ಸಮಸ್ಯೆ ಪರಿಹಾರಕ್ಕಾಗಿ ನಾವು ಮಾತುಕತೆಗೆ ಸಿದ್ಧ ದೆಹಲಿ ಚೆಲೋ ಹೋರಾಟದ ಬಗ್ಗೆ ಕೃಷಿ ಸಚಿವ ಅರ್ಜುನ್ ಮುಂಡಾ ಪ್ರತಿಕ್ರಿಯೆ

ಸಮಸ್ಯೆ ಪರಿಹಾರಕ್ಕಾಗಿ ನಾವು ಮಾತುಕತೆಗೆ ಸಿದ್ಧ ದೆಹಲಿ ಚೆಲೋ ಹೋರಾಟದ ಬಗ್ಗೆ ಕೃಷಿ ಸಚಿವ ಅರ್ಜುನ್ ಮುಂಡಾ ಪ್ರತಿಕ್ರಿಯೆ

ನವದೆಹಲಿ : ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ, ರೈತ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದು, ಕೆಲ ವಿಚಾರಗಳಲ್ಲಿ ಒಮ್ಮತ ಮೂಡಿದರೆ ಇನ್ನು ಕೆಲ ವಿಚಾರಗಳಲ್ಲಿ ಒಮ್ಮತ ಮೂಡಿಲ್ಲ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಮುಂದಿನ ಸಭೆಗಳಿಗೂ ನಾವು ಸಿದ್ಧರಿದ್ದೇವೆ. ರೈತರಿಗಾಗಿ ನಮ್ಮ ಬಾಗಿಲು ತೆರೆದಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ.

ದೆಹಲಿ ಚೆಲೋ ರೈತ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಕೆಲವರಿಗೆ ಪರಿಹಾರ ಸಿಗುವುದು ಬೇಡವಾಗಿದೆ ಹೀಗಾಗಿ ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಇಂತಹವರನ್ನು ಜೊತೆಗೆ ಸೇರಿಸಿದಂತೆ ರೈತರಲ್ಲಿ ಮನವಿ ಮಾಡುತ್ತೇನೆ, ನಮ್ಮ ಸರ್ಕಾರ ರೈತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು‌.

ಪ್ರತಿಯೊಂದು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು, ಸರ್ಕಾರವೂ ತನ್ನದೇ ಆದ ವಿಧಾನ ಮತ್ತು ಮಾನದಂಡಗಳನ್ನು ಹೊಂದಿದೆ ಎಂಬುದನ್ನು ರೈತರು ಮತ್ತು ಅವರ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು. ಹಲವು ವಿಷಯಗಳು ರಾಜ್ಯಗಳಿಗೆ ಸಂಬಂಧಿಸಿವೆ ಹೀಗಾಗೀ ರಾಜ್ಯಗಳ ಜೊತೆಗೆ ಚರ್ಚೆ ನಡೆಸಬೇಕು. ಇದಾದ ಬಳಿಕ ಮತ್ತೆ ಸಂಘಟನೆಗಳೊಂದಿಗೆ ಚರ್ಚೆ ನಡೆಸಬೇಕಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮುಂದುವರಿದು ಸಂಘಟನೆಗಳು ಎಂಎಸ್‌ಪಿ ಬಗ್ಗೆ ಏನು ಮಾತನಾಡುತ್ತಿವೆ, 2013-14ಕ್ಕೆ ಹೋಲಿಸಿದರೆ 2023 ಮತ್ತು 24ರಲ್ಲಿ ಎಂಎಸ್‌ಪಿ ದರ ಎಷ್ಟಿದೆ ಎಂಬುದನ್ನು ಅವರು ನೋಡಬೇಕು. ರೈತರ ಬೆಳೆಗೆ ಸಂಪೂರ್ಣ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯ. ಎಂಎಸ್‌ಪಿ ವಿಚಾರದಲ್ಲಿ ಎಲ್ಲವೂ ತಕ್ಷಣವೇ ಸಿಗಬೇಕು ಎಂದು ಹೇಳುವುದು ರಾಜಕೀಯ ಪ್ರೇರಿತವಾಗಿರಬಾರದು ಎಂದು ಹೇಳಿದರು‌.

Previous Post
ರಾಜ್ಯದಲ್ಲಿ ₹50 ಸಾವಿರ ಕೋಟಿ ಹೂಡಿಕೆ, 58 ಸಾವಿರ ಉದ್ಯೋಗಸೃಷ್ಟಿ: ಎಂ ಬಿ ಪಾಟೀಲ
Next Post
ರೈತರ ಹೋರಾಟಕ್ಕೆ ಕಾಂಗ್ರೇಸ್ ಬೆಂಬಲ – ಖರ್ಗೆ ಘೋಷಣೆ

Recent News