಿ ಕೋಲ್ಕತಾ: 57,600 ರೂಪಾಯಿ ಕೇರಳ: 57,600 ರೂಪಾಯಿ ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಸೌದಿ ಅರೇಬಿಯಾ: 52,476 ರೂಪಾಯಿ ಓಮನ್: 53,953 ರೂಪಾಯಿ ಮಲೇಷ್ಯಾ: 54,176 ರೂಪಾಯಿ ದುಬೈ: (52,053 ರೂಪಾಯಿ ಅಮೆರಿಕ: 52,312 ರೂಪಾಯಿ ಕುವೇತ್: 53,235 ರೂಪಾಯಿ ಸಿಂಗಾಪುರ: 52,767 ರೂಪಾಯಿ ಕತಾರ್: 53,926 ರೂಪಾಯಿ ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ ಬೆಂಗಳೂರು: 7,350 ರೂಪಾಯಿ ದೆಹಲಿ: 7,600 ರೂಪಾಯಿ ಕೋಲ್ಕತಾ: 7,600 ರೂಪಾಯಿ ಜೈಪುರ್: 7,600 ರೂಪಾಯಿ ಲಕ್ನೋ: 7,600 ರೂಪಾಯಿ ಚೆನ್ನೈ: 7,750 ರೂಪಾಯಿ ಮುಂಬೈ: 7,600 ರೂಪಾಯಿ ಭುವನೇಶ್ವರ್: 7,750 ರೂಪಾಯಿ ಕೇರಳ: 7,750 ರೂಪಾಯಿ ಅಹ್ಮದಾಬಾದ್: 7,600 ರೂಪಾಯಿ

Previous Post
ದೆಹಲಿಯಲ್ಲೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿ ಬಗ್ಗೆ ಚರ್ಚೆ?
Next Post
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ

Recent News