‘ಹತ್ತು ವರ್ಷ ಅನ್ಯಾಯದ ಕಾಲ’ ಮೋದಿ ಸರ್ಕಾರದ ವಿರುದ್ಧ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ ಕಾಂಗ್ರೇಸ್

‘ಹತ್ತು ವರ್ಷ ಅನ್ಯಾಯದ ಕಾಲ’ ಮೋದಿ ಸರ್ಕಾರದ ವಿರುದ್ಧ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ ಕಾಂಗ್ರೇಸ್

ಬೆದರಿಸುವ ತಂತ್ರ ನಡೆಯಲ್ಲ | ಪ್ರಜಾಪ್ರಭುತ್ವ ಅಪಾಯದಲ್ಲಿದೆ | ಮಲ್ಲಿಕಾರ್ಜುನ್ ಖರ್ಗೆ ಆರೋಪ

ನವದೆಹಲಿ : ಯುಪಿಎ ಸರ್ಕಾರದ ಆರ್ಥಿಕ ಸಾಧನೆಗಳೊಂದಿಗೆ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಹೋಲಿಕೆ ಮಾಡಿ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಳುತ್ತಿದ್ದು ಈ‌ ನಡುವೆ ಕಾಂಗ್ರೇಸ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬ್ಲಾಕ್ ಪೇಪರ್ ಪ್ರಕಟಿಸಿದೆ. ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ನಾವು ಇದನ್ನು ಪ್ರಶ್ನಿಸಿದಾಗ ಅದಕ್ಕೆ ಮಹತ್ವ ನೀಡಲ್ಲ ಹೀಗಾಗಿ ಮೋದಿ ಸರ್ಕಾರ ವಿರುದ್ಧ ಕಪ್ಪುಪತ್ರ ( ಬ್ಲಾಕ್ ಪೇಪರ್ ) ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೋದಿ ಸರ್ಕಾರದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ ಇದರ ಬಗ್ಗೆ ಬಿಜೆಪಿ ಸರ್ಕಾರ ಮಾತನಾಡಲ್ಲ, ಮಾಜಿ ಪ್ರಧಾನಿ ಜವಹಾರ್‌ಲಾಲ್‌ ನೆಹರು ಕಾಲದಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಿಸಲಾಯಿತು ಜನರಿಗೆ ಉದ್ಯೋಗ ನೀಡಲಾಯಿತು ಆದರೆ ಮೋದಿ ಸರ್ಕಾರದಲ್ಲಿ ಆ ರೀತಿಯ ಸಂಸ್ಥೆಗಳನ್ನು ಸ್ಥಾಪನೆ ಮಾಡಲಿಲ್ಲ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸಿದರು. ತೆರಿಗೆ ಅನುದಾನದಲ್ಲಿ ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ, ನರೇಗಾದ ಅನುದಾನವನ್ನು ನೀಡುತ್ತಿಲ್ಲ, ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಲಾಗುತ್ತಿದೆ, ಆ ಮೇಲೆ ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪಿಸುತ್ತಾರೆ, ಉದ್ದೇಶ ಪೂರ್ವಕವಾಗಿ ಅವರು ಹಣ ಕೊಡಬಾರದು ಎಂದು ನಿರ್ಧರಿಸಿದ್ದಾರೆ ಎಂದರು.

ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ, ಲೋಕಸಭೆಯಲ್ಲಿ ನಿಂತು ಮೋದಿ ಅವರು ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ, ನೀವು ಈಗ ಆಡಳಿತ ನಡೆಸುತ್ತಿದ್ದೀರಿ, ಈಗ ಏನ್ ಮಾಡುತ್ತಿದ್ದೀರಿ ಹೇಳಬೇಕು ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದಾರೆ ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎನ್ನುವ ಕಾನೂನು ಇದೆ ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ.

ರೈತರು ಧರಣಿ ಕೂತಿದ್ದರು, ಒಂದು ವರ್ಷ ಪ್ರತಿಭಟನೆ ನಡೆಸಿದರು, ಮೂರು ಕಾನೂನು ತಂದು ಮತ್ತೆ ವಾಪಸ್ ಪಡೆದರು, ರೈತರನ್ನು ಸಂಕಷ್ಟದಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ, ಬೆಂಬಲ ಬೆಲೆ ಹೆಚ್ಚಿಸುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು ಈವರೆಗೂ ಅದು ಆಗಿಲ್ಲ ಸಂಸತ್ ನಲ್ಲಿ ಮಾತೂ ಆಡಲ್ಲ ಅವರ ಎಲ್ಲ ಭರವಸೆ ಸುಳ್ಳಾಗಿದೆ, ಕೃಷಿ ಬಳಕೆ ವಸ್ತುಗಳ ಮೇಲೆ‌ ಜಿಎಸ್ಟಿ ಹಾಕಲಾಗಿದೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಬೇಕಿತ್ತು ನೀಡಿಲ್ಲ

ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ, ಬುಡಕಟ್ಟು ಸಮುದಾಯವನ್ನು ರಾಷ್ಟ್ರಪತಿ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ, ಇದು ಎಲ್ಲ ಸರ್ಕಾರದಲ್ಲೂ ಆಗುತ್ತಿದೆ ಎಲ್ಲ ವರ್ಗಗಳನ್ನು ಎಲ್ಲ ವಲಯದಲ್ಲಿ ಸೇರಿಸಿಕೊಳ್ಳಬೇಕು, ಆದರೆ ಇದು ಯಾವುದು ಆಗುತ್ತಿಲ್ಲ ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾ ಮಾಡಲಾಗುತ್ತಿದೆ ಅದರ ಬದಲು ಸಣ್ಣ ಸಣ್ಣ ಉದ್ಯಮಗಳಿಗೆ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ, ಚುನಾವಣೆ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ, ಇಡಿ ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ ಮೊದಲು ಯಾಕೆ ಇಷ್ಟು ಪ್ರಮಾಣದ ಹಣ ಬರ್ತಿರಲಿಲ್ಲ ಈಗ್ಯಾಕೆ ಹಣ ಹೆಚ್ಚು ಬಿಜೆಪಿಗೆ ಬರ್ತಿದೆ ಕೋಟ್ಯಾಂತರ ಹಣ ನೀಡಿ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ, ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ನನ್ನ ವಿರುದ್ಧ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿದೆ ನಾನು ಯಾವುದಕ್ಕೂ ಹೆದರುವುದಿಲ್ಲ ನಮ್ಮ ಕುಟುಂಬದ ಅವಘೆದಲ್ಲಿ ನಾನು ನನ್ನ ಅಪ್ಪ ಇಬ್ಬರೇ ಬದುಕಿದ್ದು, ಇಲ್ಲಿವರೆಗೂ ಬಂದಿದ್ದೇನೆ, ಮುಂದೆ ಏನೇ ಆದರೂ ಹೆದರುವುದಿಲ್ಲ,ದಲಿತನಾಗಿ ಇಲ್ಲಿಯವರೆಗೂ ಬಂದಿದ್ದೇನೆ, ನನ್ನ ಗೌರವದಿಂದ ಕಾಣುತ್ತಾರೆ. ರಾಹುಲ್ ಗಾಂಧಿ, ಸೋನಿಯಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರನ್ನು ಅವಹೇಳನ ಮಾಡುತ್ತಾರೆ, ರಾಹುಲ್ ಗಾಂಧಿ ಅವರನ್ನು ವ್ಯಂಗ್ಯ ಮಾಡ್ತಾರೆ. ಪ್ರಧಾನಮಂತ್ರಿ ಹುದ್ದೆಗೆ ಒಂದು ಗೌರವ ಇದೆ ಅದನ್ನು ಮೋದಿ ನಿಭಾಗಿಸಬೇಕು, ವರ್ತಿಸಬೇಕು, ತಮ್ಮ ಸಾಧನೆಗಳನ್ನು ಹೇಳಬೇಕು, ವಿರೋಧ ಪಕ್ಷದ ನಾಯಕರನ್ನು ಅವಹೇಳನ‌ ಮಾಡಬಾರದು

ತೆರಿಗೆ ಅನ್ಯಾಯ ಇವರದೇ ಪಕ್ಷದವರು ಮಾತನಾಡಿದರೆ ದೇಶ ಒಡೆಯುವ ಮಾತಲ್ಲ, ಇದೇ ಮಾತು ಬೇರೆ ನಾಯಕರು ಹೇಳಿದರೆ ದೇಶ ಒಡೆಯುವ ಮಾತು, ಯಾರು ಮುಖ್ಯಮಂತ್ರಿಯಾಗಿದ್ದಾಗ ದೇಶ ಒಡೆದಿದ್ದು ಯಾರು ದೇಶ ಒಡೆಯುವ ಭಾಷಣ ಮಾಡುವುದು ಯಾರು, ರಾಜ್ಯಪಾಲರನ್ನು ಸರ್ವಾಧಿಕಾರಿಯಂತೆ ವರ್ತಿಸಲು ಬಿಟ್ಟಿದ್ದಾರೆ, ರಾಜ್ಯ ಸರ್ಕಾರ ಫೈಲ್‌ಗಳನ್ನು ಕ್ಲಿಯರ್ ಮಾಡದೇ ಕಿರುಕುಳ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಕಾಂಗ್ರೆಸ್ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಟ ಮಾಡಿದೆ, ಹಿಂದೆ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿ ಭಾರತ ಸ್ವತಂತ್ರ ಮಾಡಿದೆ ಈಗ ಬಿಜೆಪಿ ವಿರುದ್ಧ ಹೋರಾಟ ಮಾಡಿ ಜನರ ಪರ ಕೆಲಸ ಮಾಡುತ್ತೇವೆ ಎಂದರು.

Previous Post
ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಪ್ರಗತಿ ಮೈದಾನ ಸುರಂಗ ಮಾರ್ಗ
Next Post
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡದೆ ಧ್ವನಿ ಅಡಗಿಸುವ ಯತ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ

Recent News